ಉಡುಪಿ, ಫೆ.14: ನವ ಉಡುಪಿ ನಿರ್ಮಾಣದ ಹರಿಕಾರ, ರಾಜಕೀಯ ಮುತ್ಸದ್ಧಿ ಕೀರ್ತಿಶೇಷ ಡಾ. ವಿ. ಎಸ್. ಆಚಾರ್ಯ ರವರ ಪುಣ್ಯಸ್ಮರಣೆಯ ಅಂಗವಾಗಿ ಉಡುಪಿ ನಗರಸಭಾ ಕಚೇರಿಯಲ್ಲಿರುವ ಅವರ ಪುತ್ಥಳಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಉಡುಪಿ ನಗರಸಭೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರದ ರಜನಿ ಹೆಬ್ಬಾರ್, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಹರೀಶ್ ಶೆಟ್ಟಿ, ಗಿರಿಧರ ಆಚಾರ್ಯ ಕರಂಬಳ್ಳಿ ಮೊದಲಾದವರು ಉಪಸ್ಥಿತರಿದ್ದರು.