Home ಸುದ್ಧಿಗಳು ಪ್ರಾದೇಶಿಕ ಗುಣಮಟ್ಟದ ವಾಣಿಜ್ಯ ಶಿಕ್ಷಣಕ್ಕೆ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಅತ್ಯುತ್ತಮ ಆಯ್ಕೆ

ಗುಣಮಟ್ಟದ ವಾಣಿಜ್ಯ ಶಿಕ್ಷಣಕ್ಕೆ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಅತ್ಯುತ್ತಮ ಆಯ್ಕೆ

ವಾಣಿಜ್ಯ ಶಿಕ್ಷಣದೊಂದಿಗೆ ಸಿಎ ಫೌಂಡೇಶನ್ ಮತ್ತು ಸಿ.ಎಸ್.ಇ.ಇ.ಟಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ

110
0

ಉಡುಪಿ, ಏ.9: ಉಡುಪಿ ಜಿಲ್ಲೆಯಲ್ಲಿಯೇ ಅಮೋಘ ಫಲಿತಾಂಶವನ್ನು ನೀಡುತ್ತಾ ಬಂದಿರುವ ಈ ಸಂಸ್ಥೆ, ವಿಜ್ಞಾನ ವಿಭಾಗ ಮಾತ್ರವಲ್ಲದೆ ವಾಣಿಜ್ಯ ವಿಭಾಗದಲ್ಲಿಯೂ ರಾಜ್ಯಮಟ್ಟದಲ್ಲಿ ಅಗ್ರ ರಾಂಕ್ ಗಳನ್ನು ಪಡೆದುಕೊಂಡಿದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೊದಲ ದಿನದಿಂದಲೇ ತರಬೇತಿ ನೀಡಲಾಗುತ್ತಿದೆ. ಏಳು ಉಪನ್ಯಾಸಕರು ಸೇರಿಕೊಂಡು ನಿರ್ಮಿಸಿದ ಈ ಸಂಸ್ಥೆ ಇಂದು ರಾಜ್ಯಮಟ್ಟದಲ್ಲಿ ಅತ್ಯುತ್ತಮ ಕಾಲೇಜ್ ಎಂದು ಗುರುತಿಸಿಕೊಂಡಿದೆ. ಶೈಕ್ಷಣಿಕ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿಕೊಂಡು ಬಂದಿದೆ.

ದ್ವಿತೀಯ ಪಿಯುಸಿಯಲ್ಲಿ ರಾಜ್ಯದ ಹತ್ತು ರಾಂಕ್ ಗಳಲ್ಲಿ ವಾಣಿಜ್ಯ ವಿಭಾಗಕ್ಕೆ 3 ರಾಂಕ್ 2022-23 ನೆ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಪ್ರತಿ ವರ್ಷವೂ ಶೆ.100 ರಷ್ಟು ಫಲಿತಾಂಶದ ಜೊತೆ ಅನಘ (ಮೂರನೇ ರಾಂಕ್) ದಿವಿತ್ ಗೌಡ (ಏಳನೇ ರಾಂಕ್) ಹಾಗೂ ಅಕ್ಷತಾ ಪೈ (ಹತ್ತನೇ ರಾಂಕ್) ನ್ನು ಪಡೆದಿರುತ್ತಾರೆ.

ಸಿಎ ಫೌಂಡೇಷನ್ ಅರ್ಹತಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜ್ ನ 20 ವಿದ್ಯಾರ್ಥಿ ಗಳು ತೇರ್ಗಡೆ ಹೊಂದಿರುತ್ತಾರೆ ಪ್ರಥಮ ಪಿಯುಸಿಯಿಂದಲೇ ವಿಶೇಷ ತರಬೇತಿ ನೀಡುತ್ತಿದ್ದು ಅತ್ಯುತ್ತಮ ಹಾಗೂ ಕಡಿಮೆ ಶುಲ್ಕದೊಂದಿಗೆ ನುರಿತ ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತದೆ.

ಸಿ.ಎಸ್.ಇ.ಇ.ಟಿ ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ಪ್ರತಿ ವರ್ಷ ದಾಖಲೆಯ ಫಲಿತಾಂಶ: ಐ.ಸಿ.ಎಸ್.ಐ ನಡೆಸುವ ಕಂಪನಿ ಸೆಕ್ರೆಟರಿಯ ಅರ್ಹತಾ ಪರೀಕ್ಷೆಯಲ್ಲಿ ಈ ಶೈಕ್ಷಣಿಕ ವರ್ಷದ 23 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ನಿರಂತರ ನುರಿತ ಉಪನ್ಯಾಸಕ ರಿಂದ ತರಬೇತಿ ನೀಡಲಾಗುತ್ತಿದೆ. ಇದಲ್ಲದೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಟ್ಯಾಲಿ ಪ್ರೈಮ್, ಪೈತಾನ್, ಕಮ್ಯುನಿಕೇಶನ್ ಸ್ಕಿಲ್ಸ್ ಬಗ್ಗೆ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯ, ರಾಷ್ಟ್ರೀಯ ಸೇವಾ ಯೋಜನೆ, ಕೆಸರಾಟ ಪಾಠ, ಯಕ್ಷಗಾನ, ಕೈಗಾರಿಕೆ ಭೇಟಿ ಸಂಗೀತ ತರಬೇತಿಗಳು ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನೀಡಲಾಗುತ್ತಿದೆ. ವಿಶೇಷವಾಗಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಸಜ್ಜುಗೊಳಿಸಲಾಗುತ್ತಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.