Home ಸುದ್ಧಿಗಳು ಪ್ರಾದೇಶಿಕ ಏ. 20-25: ಮಣೂರು ಮಹಾಲಿಂಗೇಶ್ವರ ದೇಗುಲದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಏ. 20-25: ಮಣೂರು ಮಹಾಲಿಂಗೇಶ್ವರ ದೇಗುಲದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

93
0

ಕೋಟ, ಏ.19: ಇಲ್ಲಿನ ಕಾರಣಿಕ ಕ್ಷೇತ್ರಗಳಲ್ಲೊಂದಾದ ಕೋಟದ ಮಣೂರಿನ ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಏಪ್ರಿಲ್ 20 ರಿಂದ ಮೊದಲ್ಗೊಂಡು 25 ರ ತನಕ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಏಪ್ರಿಲ್ 21 ರಿಂದ ಮಣೂರು ಶ್ರೀ ಮಹಾಲಿಂಗೇಶ್ವರ ದೇವರ ಧಾರ್ಮಿಕ ಕಾರ್ಯಕ್ರಮವು ತಂತ್ರಿಗಳಾದ ಪವಿತ್ರಪಾಣಿ ಗಣೇಶ ಐತಾಳ ಪಾರಂಪಳ್ಳಿ ಇವರ ನೇತೃತ್ವದಲ್ಲಿ ಹಾಗೂ ವೇದಮೂರ್ತಿ ರಾಮಪ್ರಸಾದ ಅಡಿಗ ಗರಿಕೆಮಠ ಇವರ ಪೌರೋಹಿತ್ಯದಲ್ಲಿ ಸಕಲ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. 21 ರಂದು ಪ್ರಾರ್ಥನೆ, ನಾಂದಿ ಪುಣ್ಯಾಹ, ಮುಹೂರ್ತ ಬಲಿ, ಅಂಕುರಾ ಪುಣ್ಯಾಹ, ಧ್ವಜಾಧಿವಾಸ ಹೋಮ, ಧ್ವಜಾರೋಹಣ, ವೇದಾರಂಭ ಸಂಜೆ ಬಲಿ, ವಾಸ್ತು ರಾಕ್ಷೋಘ್ನ ಹೋಮ, ರಜ್ಜು ಬಂಧನ, ಉತ್ಸವ ಬಲಿ ನಡೆಯಲಿದೆ. ಏ.22 ರಂದು ಪುಣ್ಯಾಹವಾಚನ, ಅಗ್ನಿ ಜನನ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ ಸಂಜೆ ಬಲಿ, ಕಟ್ಟೆಪೂಜೆ, ಉತ್ಸವ ರಂಗಪೂಜೆ, ಉತ್ಸವ ಬಲಿ, ಕ್ಷೇತ್ರಪಾಲ ಪೂಜೆ, ಮಹಾಪೂಜೆ ನಡೆಯಲಿದೆ. ಏ.23 ರಂದು ಪುಣ್ಯಾಹ ವಾಚನ, ಪ್ರಧಾನ ಹೋಮ, ಕಲಶಾಭಿಷೇಕ, ರಥಶುದ್ದಿ ಹೋಮ, ರಥಪೂಜೆ, ರಥಾರೋಹಣ ಬಲಿ, ಪೂರ್ವಾಹ್ನ 11.55ಕ್ಕೆ ರಥಾರೋಹಣ ಅಪರಾಹ್ನ 12.30ಕ್ಕೆ ಮಹಾಅನ್ನಸಂತರ್ಪಣೆ, ಸಂಜೆ ರಥಯಾತ್ರೆ, ರಥಾವರೋಹಣ, ಆಲಯ ಪ್ರವೇಶ, ಮಂಗಳಾರತಿ, ಪ್ರಸಾದ ವಿತರಣೆ, ಸಂಹಾರ ಬಲಿ, ದೇವರ ಶಯನೋತ್ಸವ ವಿಶೇಷ ಆಕರ್ಷಣೆ ಕೊಂಬು ಕಹಳೆ, ಡೊಳ್ಳು ಕುಣಿತ, ಕೀಲು ಕುದುರೆ, ಚಂಡೆವಾದನ, ಬ್ಯಾಂಡ್ ಸೆಟ್. ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಏ.24ರಂದು ಪ್ರಭೋದೋತ್ಸವ, ಅಷ್ಠಾವಧಾನ ಸೇವೆ ಹೋಮ, ಕಲಶಾಭಿಷೇಕ ಪೂಜೆಗಳು, ಸಂಜೆ ಸಂಹಾರಬಲಿ, ಚೂರ್ಣೋತ್ಸವ, ಅವಕೃತ ಪೂರ್ಣಾಹುತಿ, ಧ್ವಜಾರೋಹಣ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಏ.25ರ ಗುರುವಾರ ಸಂಪ್ರೋಕ್ಷಣೆ ನಡೆಯಲಿದೆ.

ಸಾಂಸ್ಕೃತಿಕ ಪರ್ವ: ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ. ಇದರ ಭಾಗವಾಗಿ ಏ.20 ರ ಶನಿವಾರ ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಶಾಸ್ತ್ರೀಯ ಸಂಗೀತ – ನೃತ್ಯ ವೈಭವ, ಛಾಯ ತರಂಗಿಣಿ ಸಂಗೀತ ಶಾಲೆ, ಹರ್ತಟ್ಟು ಇವರಿಂದ, ಸಂಜೆ 6.00 ರಿಂದ ಸಾಂಸ್ಕೃತಿಕ ಸಿಂಚನ, ಸ್ನೇಹ ಕೂಟ ಮಣೂರು ಸದಸ್ಯರಿಂದ, ಸಂಜೆ 7.00 ರಿಂದ ಯಕ್ಷಗುರು ಸೀತಾರಾಮ ಶೆಟ್ಟಿ, ಕೂಯ್ಕೂರು ಇವರಿಗೆ ಸನ್ಯಾನ. ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಮಣೂರು ಇವರಿಂದ ವೀರಮಣಿ – ಶಮಂತಕ ಮಣಿ ಯಕ್ಷ ಪ್ರದರ್ಶನ. ಏ.21ರ ಆದಿತ್ಯವಾರ ಸಂಜೆ 6.30 ಮಣೂರು ಫ್ರೆಂಡ್ಸ್ ಮಣೂರು ಇವರ ಪ್ರಸ್ತುತಿಯಲ್ಲಿ ಸ್ವರ-ನೃತ್ಯಾಂಜಲಿ ಸಿನೆಮಾ ನೃತ್ಯ ಮತ್ತು ರಸಮಂಜರಿ, ಸಂಜೆ 7.30 ಸನ್ಮಾನ, ಪ್ರತಿಭಾ ಪುರಸ್ಕಾರ, ರಾತ್ರಿ 9.30 ಓಂಕಾರ್ ಕಲಾವಿದರು, ಕನ್ನುಕೆರೆ ಇವರಿಂದ ಹಾಸ್ಯಮಯ ನಾಟಕ ‘ವಾಚ್‌ಮ್ಯಾನ್, ಏ.22ರ ಸೋಮವಾರ ಸಂಜೆ 7.00 ರಿಂದ 10.00 ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಇಂದ್ರಪ್ರಸ್ಥ ಯಕ್ಷಗಾನ ಪ್ರದರ್ಶನ. ಏ.23 ಮಂಗಳವಾರ ಬೆಳಿಗ್ಗೆ 10.00 ರಿಂದ ರಾಜೇಶ್ ಭಟ್ ಮೂಡುಬಿದ್ರೆ ಇವರಿಂದ ಭಕ್ತಿಗಾನ ಲಹರಿ, ಸಂಜೆ 4.30 ರಿಂದ ಶ್ರೀ ರಾಮ ಮಹಿಳಾ ಭಜನಾ ಮಂಡಳಿ, ಮಣೂರು ಇವರಿಂದ – ಭಜನಾ ಸಂಕೀರ್ತನೆ ಕಾರ್ಯಕ್ರಮಗಳು ನಡೆಯಲಿದೆ ಎಂದು ಶ್ರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.