Home ಸುದ್ಧಿಗಳು ಪ್ರಾದೇಶಿಕ ಪುಸ್ತಕ ಬಹುಮಾನ: ಕೃತಿಗಳ ಆಹ್ವಾನ

ಪುಸ್ತಕ ಬಹುಮಾನ: ಕೃತಿಗಳ ಆಹ್ವಾನ

170
0

ಉಡುಪಿ, ಜ.19: ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ 2022 ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗಾಗಿ, 2022 ರ ಜನವರಿ 01 ರಿಂದ ಡಿಸೆಂಬರ್ 31 ರ ಒಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಕಾವ್ಯ, ನವಕವಿಗಳ ಪ್ರಥಮ ಸಂಕಲನ, ಕಾವ್ಯ ಹಸ್ತಪ್ರತಿ, ಕಾದಂಬರಿ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ/ ಆತ್ಮಕಥೆ, ಸಾಹಿತ್ಯ ವಿಮರ್ಶೆ, ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ, ಮಾನವಿಕ, ಸಂಶೋಧನೆ, ವೈಚಾರಿಕ/ ಅಂಕಣ ಬರಹ, ಅನುವಾದ-1 (ಇಂಗ್ಲೀಷ್ ಸೇರಿದಂತೆ ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಸೃಜನ ಹಾಗೂ ಸೃಜನೇತರ ಕೃತಿಗಳು), ಅನುವಾದ-2 (ಕನ್ನಡದಿಂದ ಅನ್ಯಭಾಷೆಗಳಿಗೆ ಅನುವಾದಗೊಂಡ ಸೃಜನ/ ಸೃಜನೇತರ ಕೃತಿ), ಲೇಖಕರ ಮೊದಲ ಸ್ವತಂತ್ರಕೃತಿ, ಕನ್ನಡದಿಂದ ಇಂಗ್ಲೀಷಿಗೆ ಅನುವಾದ, ದಾಸ ಸಾಹಿತ್ಯ ಹಾಗೂ ಸಂಕೀರ್ಣ ಪ್ರಕಾರಗಳ ಕನ್ನಡ ಪುಸ್ತಕಗಳನ್ನು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.

ಪುಸ್ತಕಗಳ ತಲಾ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು ಇವರಿಗೆ ರಿಜಿಸ್ಟರ್ಡ್ ಅಂಚೆ/ ಕೊರಿಯರ್ ಅಥವಾ ಖುದ್ದಾಗಿ ಫೆಬ್ರವರಿ 20 ರ ಒಳಗೆ ಸಲ್ಲಿಸಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.