ಉಡುಪಿ, ಮೇ 10: ಉಡುಪಿ ಪುತ್ತೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ಶುಕ್ರವಾರ ಅಕ್ಷಯ ತೃತೀಯ ಪರ್ವಕಾಲದಲ್ಲಿ ಪ್ರತಿಷ್ಠಾ ವರ್ಧಂತಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬೆಳಿಗ್ಗೆ ಪ್ರಾರ್ಥನೆ, ಪುಣ್ಯಾಹ ಕಲಾಸಾನಿಧ್ಯಯುಕ್ತವಾಗಿ ಚಂಡಿಕಾಯಾಗ ಆರಂಭಗೊಂಡು, ಶ್ರೀ ಸತ್ಯನಾರಾಯಣ ಪೂಜೆ, ಚಂಡಿಕಾಯಾಗದ ಪೂರ್ಣಾಹುತಿ, ಅನ್ನಸಂತರ್ಪಣೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶ್ರೀನಿವಾಸ ಕಲ್ಯಾಣ ಮಂಟಪ ಮತ್ತು ಶ್ರೀ ಪದ್ಮಾವತಿ ಕಲಾ ಮಂದಿರದಲ್ಲಿ ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. ಅರ್ಚಕರಾದ ಬಾಲಕೃಷ್ಣ ವಿ. ಗಾಂವ್ಸಕರ್, ಗಾಂವ್ಸಕರ್ ಕುಟುಂಬಸ್ಥರು, ಅಧ್ಯಕ್ಷರು, ಸರ್ವ ಸದಸ್ಯರಿದ್ದರು.