Home ಸುದ್ಧಿಗಳು ಪ್ರಾದೇಶಿಕ ಮಾ.26: ವಿಶ್ವ ರಂಗಭೂಮಿ ದಿನಾಚರಣೆ

ಮಾ.26: ವಿಶ್ವ ರಂಗಭೂಮಿ ದಿನಾಚರಣೆ

212
0

ಉಡುಪಿ, ಮಾ.24: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಮಾರ್ಚ್ 26 ರಂದು ಸಂಜೆ 4 ಗಂಟೆಗೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ನಡೆಸಲಾಗುವುದು. ಈ ಪ್ರಯುಕ್ತ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳಾದ ಪ್ರೊ.ಆರ್. ಎಲ್. ಭಟ್ ಉಡುಪಿ (ನಾಟಕ ಸಾಹಿತ್ಯ), ಕೆ. ವಿ. ರಾಘವೇಂದ್ರ ಐತಾಳ್, ಮುಂಬೈ (ರಂಗ ನಿರ್ದೇಶಕರು), ಕಜೆ ರಾಮಚಂದ್ರ ಭಟ್ (ರಂಗ ಸಂಘಟಕರು), ಎಸ್. ವಿ. ರಮೇಶ್ ಬೇಗಾರ್ (ರಂಗ ಸಂಘಟಕರು ಹಾಗೂ ನಿರ್ದೇಶಕರು), ಸುಜಾತ ಶೆಟ್ಟಿ (ರಂಗ ನಟಿ) ಇವರಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವರಂಗ ಪುರಸ್ಕಾರ-2024’ ಪ್ರಧಾನ ಮಾಡಲಾಗುವುದು.

ಗಾಯಕಿ ಅಖಿಲ ಹೆಗಡೆ ಹೊನ್ನಾವರ ಇವರಿಂದ ರಂಗಗೀತೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.