ಕೊಡವೂರು, ಫೆ.15: ಕೊಡವೂರು ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನದ ಶ್ರೀ
ಮನ್ಮಹಾರಥೋತ್ಸವದ ಅಂಗವಾಗಿ ಬೆಳಗ್ಗೆ ರಥಾರೋಹಣ, ಮಧ್ಯಾಹ್ನ ಮಹಾಅನ್ನಸಂತರ್ಪಣೆಯು
ಜರಗಿತು. ದೇಗುಲದ ಪ್ರಧಾನ ತಂತ್ರಿ ವೇ|ಮೂ| ಪುತ್ತೂರು ಹಯವದನ ತಂತ್ರಿ ಮತ್ತು ವಾದಿರಾಜ ತಂತ್ರಿ
ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಪ್ರಸಾದ್ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.
ದೇವರಿಗೆ ಸುತ್ತುಬಲಿ, ಪಲ್ಲಪೂಜೆ ನಡೆದು ರಥಾರೋಹಣ ನಡೆಯಿತು. ಪಿಲಾರ್ ಶ್ರೀಧರ್ ಉಡುಪ ಅವರಿಂದ ಬಲಿಮೂರ್ತಿ ನರ್ತನ ಸೇವೆ ನಡೆಯಿತು. ಮಧ್ಯಾಹ್ನ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸುಮಾರು 6000 ಮಂದಿ ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದರು. ರಾತ್ರಿ ಮಹಾರಥೋತ್ಸವ, ದರ್ಶನ ಸೇವೆ, ಹೂವಿನ ವಿಶೇಷ ಅಲಂಕೃತ ಪಲ್ಲಕ್ಕಿ ಉತ್ಸವ, ಓಲಗ ಮಂಟಪ ಪೂಜೆ, ತೊಟ್ಟಿಲೋತ್ಸವ, ಭೂತಬಲಿ, ಶಯನೋತ್ಸವ, ಕವಾಟ ಬಂಧನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಕೊಡವೂರು ಸದಾನಂದ ಶೇರಿಗಾರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಮಲ್ಪೆ ನಾಗೇಶ್ ಮತ್ತು ಬಳಗದವರಿಂದ ಭಜನಾ ಸೌರಭ, ಸಂಜೆ ಬೆಂಗಳೂರು ಜಯಶ್ರೀ ಅರವಿಂದ್ ಮತ್ತು ಬಳಗದಿಂದ ಭಕ್ತಿ ಗಾನ ಸುಧೆ ನಡೆಯಿತು.
ದೇವಸ್ಥಾನದ ಆಡಳಿತಾಧಿಕಾರಿ ಗುರುಪ್ರಸಾದ್, ಪವಿತ್ರಪಾಣಿ ಗೋವಿಂದ ಐತಾಳ್, ಅಡಿಗ ರಾಘವೇಂದ್ರ ಭಟ್, ಲಕ್ಷ್ಮೀನಾರಾಯಣ ಭಟ್ ಅಗ್ರಹಾರ, ಗುರುರಾಜ್ ರಾವ್ ಪಿ., ಸುಧಿರ್ ರಾವ್ ಕೊಡವೂರು, ಅಡಿಗ ಕೃಷ್ಣಮೂರ್ತಿ ಭಟ್, ಉಮೇಶ್ ಕೊಡವೂರು, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಸಾಧು ಸಾಲ್ಯಾನ್, ಸೇವಾ ಸಮಿತಿಯ ಅಧ್ಯಕ್ಷ ಆನಂದ ಪಿ. ಸುವರ್ಣ, ಭಕ್ತವೃಂದದ ಗೌರವಾಧ್ಯಕ್ಷ ರವಿರಾಜ್ ಹೆಗ್ಡೆ, ಅಧ್ಯಕ್ಷ ಕೆ. ದಿವಾಕರ್ ಶೆಟ್ಟಿ, ಪ್ರಮುಖರಾದ ಜನಾರ್ದನ್ ಕೊಡವೂರು, ಪ್ರಕಾಶ್ ಕೊಡವೂರು, ರಾಮ ಸೇರಿಗಾರ, ಭಾಸ್ಕರ್ ಪಾಲನ್, ನಾಗರಾಜ್ ಸುವರ್ಣ, ಸುಭಾಸ್ ಎಸ್. ಮೆಂಡನ್, ರಾಜ ಸೇರಿಗಾರ, ಸತೀಶ್ ಕೊಡವೂರು, ಹರೀಶ್ ಜಿ. ಕೋಟ್ಯಾನ್, ರತ್ನಾಕರ್ ಅಮೀನ್, ಸುರೇಶ್ ಸೇರಿಗಾರ, ಅನಿಲ್ ಸಾಲ್ಯಾನ್, ಸುಧಾಕರ್ ಕುಂದರ್, ಪ್ರಭಾತ್ ಕೋಟ್ಯಾನ್, ವಿಜಯ ಕೊಡವೂರು, ಕೃಷ್ಣ ಕೋಟ್ಯಾನ್, ಬಾಲಕೃಷ್ಣ ಕೊಡವೂರು, ವಾದಿರಾಜ್, ಗೋವಿಂದ ಪಾಲನ್, ಚಂದ್ರಾವತಿ, ಜೀವನ್ ಕುಮಾರ್ ಪಾಳೆಕಟ್ಟೆ ಮೊದಲಾದವರು ಪಾಲ್ಗೊಂಡಿದ್ದರು.
ಫೆ. 15ರಂದು ರಾತ್ರಿ 9.30ರಿಂದ ಸಾಲಿಗ್ರಾಮ ಮೇಳದವರಿಂದ ಶುಭಲಕ್ಷಣ ಯಕ್ಷಗಾನ ಬಯಲಾಟ ನಡೆಯಲಿದೆ.