Home ಸುದ್ಧಿಗಳು ಪ್ರಾದೇಶಿಕ ಜಪ್ಪಿನಮೊಗರು- ಜಯ-ವಿಜಯ ಜೋಡುಕರೆ ಕಂಬಳ ಸಂಪನ್ನ

ಜಪ್ಪಿನಮೊಗರು- ಜಯ-ವಿಜಯ ಜೋಡುಕರೆ ಕಂಬಳ ಸಂಪನ್ನ

114
0

ಮಂಗಳೂರು, ಫೆ.11: ಕೀರ್ತಿಶೇಷ ಜೆ. ಜಯಗಂಗಾಧರ ಶೆಟ್ಟಿ ಮನ್ಕುತೋಟಗುತ್ತು ಹಾಗೂ ನಾಡಾಜೆಗುತ್ತು ಇವರ ಸ್ಮರಣಾರ್ಥ ಜಪ್ಪಿನಮೊಗರು ನೇತ್ರಾವತಿ ನದಿ ತಟದಲ್ಲಿ ಶನಿವಾರ ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿವರ್ಯರು ಉದ್ಘಾಟಿಸುವ ಮೂಲಕ ಆರಂಭಗೊಂಡ 14ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಭಾನುವಾರ ಸಮಾರೋಪಗೊಂಡಿತು.

ಶಾಸಕರು ಹಾಗೂ ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಡಿ.ವೇದವ್ಯಾಸ ಕಾಮತ್, ಮಾರ್ಗದರ್ಶಕರಾದ ಎಚ್. ಸುಧಾಕರ ಶೆಟ್ಟಿ, ಅಧ್ಯಕ್ಷರಾದ ಜೆ. ಅನಿಲ್ ಶೆಟ್ಟಿ ಮನ್ಕುತೋಟಗುತ್ತು ಸೇರಿದಂತೆ ಹಲವು ಗಣ್ಯರ ನೇತೃತ್ವದಲ್ಲಿ ನಡೆದ ಈ ಕೂಟದಲ್ಲಿ ಒಟ್ಟು 138 ಜೊತೆ ಕೋಣಗಳು ಭಾಗವಹಿಸಿದ್ದು, ಕನೆಹಲಗೆ ವಿಭಾಗದಲ್ಲಿ 6 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 5 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 13 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 28 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 16 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 70 ಜೊತೆ ಕೋಣಗಳು ಇದ್ದವು.

ಜಯ-ವಿಜಯ ಜೋಡುಕರೆ ಕಂಬಳ ಜಪ್ಪಿನಮೊಗರು-2024 ರ ಫಲಿತಾಂಶ

ಕನೆಹಲಗೆ ವಿಭಾಗದಲ್ಲಿ ಭಾಗವಹಿಸಿದ್ದ ಕಲ್ಲಿಮಾರು ಹೊಸಮನೆ ಪ್ರದ್ಯುಮ್ನ ರಾಜರಾಮ್ ರೈ, ವಾಮಂಜೂರು ತಿರುಮೈಲುಗುತ್ತು ಪ್ರವೀಣ್ ಚಂದ್ರ ಆಳ್ವ, ಬಾರ್ಕೂರು ಶಾಂತರಾಮ ಶೆಟ್ಟಿ,
ಅಂಕರಜಾಲು ಶ್ರೀನಿವಾಸ ಬಿರ್ಮಣ್ಣ ಶೆಟ್ಟಿ, ಬೋಳಾರ ತ್ರಿಶಾಲ್ ಕೆ. ಪೂಜಾರಿ, ಇಚ್ಲಂಗೋಡು ಗಡುಪಾಡಿ ಮನೆ ಪ್ರೇಮನಾಥ ಪೆರ್ಗಡೆಯ ಆರು ಕೋಣಗಳಿಗೂ ಚಿನ್ನ ಹಾಗೂ ಶಾಶ್ವತ ಫಲಕ ಸಹಿತ ಸಮಾನ ಬಹುಮಾನ ನೀಡಲಾಯಿತು.

ಹಗ್ಗ ಹಿರಿಯ ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ ‘ಎ’ ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ ದ್ವಿತೀಯ: ಕೂಳೂರು ಪೊಯ್ಯೋಲು ಪಿ. ಆರ್. ಶೆಟ್ಟಿ ‘ಬಿ’ ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಹಗ್ಗ ಕಿರಿಯ ಪ್ರಥಮ: ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ ‘ಬಿ’ ಓಡಿಸಿದವರು: ಬೈಂದೂರು ಮಂಜುನಾಥ ಗೌಡ ದ್ವಿತೀಯ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ‘ಬಿ’ ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್ ಅಡ್ಡ ಹಲಗೆ ಪ್ರಥಮ: ನಾರಾವಿ ಯುವರಾಜ್ ಜೈನ್ ಹಲಗೆ ಮುಟ್ಟಿದವರು: ಭಟ್ಕಳ ಹರೀಶ್ ದ್ವಿತೀಯ: ಪೆರಿಯಾವುಗುತ್ತು ನವೀನ್ ಚಂದ್ರ ಗೆಟ್ಟಿ ಯಾಲ್ ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ನೇಗಿಲು ಹಿರಿಯ ಪ್ರಥಮ: ವರಪಾಡಿ ಬಡಗುಮನೆ ದಿವಾಕರ ಚೌಟ ಓಡಿಸಿದವರು: ಪಟ್ಟೆ ಗುರುಕಿರಣ್ ದ್ವಿತೀಯ: ಬೋಳದ ಗುತ್ತು ಸತೀಶ್ ಶೆಟ್ಟಿ ‘ಎ’ ಓಡಿಸಿದವರು: ಬಾರಾಡಿ ನತೇಶ್ ನೇಗಿಲು ಕಿರಿಯ ಪ್ರಥಮ: ಉಡುಪಿ ಕೊರಂಗ್ರಪಾಡಿ ಪಡುಮನೆ ವೀರ್ ಕರ್ಣ ಪ್ರಭಾಕರ ಹೆಗ್ಡೆ ಓಡಿಸಿದವರು: ಸರಪಾಡಿ ಎರ್ಮಾಳ್ ಧನಂಜಯ ಗೌಡ ದ್ವಿತೀಯ: ಉಡುಪಿ ಬ್ರಹ್ಮಗಿರಿ ಪ್ರಥಮ್ ಗಣನಾಥ ಹೆಗ್ಡೆ ‘ಎ’ ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ ಬಹುಮಾನಗಳು: ಕನ ಹಲಗೆ ವಿಭಾಗದಲ್ಲಿ ಏಳೂವರೆ ಕೋಲು ನಿಶಾನೆಗೆ ನೀರು ಹಾಯಿಸಿದವರಿಗೆ ಹಾಗೂ ಆರೂವರೆ ಕೋಲು ನಿಶಾನೆಗೆ ನೀರು ಹಾಯಿಸಿದವರಿಗೆ ಕ್ರಮವಾಗಿ ಎರಡು ಪವನ್ ಹಾಗೂ ಒಂದು ಪವನ್ ಚಿನ್ನದ ಜೊತೆಗೆ ಶಾಶ್ವತ ಫಲಕ ಹಗ್ಗ ಮತ್ತು ನೇಗಿಲು ವಿಭಾಗದ ಹಿರಿಯ ಹಾಗೂ ಕಿರಿಯ ವಿಭಾಗಕ್ಕೆ ಕ್ರಮವಾಗಿ ಒಂದೂವರೆ ಪವನ್ ಮತ್ತು ಒಂದು ಪವನ್ ಚಿನ್ನದ ಜೊತೆಗೆ ಶಾಶ್ವತ ಫಲಕ ಅಡ್ಡ ಹಲಗೆ ವಿಭಾಗದಲ್ಲಿ ಒಂದು ಪವನ್ ಚಿನ್ನ ಹಾಗೂ ಅರ್ಧ ಪವನ್ ಚಿನ್ನದ ಜೊತೆಗೆ ಶಾಶ್ವತ ಫಲಕ ಬಹುಮಾನಗಳನ್ನು ನಿಗದಿಪಡಿಸಲಾಗಿತ್ತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.