ಶಂಕರನಾರಾಯಣ, ಮಾ.2: ಜೆಸಿಐ ಶಂಕರನಾರಾಯಣ ಇದರ ವತಿಯಿಂದ ಈ ವರ್ಷದ ವಲಯದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅಭಿಯಾನದಡಿ ಕಮಲಶಿಲೆ ದೇವಸ್ಥಾನದಲ್ಲಿ 15 ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ ಮೊಗವೀರ ಅವರಿಗೆ ಅಭಿನಂದನಾ ಕಾರ್ಯಕ್ರಮ ಸಮೃದ್ಧಿ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಶಂಕರನಾರಾಯಣದ ಅಧ್ಯಕ್ಷರಾದ ಪ್ರವೀಣ್ ಬಾಳೆಕೊಡ್ಲು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕುಂದಾಪುರದ ವಕೀಲರಾದ ಉಮೇಶ್ ಶೆಟ್ಟಿ ಶಾನ್ಕಟ್ಟು, ಸಮೃದ್ಧಿ ಯುವಕ ಮಂಡಲದ ಅಧ್ಯಕ್ಷರಾದ ನಾರಾಯಣ ಟಿ ಶುಭ ಹಾರೈಸಿದರು. ವೇದಿಕೆಯಲ್ಲಿ ಲೇಡಿ ಜೆ.ಸಿ ಅಧ್ಯಕ್ಷೆ ಪಲ್ಲವಿ ಪ್ರವೀಣ್ ಬಾಳೆಕೊಡ್ಲು, ಜೆಸಿ ಪೂರ್ವಾಧ್ಯಕ್ಷ ರಾಘವೇಂದ್ರ ಚಾತ್ರಮಕ್ಕಿ ಉಪಸ್ಥಿತರಿದ್ದರು. ಹಿಮಾನಿ ಕುಪ್ಪಾರು ಜೆ.ಸಿ ವಾಣಿ ವಾಚಿಸಿದರು.




By
ForthFocus™