Home ಸುದ್ಧಿಗಳು ಪ್ರಾದೇಶಿಕ ಡಾ. ಬಿ.ಬಿ.ಹೆಗ್ಡೆ ಕಾಲೇಜು: ಪ್ರಾಕ್ತನ ವಿದ್ಯಾರ್ಥಿ ಸಮಾವೇಶ

ಡಾ. ಬಿ.ಬಿ.ಹೆಗ್ಡೆ ಕಾಲೇಜು: ಪ್ರಾಕ್ತನ ವಿದ್ಯಾರ್ಥಿ ಸಮಾವೇಶ

281
0

ಕುಂದಾಪುರ, ಫೆ.24: ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಆಯಾಯ ಶಿಕ್ಷಣ ಸಂಸ್ಥೆಗಳ ರಾಯಭಾರಿಗಳಿದ್ದ ಹಾಗೆ. ತಾವು ಕಲಿತ ಶಿಕ್ಷಣ ಸಂಸ್ಥೆಗಳ ಕಾರ್ಯಶೀಲತೆ, ಘನತೆ ಗೌರವಗಳನ್ನು ಸಮಾಜಕ್ಕೆ ಬಿಂಬಿಸುವ ಶಕ್ತಿ ಹುದುಗಿರುವುದು ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು ಹೊರಗೆ ಬಂದ ವಿದ್ಯಾರ್ಥಿಗಳಿಗಿದೆ ಅನ್ನುವುದು ನಾವು ಮರೆಯಬಾರದು. ಶಿಕ್ಷಣ ನೀಡಿದ ವಿದ್ಯಾ ಸಂಸ್ಥೆಗಳ ಬೆಳವಣಿಗೆಯಲ್ಲಿ ಪ್ರಾಕ್ತನ ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದೆ ಎಂದು ಉಡುಪಿ ಎಂಜಿಎಂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಪಟ್ಟರು. ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘದ ಮೊದಲ ಸಮ್ಮಿಲನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಉಮೇಶ್ ಶೆಟ್ಟಿ ವಹಿಸಿ ಕಾಲೇಜು ತನ್ನ ಹದಿನಾಲ್ಕು ವರುಷಗಳಲ್ಲಿ ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡು ಕಾಲೇಜಿನ ಸಾಧನೆಯನ್ನು ವಿವರಿಸಿ ಹಳೆ ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾಲೇಜಿನ ಉಪಪ್ರಾಂಶುಪಾಲ ಡಾ. ಚೇತನ್ ಕುಮಾರ್ ಶೆಟ್ಟ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆದೇಶ್ ನಾಯಕ್ ಸ್ವಾಗತಿಸಿ, ಕೇೂಶಾಧಿಕಾರಿ ಯೊಗೀಶ ಶ್ಯಾನುಭೋಗ ವಂದಿಸಿದರು. ಕಾರ್ಯದರ್ಶಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಅನಂತರ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.