Home ಸುದ್ಧಿಗಳು ಪ್ರಾದೇಶಿಕ ಪುತ್ತಿಗೆ ಪರ್ಯಾಯ: ಹೊರೆಕಾಣಿಕೆ‌ ಸಮಿತಿ ಸಭೆ

ಪುತ್ತಿಗೆ ಪರ್ಯಾಯ: ಹೊರೆಕಾಣಿಕೆ‌ ಸಮಿತಿ ಸಭೆ

229
0

ಉಡುಪಿ, ನ. 5: ಜನವರಿಯಲ್ಲಿ ನಡೆಯಲಿರುವ ಪುತ್ತಿಗೆ ಮಠದ ಪರ್ಯಾಯ‌ ಮಹೋತ್ಸವದ ಹೊರೆಕಾಣಿಕೆ ಸಮಿತಿ ಸಭೆ ಪುತ್ತಿಗೆ ಮಠದ ಸಭಾಂಗಣದಲ್ಲಿ ರವಿವಾರ ನಡೆಯಿತು.
ಹೊರೆಕಾಣಿಕೆ ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಪುತ್ತಿಗೆ ಶ್ರೀಗಳ ಪರ್ಯಯ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸುವ ಹಿನ್ನೆಲೆಯಲ್ಲಿ ಹೊರಕಾಣಿಕೆ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲು ಚಿಂತನೆ ನಡೆಸಲಾಗಿದೆ. ಸುಮಾರು ೫೦ ಭಾಗದಲ್ಲಿ ಹೊರೆಕಾಣಿಕೆ ಸಮಿತಿಯನ್ನು ಮಾಡಲಿದ್ದೇವೆ. ಅಲ್ಲಲ್ಲಿ ಸಭೆಗಳನ್ನು ನಡೆಸಿ ಹೊರೆಕಾಣಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಮಾರ್ಗದರ್ಶನ ನೀಡಲಾಗುತ್ತಿದೆ. ಪುತ್ತಿಗೆ ಶ್ರೀಗಳು ವಿದೇಶದಲ್ಲಿ ಕೂಡ ಮಠಗಳನ್ನು ಸ್ಥಾಪಿಸಿ ನಮ್ಮ ಧರ್ಮ ಸಂಸ್ಕೃತಿಯನ್ನು ಪ್ರಸಿದ್ಧಿ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಇದೊಂದು ವಿಶ್ವಮಟ್ಟದ ಪರ್ಯಾಯವಾಗಿದ್ದು ನಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೇವೆ ಎಂದರು.

ಸಮಿತಿಯ ಪ್ರಧಾನ‌ ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಉಭಯ ಜಿಲ್ಲೆಯ ಸಹಕಾರಿಗಳು ಸೇರಿ ಉತ್ತಮ ರೀತಿಯಲ್ಲಿ ಹೊರೆಕಾಣಿಕೆ ನೀಡಬೇಕೆಂದು ಮನವಿ ಮಾಡಿದ್ದೇವೆ. ಬೇರೆ ಬೇರೆ ಸಂಸ್ಥೆಗಳಿಗೆ ಎಲ್ಲ ಮಾಹಿತಿ ನೀಡಿದ್ದು, ಹೊರೆಕಾಣಿಕೆ ಮೆರವಣಿಗೆಯ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಅದೊಂದು ನಾಡ ಹಬ್ಬದ ರೀತಿಯಲ್ಲಿ ನಡೆಯಲಿದೆ. ಸರಕಾರದ ವತಿಯಿಂದ ವಹಿಸಬೇಕಾದ ಜವಾಬ್ದರಿಯ ಬಗ್ಗೆಯೂ ಜಿಲ್ಲಾಧಿಕಾರಿ ಗಳ ನೇತೃತ್ವದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಸಭೆಯಲ್ಲಿ ಆನೆಗುಡ್ಡೆ ವಿನಾಯಕ ದೇವಸ್ಥಾನದ ಮ್ಯಾನೆಜಿಂಗ್ ಟ್ರಸ್ಟಿ ಕೆ. ಶ್ರೀರಮಣ ಉಪಾಧ್ಯಾಯ, ಕೃಷ್ಣಮೂರ್ತಿ ಆಚಾರ್ಯ, ಅಮೃತಾ ಕೃಷ್ಣಮೂರ್ತಿ, ಯೋಗೀಶ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಬ್ರಾಹ್ಮಣ ಸಭಾದ ಮಂಜುನಾಥ ಉಪಾಧ್ಯ, ಶ್ರೀಕಾಂತ ನಾಯಕ್, ಶಶಿಕಾಂತ್ ಪಡುಬಿದ್ರಿ, ಜ್ಯೋತಿ ದೇವಾಡಿಗ, ಮಾತೃ ಮಂಡಳಿಯ ಪದ್ಮಾ, ಶ್ರೀಕಾಂತ್ ಸಿದ್ದಾಪುರ, ಉದಯ್ ಮಠದಬೆಟ್ಟು, ಕೃಷ್ಣರಾವ್ ಕೊಡಂಚ, ಭಾಸ್ಕರ್ ರಾವ್ ಕಿದಿಯೂರು, ಎಲ್.ಎನ್.ಹೆಗ್ಡೆ, ರಾಘವೇಂದ್ರ ಕಿಣಿ, ರಾಘವೇಂದ್ರ ಭಟ್ ಕನ್ನರ್ಪಾಡಿ, ರಘುಪತಿ ರಾವ್, ಚೈತನ್ಯ ಮತ್ತಿತರರು ಉಪಸ್ಥಿತರಿದ್ದರು. ನಾಗರಾಜ್ ಆಚಾರ್ಯ ಸ್ವಾಗತಿಸಿ, ವಿಜಯ ರಾಘವ ವಂದಿಸಿದರು. ರವೀಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.