ವಡ್ಡರ್ಸೆ, ಫೆ.16: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಸಂದರ್ಭದಲ್ಲಿ ರಥಬೀದಿ ಫ್ರೆಂಡ್ಸ್ ವಡ್ಡರ್ಸೆ ದಶಮಾನೋತ್ಸವದ ಸಂಭ್ರಮ 2025 ಮಾರ್ಚ್ 18 ರ ಮಂಗಳವಾರ ರಥಬೀದಿಯಲ್ಲಿ ನಡೆಯಲಿದ್ದು, ಈ ಪ್ರಯುಕ್ತ ಸಭಾ ಕಾರ್ಯಕ್ರಮ ಹಾಗೂ ಜಿಲ್ಲೆಯ ಆಯ್ದ ತಂಡಗಳ ಸಂಗೀತ ಮಹಾಯುದ್ದ ಬಾನ್ದನಿ – 2025 ನಡೆಯಲಿದೆ. ಇದರ ಪೊಸ್ಟರ್ ಬಿಡುಗಡೆಯನ್ನು ಶ್ರೀ ದೇವರ ಸನ್ನಿಧಿಯಲ್ಲಿ ನಡೆಯಿತು.
ಸಂಘದ ಗೌರವಾಧ್ಯಕ್ಷರಾದ ವೇದಮೂರ್ತಿ ರಾಘವೇಂದ್ರ ಭಟ್ಟ ಬನ್ನಾಡಿ, ಅಧ್ಯಕ್ಷ ರಾಜು ಪೂಜಾರಿ ಉಪ್ಲಾಡಿ, ಕಾರ್ಯದರ್ಶಿ ವಡ್ಡರ್ಸೆ ಸಚ್ಚಿದಾನಂದ ಅಡಿಗ, ಕಾರ್ಯಕ್ರಮದ ಪ್ರಧಾನ ಸಂಯೋಜಕ ಶಿಕ್ಷಕ ನರೇಂದ್ರ ಕುಮಾರ ಕೋಟ, ಸತೀಶ್ ವಡ್ಡರ್ಸೆ ಹಾಗೂ ಕೊತ್ತಾಡಿ ವಿಜಯ ಕುಮಾರ ಶೆಟ್ಟಿ, ಕಲಾರಂಗದ ಅಧ್ಯಕ್ಷ ಸಚಿನ್ ಶೆಟ್ಟಿ ಯಾಳಕ್ಲು, ಪದ್ಮನಾಭ ಆಚಾರ್ಯ ಬನ್ನಾಡಿ ಹಾಗೂ ರಥಬೀದಿ ಫ್ರೆಂಡ್ಸ್ನ ಸದಸ್ಯರಾದ ನಾಗೇಂದ್ರ ಅಡಿಗ ವಡ್ಡರ್ಸೆ ಹಾಗೂ ವಾಸು ಬನ್ನಾಡಿ ಉಪಸ್ಥಿತರಿದ್ದರು.