ಉಡುಪಿ, ಫೆ.11: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ – ನಂದಳಿಕೆಯ 25ನೇ ವರ್ಷದ ಅಂಗವಾಗಿ ಹಾಗೂ ರಜತ ವರ್ಷದ ಸರಣಿ ಕಾರ್ಯಕ್ರಮದ ಅಂಗವಾಗಿ ಮಹಿಳಾ – ಯುವತಿಯರ ವಿಭಾಗದ ಥ್ರೋಬಾಲ್ ಪಂದ್ಯಾಟವು ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ರಂಗ ಮಂದಿರದ ಬಳಿ ಜರಗಿತು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಉಡುಪಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಕಟಪಾಡಿ ಗೀತಾಂಜಲಿ ಎಂ. ಸುವರ್ಣ ಅವರು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನಡೆಸುತ್ತಿರುವ ಪ್ರತಿಯೊಂದು ಕಾರ್ಯಕ್ರಮವು ಎಲ್ಲರಿಗೂ ಮಾದರಿ. ರಜತ ವರ್ಷದ ಅಂಗವಾಗಿ ನಿರಂತರವಾಗಿ ಜರಗುವ ಸರಣಿ ಕಾರ್ಯಕ್ರಮಗಳೆಲ್ಲವೂ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನಂದಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನೋದ, ನಂದಳಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕಾಡಿಕಂಬ್ಲ ಪ್ರಸಾದ್ ಶೆಟ್ಟಿ, ಬೋಳ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಜಶ್ರೀ ರಮೇಶ್, ಬೆಳ್ಮಣ್ಣು ಹರ್ಷ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ಮಾಲಕರಾದ ಮುರಳೀಧರ ಜೋಗಿ, ಬೆಳ್ಮಣ್ಣು ಸೂರಜ್ ಸಮೂಹ ಸಂಸ್ಥೆಯ ಮಾಲಕರಾದ ರೂಪ ಶೋಧನ್ ಶೆಟ್ಟಿ, ನಡುಮಣಗುತ್ತು ಸತೀಶ್ ಮಾಡ, ಬೆಳ್ಮಣ್ಣು ಶ್ರೀ ದೇವಿ ಕ್ಯಾಟರರ‍್ಸ್ ಮಾಲಕರಾದ ಸತ್ಯನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷರಾದ ಇನ್ನಾ ವಿಠಲ ಮೂಲ್ಯ, ನಿಕಟ ಪೂರ್ವಾಧ್ಯಕ್ಷರಾದ ಪ್ರಶಾಂತ್ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಪಂದ್ಯಾಟದ ನಿರ್ದೇಶಕರಾದ ಹರಿಣಾಕ್ಷಿ ಪೂಜಾರಿ ಮೊದಲಾದವರಿದ್ದರು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸದಸ್ಯರಾದ ಸುಲೋಚನಾ ಕೋಟ್ಯಾನ್, ವೀಣಾ ಆಚಾರ್ಯ, ಅನ್ನಪೂರ್ಣ ಕಾಮತ್ ಪ್ರಾರ್ಥನೆಗೈದರು, ಸಂಧ್ಯಾ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ವೀಣಾ ಪೂಜಾರಿ ವಂದಿಸಿದರು. ಬೋಳ ನಿಶ್ಮಿತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ನಂದಳಿಕೆ, ಬೆಳ್ಮಣ್ಣು, ಬೋಳ, ಕೆದಿಂಜೆ, ಮಾಳ, ನಿಟ್ಟೆ, ಶಿರ್ವ, ಕಾರ್ಕಳ, ಬೇಲಾಡಿ, ಬೆಳುವಾಯಿ, ಮೂಡಬಿದ್ರೆ, ಹೆಬ್ರಿ ಪರಿಸರದ ಒಟ್ಟು 19 ತಂಡಗಳು ಮಹಿಳಾ ಥ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿವೆ.