Friday, February 28, 2025
Friday, February 28, 2025

ಮಲಬಾರ್ ವಿಶ್ವರಂಗ ಪುರಸ್ಕಾರಕ್ಕೆ ಐವರು ಹಿರಿಯ ರಂಗಕರ್ಮಿಗಳು ಆಯ್ಕೆ

ಮಲಬಾರ್ ವಿಶ್ವರಂಗ ಪುರಸ್ಕಾರಕ್ಕೆ ಐವರು ಹಿರಿಯ ರಂಗಕರ್ಮಿಗಳು ಆಯ್ಕೆ

Date:

ಉಡುಪಿ, ಫೆ.27: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಪ್ರದಾನ ಮಾಡುತ್ತಿರುವ ಆರನೇ ವರ್ಷದ ‘ಮಲಬಾರ್ ವಿಶ್ವರಂಗ ಪುರಸ್ಕಾರ 2025ಕ್ಕೆ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ.

ಅರವಿಂದ ಕುಲಕರ್ಣಿ ಧಾರವಾಡ (ರಂಗ ನಟ, ಸಂಘಟಕ ಹಾಗೂ ನಿರ್ದೇಶಕ), ಗಣೇಶ್ ಕಾರಂತ್ ಬೈಂದೂರು (ರಂಗ ಸಂಘಟಕ ಹಾಗೂ ನಿರ್ದೇಶಕ), ಪ್ರಿಯಾ ಸರೋಜಾದೇವಿ ಮುಂಬೈ (ರಂಗನಟಿ ಹಾಗೂ ಕಂಠದಾನ ಕಲಾವಿದೆ), ಪ್ರಕಾಶ್ ಜಿ. ಕೊಡವೂರು (ರಂಗನಟ ಹಾಗೂ ಸಂಘಟಕ), ಮಂಜುಳಾ ಜನಾರ್ದನ್ ಮಂಗಳೂರು (ರಂಗನಟಿ) ಇವರಿಗೆ ಮಾರ್ಚ್ 26 ರಂದು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಯುವ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕ, ನಗದು ಹಾಗೂ ಬೆಳ್ಳಿ ಪದಕದೊಂದಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ-2025 ಪ್ರದಾನ ಮಾಡಲಾಗುವುದು ಎಂದು ಮಲಬಾರ್ ವಿಶ್ವರಂಗ ಪುರಸ್ಕಾರ ಸಮಿತಿಯ ಸಂಚಾಲಕರಾದ ರಾಜೇಶ್ ಭಟ್ ಪಣಿಯಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬ್ರಹ್ಮಾವರ: ವಾಹನ ಸಂಚಾರದಲ್ಲಿ ಬದಲಾವಣೆ

ಉಡುಪಿ, ಫೆ.27: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು-ಮುಂಡ್ಕಿನಜೆಡ್ಡು-ಕೊಕ್ಕರ್ಣೆ-ನಾಲ್ಕೂರು (ಕೊಕ್ಕರ್ಣೆ- ನಾಲ್ಕೂರು ರಸ್ತೆ)...

ಹೀಟ್ ವೇವ್ (ಶಾಖದ ಹೊಡೆತ): ಸಾರ್ವಜನಿಕರು ರಕ್ಷಿಸಿಕೊಳ್ಳಲು ಸಲಹೆ-ಸೂಚನೆಗಳು

ಉಡುಪಿ, ಫೆ.27: ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ...

ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗ ಅಧ್ಯಕ್ಷರಾಗಿ ಉದಯ ನಾಯ್ಕ್ ಆಯ್ಕೆ

ಉಡುಪಿ, ಫೆ.27: ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗಕ್ಕೆ...

ಪರ್ಕಳ: ಕಲಾ ಸಂಗಮ

ಪರ್ಕಳ, ಫೆ.27: ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ ವತಿಯಿಂದ...
error: Content is protected !!