Home ಸುದ್ಧಿಗಳು ಪ್ರಾದೇಶಿಕ ನಗರಸಭೆಯ ರಸ್ತೆ ಸ್ವಚ್ಛಗೊಳಿಸುವ ಯಂತ್ರದ ಉದ್ಘಾಟನೆ

ನಗರಸಭೆಯ ರಸ್ತೆ ಸ್ವಚ್ಛಗೊಳಿಸುವ ಯಂತ್ರದ ಉದ್ಘಾಟನೆ

195
0

ಉಡುಪಿ, ಮಾ.13: ನಗರಸಭೆಯ ರಸ್ತೆಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ನೂತನವಾಗಿ ಖರೀದಿಸಲಾದ ನಗರಸಭಾ ರಸ್ತೆ ಸ್ವಚ್ಛಗೊಳಿಸುವ ಯಂತ್ರದ ವಾಹನಕ್ಕೆ ಮಂಗಳವಾರ ಶಾಸಕ ಯಶ್‌ಪಾಲ್ ಸುವರ್ಣ ವಾಹನವನ್ನು ಚಲಾಯಿಸುವ ಮೂಲಕ ಚಾಲನೆ ನೀಡಿದರು. ಪೌರಾಯುಕ್ತ ರಾಯಪ್ಪ, ಸ್ಥಾಯಿ ಸಮೀತಿ ಅಧ್ಯಕ್ಷ ಶ್ರೀಶ ಭಟ್ ಕೊಡವೂರು, ನಿಟ್ಟೂರು ವಾರ್ಡ್ನ ನಗರಸಭಾ ಸದಸ್ಯರಾದ ಸಂತೋಷ್ ಜತ್ತನ್ನ, ಗುಂಡಿಬೈಲು ಸದಸ್ಯರಾದ ಪ್ರಭಾಕರ ಪೂಜಾರಿ, ಕಕ್ಕುಂಜೆ ವಾರ್ಡ್ನ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಇಂದಿರಾನಗರ ವಾರ್ಡ್ನಸದಸ್ಯರಾದ ಚಂದ್ರಶೇಖರ, ಕಿನ್ನಿಮುಲ್ಕಿ ವಾರ್ಡ್ನ ಸದಸ್ಯರಾದ ಅಮೃತಾ ಕೃಷ್ಣಮೂರ್ತಿ, ಒಳಕಾಡು ವಾರ್ಡ್ನ ಸದಸ್ಯರಾದ ರಜನಿ ಹೆಬ್ಬಾರ್, ಸುಬ್ರಹ್ಮಣ್ಯನಗರ ವಾರ್ಡ್ನ ಸದಸ್ಯರಾದ ಜಯಂತಿ, ಅಜ್ಜರಕಾಡು ವಾರ್ಡ್ನ ಸದಸ್ಯರಾದ ರಶ್ಮಿ ಸಿ ಭಟ್, ಮಲ್ಪೆ ಸೆಂಟ್ರಲ್ ವಾರ್ಡ್ನ ಸದಸ್ಯರಾದ ಎಡ್ಲಿನ್ ಕರ್ಕಡ, ನಗರಸಭೆ ಕಂದಾಯ ಅಧಿಕಾರಿ ಸಂತೋಷ್ ಎಸ್.ಡಿ, ನಗರಸಭೆಯ ಆರೋಗ್ಯ ನಿರೀಕ್ಷಕ ಮನೋಹರ್, ಸುರೇಂದ್ರ ಹಾಗೂ ನಗರಸಭೆಯ ಎಲ್ಲಾ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹೇಗಿದೆ ವಾಹನ?: ನೂತನ ರಸ್ತೆ ಸ್ವಚ್ಛಗೊಳಿಸುವ ಯಂತ್ರದ ಕಾರ್ಯವೈಖರಿಯ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ವಾಹನವು 6.0 ಕ್ಯೂಬಿಕ್ ಸಾಮರ್ಥ್ಯ ಹೊಂದಿದ್ದು, ಹೈ ಪ್ರೆಶರ್ ವ್ಯಾಕ್ಯೂಮ್ ಪೈಪ್ ನಿಂದ 1 ಗಂಟೆಯ ಅವಧಿಯಲ್ಲಿ ಗರಿಷ್ಠ 5 ರಿಂದ 6 ಕಿ.ಮೀ ವರೆಗೆ ರಸ್ತೆಯ ಬದಿ ಇರುವ ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸುತ್ತದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.