Friday, September 25, 2026
Friday, September 25, 2026

ಕ್ರೀಡೆಯಿಂದ ಉತ್ತಮ ಆರೋಗ್ಯ: ಶೇವಧಿ ಸುರೇಶ್ ಗಾಣಿಗ

ಕ್ರೀಡೆಯಿಂದ ಉತ್ತಮ ಆರೋಗ್ಯ: ಶೇವಧಿ ಸುರೇಶ್ ಗಾಣಿಗ

Date:

ಕೋಟ, ಮಾ.5: ಹರ್ತಟ್ಟು ಫ್ರೆಂಡ್ಸ್ ಇವರ ವತಿಯಿಂದ ಹರ್ತಟ್ಟು ಪ್ರೀಮಿಯರ್ ಲೀಗ್ ೨೦೨೫ ಕ್ರಿಕೆಟ್ ಪಂದ್ಯಾಕೂಟ ಹರ್ತಟ್ಟು ಪರಿಸರದಲ್ಲಿ ನಡೆಯಿತು. ಕೋಟದ ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉದ್ಘಾಟಿಸಿ ಮಾತನಾಡುತ್ತಾ, ಕ್ರೀಡೆಯ ಮೂಲಕ ಉತ್ತಮ ಆರೋಗ್ಯ ಹಾಗೂ ಸಾಧನೆಗೈಯಲು ಸಾಧ್ಯ. ಯುವ ಸಮುದಾಯ ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸಿ ದೇಶದ ಕೀರ್ತಿಯನ್ನು ಹೆಚ್ಚಿಸಲಿ ಆ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದರು. ಹರ್ತಟ್ಟು ಭಾಗದ ಹಿರಿಯ ಕೃಷಿಕ ಬಾಬು ಶೆಟ್ಟಿ, ರೈತಧ್ವನಿ ಸಂಘದ ತಿಮ್ಮ ಕಾಂಚನ್, ಸ್ಥಳೀಯರಾದ ದಿನೇಶ್ ಪೂಜಾರಿ ಹರ್ತಟ್ಟು ಪಂದ್ಯಾಟಕ್ಕೆ ಚಾಲನೆ ನೀಡಿದರು. ಸಂತೋಷ್ ಪೂಜಾರಿ ಹಾಗೂ ಬಾಬಣ್ಣ ನಕ್ಷತ್ರಿ ಮುಂತಾದವರು ಉಪಸ್ಥಿತರಿದ್ದರು. ಹರ್ತಟ್ಟು ಫ್ರೆಂಡ್ಸ್ ನ ಪ್ರಮುಖರಾದ ಆದರ್ಶ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೃತಕ ಬುದ್ಧಿಮತ್ತೆ (ಎಐ), ಬಾಹ್ಯಾಕಾಶ, ಇಂಧನ ಮತ್ತು ಸಂಸ್ಕೃತಿ ಕುರಿತು ಮಹತ್ವದ ಚರ್ಚೆ ನಡೆಸಿದ ಭಾರತ, ಯುಎಇ ಮತ್ತು ಫ್ರಾನ್ಸ್‌

ಯು.ಬಿ.ಎನ್.ಡಿ., ಸೆ.24: ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದ...

ಕುಂದಾಪ್ರ ಕನ್ನಡ: ಭಾಷಾ ವಿಶೇಷತೆ- ವಿಶೇಷ ಉಪನ್ಯಾಸ

ಕುಂದಾಪುರ, ಸೆ.24: ಡಾ. ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...

ಉಡುಪಿಯ ಹಲವೆಡೆ ದಿನವಿಡೀ ಉತ್ತಮ ಮಳೆ

ಉಡುಪಿ, ಸೆ.24: ಉಡುಪಿಯ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ಕಾರ್ಕಳ, ಮಣಿಪಾಲ,...
error: Content is protected !!