ಕಟಪಾಡಿ, ಆ.28: ಉಡುಪಿ ಜಿಲ್ಲಾ ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಶಾಲಾ ಸಂಘಟನೆಯ (ಐಕ್ಸ್) (ಆಲ್ ಇಂಡಿಯಾ ಕೌನ್ಸಿಲ್ ಆಫ್ ಸ್ಪೋಟ್ಸ್) ವತಿಯಿಂದ ಉಡುಪಿಯ ಸೇಂಟ್ ಸಿಸಿಲಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನಡೆದ ತ್ರೋಬಾಲ್ ಪಂದ್ಯಾಟದಲ್ಲಿ ಪಾಜಕ ಅನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆ ಮಾಡಿದ್ದು, 17 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಪ್ರಥಮ, 14 ವರ್ಷ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ, ಹಾಗೂ ಇದೇ ವಿಭಾಗದ ಬಾಲಕೀಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಸಮಗ್ರ ಜಾಂಪಿಯನ್ ಸ್ಥಾನ ಪಡೆದಿರುತ್ತಾರೆ. 17 ವರ್ಷ ವಯೋಮಾನದಲ್ಲಿ ಬೆಸ್ಟ್ ರಿಸೀವರ್ ಆಗಿ ಸಂಗಮೇಶ್, ಬೆಸ್ಟ್ ಸರ್ವರ್ ಆಗಿ ಅನಿರುದ್ಧ ಜೋಷಿ, 14 ವರ್ಷದ ವಯೋಮಾನದಲ್ಲಿ ಬಾಲಕರ ವಿಭಾಗದಲ್ಲಿ ಆಲ್‌ರೌಂಡರ್ ಆಗಿ ಅನೀಶ್, ಬಾಲಕೀಯರ ವಿಭಾಗದಲ್ಲಿ ಧನುಶ್ರೀ ವಯಕ್ತಿಕ ಪ್ರಶಸ್ತಿ ಪಡದರು.
ಉಡುಪಿ ಜಿಲ್ಲೆಯ ಸುಮಾರು 20 ಶಾಲೆಗಳು ಪಾಲ್ಗೊಂಡಿದ್ದ ಈ ಕ್ರೀಡಾ ಕೂಟದಲ್ಲಿ ಆನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳ ಈ ಸಾಧನೆಗೆ ತರಬೇತಿ ನೀಡಿದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕುಮಾರ್ ಶೆಟ್ಟಿ, ಕಲ್ಮೇಶ್, ಸುಮನಾ, ಸಚಿನ್, ಮಮತಾ, ದುರ್ಗಪ್ಪ ಹಾಗೂ ವಿದ್ಯಾಲಯ ಪ್ರಾಂಶುಪಾಲೆ ಡಾ. ಗೀತಾ ಶಶಿದರ್ ಹಾಗೂ ಕ್ರೀಡೆಯಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದ್ದಾರೆ.