Saturday, January 17, 2026
Saturday, January 17, 2026

ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ ಸಂಭ್ರಮ

ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ ಸಂಭ್ರಮ

Date:

ಉಡುಪಿ, ನ.13: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರು ರಥಬೀದಿಯ ಸುತ್ತಲೂ ಹಣತೆಯನ್ನಿಟ್ಟು ದೀಪೋತ್ಸವಕ್ಕೆ ಚಾಲನೆಯನ್ನು ನೀಡಿದರು.

ಉಡುಪಿಯ ಶ್ರೀ ಕೃಷ್ಣ ಮಠದ ಮಧ್ವ ಸರೋವರದಲ್ಲಿ ಉತ್ಥಾನ ದ್ವಾದಶಿಯ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರು ಕ್ಷೀರಾಭ್ದಿಯನ್ನು ಮಾಡಿ, ಅರ್ಘ್ಯವನ್ನು ನೀಡಿದರು. ನಂತರ ಲಕ್ಷದೀಪೋತ್ಸವದ ಅಂಗವಾಗಿ ಮಧ್ವ ಸರೋವರದಲ್ಲಿ ಪಾರ್ಥ ಸಾರಥಿ ರಥದ ಮಾದರಿಯ ತೆಪ್ಪದಲ್ಲಿ ಆಕರ್ಷಕ ತೆಪ್ಪದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರನ್ನಿಟ್ಟು ತೆಪ್ಪೋತ್ಸವವನ್ನು ನೆರವೇರಿಸಲಾಯಿತು.

ತದನಂತರ ಅಲಂಕೃತ ರಥಗಳಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ಹಾಗೂ ಅನಂತೇಶ್ವರ, ಚಂದ್ರೇಶ್ವರ ದೇವರನ್ನಿಟ್ಟು ರಥಬೀದಿಯ ಸುತ್ತಲೂ ವೈವಿಧ್ಯಮಯ ಲಕ್ಷ ದೀಪಗಳ ನಡುವೆ, ನಾದಸ್ವರ, ಪಂಚ ವಾದ್ಯ, ಚಂಡೆ ವಾದ್ಯಗಳೊಂದಿಗೆ ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ತುಳಸಿ ಸಂಕೀರ್ಥನೆಯೊಂದಿಗೆ ರಥೋತ್ಸವವು ಅತ್ಯಂತ ವೈಭವದಿಂದ ನಡೆಯಿತು. ನಂತರ ಮಧ್ವ ಮಂಟಪದಲ್ಲಿ ತೊಟ್ಟಿಲು ಪೂಜೆಯು ನಡೆಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಟ್ಟುಗುಳ್ಳ ಹೊರೆಕಾಣಿಕೆ

ಉಡುಪಿ, ಜ.17: ಶೀರೂರು ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥರ ಪ್ರಥಮ‌...

ಉಡುಪಿ ಜಿಲ್ಲಾ ಕುಪ್ಮಾ ಸಮಿತಿ ಪದಗ್ರಹಣ

ಉಡುಪಿ, ಜ.17: ಜಾಗತಿಕ ಸವಾಲುಗಳಿಗೆ ಉತ್ತರ ನೀಡಲು ಖಾಸಗೀ ಶಿಕ್ಷಣ ಸಂಸ್ಥೆಗಳಿಂದ...

ಸಾಂಸ್ಕೃತಿಕ ಸ್ಪರ್ಧೆಗಳಿಂದ ಸುಪ್ತ ಪ್ರತಿಭೆಗಳ ಅನಾವರಣ: ಪಿ.ಎನ್ ಆಚಾರ್ಯ

ತೆಂಕನಿಡಿಯೂರು, ಜ.17: “ಮಕರ ಸಂಕ್ರಾಂತಿ ಹಬ್ಬದಂದು ವಿದ್ಯಾರ್ಥಿಗಳನ್ನು ಸ್ಪರ್ಧೆಗಳ ಆಯೋಜನೆ ಮೂಲಕ...
error: Content is protected !!