Monday, November 25, 2024
Monday, November 25, 2024

ಕಿರುಚಿತ್ರ ನಿರ್ಮಾಣ ಸ್ಪರ್ಧೆ

ಕಿರುಚಿತ್ರ ನಿರ್ಮಾಣ ಸ್ಪರ್ಧೆ

Date:

ಉಡುಪಿ, ನ.4: ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2024 ರ ಕುರಿತು ಸಾರ್ವಜನಿಕರಲ್ಲಿ ವಿಶೇಷವಾಗಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಕಿರುಚಿತ್ರ ನಿರ್ಮಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಹೆಚ್ಚು ಆಕರ್ಷಕ ಮತ್ತು ವಿನೂತನವಾಗಿ ಚಿತ್ರಣಗೊಳ್ಳುವ 3 ಕಿರುಚಿತ್ರಗಳಿಗೆ ನಗದು ಬಹುಮಾನ ನೀಡಿ, ಗೌರವಿಸಲಾಗುವುದು. ಕಿರುಚಿತ್ರವು ಜಾಹಿರಾತು ಮಾದರಿಯಲಿದ್ದು, 50 ಸೆಕೆಂಡ್ ಗಳಿಗಿಂತ ಕಡಿಮೆ ಇರಬೇಕು. ಕಾಪಿರೈಟ್ ಇರುವಂತಹ ಹಿನ್ನಲೆ ಸಂಗೀತ ಬಳಸಬಾರದು. ಚಿತ್ರದಲ್ಲಿ ಯಾವುದೇ ಹಿಂಸೆ ಚಿತ್ರಗಳಿರಬಾರದು ಮತ್ತು ಸಾಹಿತ್ಯವು ಸಕರಾತ್ಮಕವಾಗಿರಬೇಕು. ಕಿರು ಚಿತ್ರದಲ್ಲಿ ಶೀರ್ಷಿಕೆಗಾಗಿ ಹೆಚ್ಚು ಸಮಯ ವ್ಯರ್ಥ ಮಾಡದೆ ಕಿರುಚಿತ್ರ ಪ್ರದರ್ಶನವಾಗುವಾಗ ಕೆಳಗೆ ವಿವರ ನೀಡುವುದು ಹೆಚ್ಚು ಸೂಕ್ತ ವಾಗಿರುತ್ತದೆ.

ಆಯ್ಕೆಯಾದ ವಿಜೇತರಿಗೆ ಪ್ರಥಮ 10,000 ರೂ., ದ್ವಿತೀಯ ರೂ. 7,500 ರೂ. ಹಾಗೂ ತೃತೀಯ ರೂ. 5,000 ನಗದು ಬಹುಮಾನ ನೀಡಲಾಗುವುದು. ಕಿರುಚಿತ್ರವನ್ನು ನವೆಂಬರ್ 8 ರಂದು ಸಂಜೆ 5 ಗಂಟೆಯೊಳಗೆ ಇ-ಮೇಲ್ [email protected] ನಲ್ಲಿ ಸಲ್ಲಿಸುವಂತೆ ಹಾಗೂ ಸಂಪರ್ಕ ಸಂಖ್ಯೆ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!