ಉಡುಪಿ, ಜೂ. 24: ಕನ್ನಡ ಜಾನಪದ ಪರಿಷತ್ ಬೆಂಗಳೂರು, ಉಡುಪಿ ಜಿಲ್ಲಾ ಘಟಕ ಇವರ ಉಡುಪಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಶಾಂತಿನಗರ ಮಣಿಪಾಲ ಸಾರ್ವಜನಿಕ ಗಣೇಶ ಸಮಿತಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಬೆಂಗಳೂರು ಇದರ ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ, ಜನಪದ ಸಾಹಿತ್ಯವು ಧರ್ಮಾತೀತವಾಗಿದೆ. ಜಾನಪದದಿಂದ ಹಲವಾರು ಸಂಸ್ಕೃತಿಯ ಪರಿಚಯ ನಮಗೆ ದೊರೆಯುತ್ತದೆ, ಈ ನಿಟ್ಟಿನಲ್ಲಿ ಜನಪದ ಸಾಹಿತ್ಯ ಮತ್ತು ಅದರ ದಾಖಲೀಕರಣ ಅಗತ್ಯವಾಗಿದೆ. ಜಾನಪದ ಪರಿಷತ್ ಮೂಲಕ ಮುಂದಿನ ದಿನಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಮೂಡುಸಗ್ರಿಯ ಧರ್ಮದರ್ಶಿ ಭಾಸ್ಕರ್ ಗುಂಡಿಬೈಲು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಮಹಿಳಾ ಪ್ರತಿನಿಧಿ ಅಹಲ್ಯ ಹೆಗ್ಡೆ, ಮಹಾಮಾಯಿ ಭಜನಾ ಮಂಡಳಿಯ ಸಂಸ್ಥಾಪಕಿ ಮೋಹಿನಿ ಭಟ್, ಆಶ್ಲೇಷ ಹೋಟೆಲಿನ ಮಾಲಕರಾದ ಶ್ರುತಿ ಜಿ.ಶಣೈ, ಜಿಲ್ಲಾ ಘಟಕದ ಖಜಾಂಚಿ ಚಂದ್ರ ಹಂಗಾರಕಟ್ಟೆ ಮುಂತಾದವರು ಉಪಸ್ಥಿತರಿದ್ದರು. ಹಿರಿಯ ಜಾನಪದ ಕಲಾವಿದೆ ಸರಸ್ವತಿ ಪಿತ್ರೋಡಿಯವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ವತಿಯಿಂದ ರಾಜಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರನ್ನು ಗೌರವಿಸಲಾಯಿತು.
ನೂತನ ಅಧ್ಯಕ್ಷೆ ಮಾಯಾ ಕಾಮತ್ ಮತ್ತು ಅವರ ತಂಡಕ್ಕೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಪ್ರ.ಕಾರ್ಯದರ್ಶಿ ಕುಸುಮ ಕಾಮತ್ ವಂದಿಸಿದರು. ಜಿಲ್ಲಾ ಸಂ.ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ನಾಗರಾಜ್ ಆಚಾರ್ಯ, ಲಲಿತಾ ಮಲ್ಹೆ, ಸುಜಾತಾ ಪೂಜಾರಿ, ಪ್ರಭಾ ರಾವ್, ದೇವದಾಸ ಕಾಮತ್, ಮುಕ್ತ ಶ್ರೀನಿವಾಸ ಭಟ್, ಸವಿತಾ ಶೆಟ್ಟಿ, ಶಿವಪ್ರಸಾದ್, ಗಜೇಂದ್ರ ಶೇಟ್, ನಿತ್ಯಾನಂದ ನಾಯಕ್ ಮುಂತಾದವರು ಉಪಸ್ಥಿತರಿದ್ದರು. ನಂತರ ಭಜನಾ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.