Sunday, March 29, 2026
Sunday, March 29, 2026

ಎನ್.ಎಸ್.ಎಸ್ ಮೂಲಕ ಸೇವಾ ಮನೋಭಾವನೆ: ವಿ. ಸುನಿಲ್ ಕುಮಾರ್

ಎನ್.ಎಸ್.ಎಸ್ ಮೂಲಕ ಸೇವಾ ಮನೋಭಾವನೆ: ವಿ. ಸುನಿಲ್ ಕುಮಾರ್

Date:

ಕಾರ್ಕಳ, ಅ.14: ಸೇವಾ ಮನೋಭಾವನೆ ಹಾಗೂ ಸಹಬಾಳ್ವೆ ಮೂಲಕ ಬದುಕು ಕಲಿಸಲು ಎನ್.ಎಸ್.ಎಸ್ ಸಹಕಾರಿಯಾಗಿದೆ ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಕಾರ್ಕಳ ತಾಲೂಕಿನ ಕ್ರಿಯೆಟಿವ್ ಕಾಲೇಜು ವತಿಯಿಂದ ಹಿರ್ಗಾನದ ಬಿ.ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸುಲೋಚನಾ ಸುಂದರ ಶೆಟ್ಟಿ ಕಲಾ ವೇದಿಕೆಯಲ್ಲಿ ನಡೆದ ಕಾಲೇಜಿನ ಮೊದಲ ಎನ್.ಎಸ್‌.ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸೇವಾ ಭಾವನೆ ಜೀವನದ ಉತ್ಕರ್ಷಕ್ಕೆ ಭದ್ರ ಬುನಾದಿಯಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಗೆ ಹೆಚ್ಚಿನ ಉತ್ತೆಜನ ನೀಡಿದಂತಾಗುತ್ತಿದೆ ಎಂದರು. ಕ್ರಿಯೆಟಿವ್ ಕಾಲೇಜು ಎನ್.ಎಸ್.ಎಸ್ ಶಿಬಿರ ಆಯೋಜನೆ ಮೂಲಕ ಊರಿನ ಹಬ್ಬವನ್ನಾಗಿ ಅಚರಿಸುವುದು ಅಭಿನಂದನಾರ್ಹವಾಗಿದೆ. ಶಿಕ್ಷಣದಲ್ಲಿ ರಾಜ್ಯದ ಗಮನ ಸೆಳೆದಿರುವುದು ಖುಷಿ ತಂದಿದೆ ಎಂದು ‌ಮಾಜಿ ಸಚಿವ ಸುನೀಲ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳೂರು ವಿಭಾಗದ ರಾ.ಸೇ.ಯೋ.ಪ್ರಾಂತೀಯ ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಮಾತನಾಡಿ, ಸರಳ ಜೀವನ ರೂಪಿಸುವ ಶೈಲಿ ಎನ್.ಎಸ್.ಎಸ್ ರೂಪಿಸುತ್ತದೆ. ಅನುಭವ ಮತ್ತು ಪರಿಶ್ರಮಕ್ಕೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹೆಚ್ಚು ಗಮನಹರಿಸಲಾಗಿದೆ. ಸೇವೆಯ ಮೂಲಕ ಸಮಾಜದ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ. ಇದರಿಂದ ಸ್ವಯಂಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್ ಮಾತನಾಡಿ, ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸುವ ಸೇವಾ ಮನೋಭಾವ ಎನ್.ಎಸ್.ಎಸ್ ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳಲ್ಲಿ ಹೊಸತನ ಮೇಳೈಸಲಿ ಎಂದು ಶುಭ ಹಾರೈಸಿದರು.

ಕಾಲೇಜು ಸಹ ಸಂಸ್ಥಾಪಕ ಡಾ. ಬಿ. ಗಣನಾಥ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡುತ್ತಾ, ಕಾಲೇಜು ಆರಂಭವಾದ ಕೇವಲ ನಾಲ್ಕು ವರ್ಷಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಆರಂಭವಾಗಿರುವುದು ಅಭಿನಂದನಾರ್ಹ. ಅದಕ್ಕೆ ಶ್ರಮಿಸಿದ ವಿಭಾಗೀಯ ಅಧಿಕಾರಿಗಳ ತಂಡದ ಸಹಕಾರಕ್ಕೆ  ಅಭಿನಂದನೆ ಸಲ್ಲಿಸಿದರು. ಮಾಜಿ ಗ್ರಾ.ಪಂ ಅಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡಿ, ಸಮಾನತೆ, ನ್ಯಾಯಕತ್ವ ಗುಣವನ್ನು ಕಲಿಸಲು ಎನ್.ಎಸ್.ಎಸ್ ಸಹಕಾರಿಯಾಗಿದೆ ಎಂದರು.

ಶಾಲೆಯ ಎಸ್‌.ಡಿ.ಎಂ.ಸಿ. ಅಧ್ಯಕ್ಷ ಮಹಾವೀರ, ಶಾಲೆಯ ಮುಖ್ಯೋಪಾಧ್ಯಾಯ ಆಶಾ ಕ್ಲೇರ ವಾಸ್, ಪ್ರಗತಿಪರ ಕೃಷಿಕ ಸರ್ವೋತ್ತಮ ಕಡಂಬ ಉಪಸ್ಥಿತರಿದ್ದರು. ಉಪನ್ಯಾಸಕ ಲೋಹಿತ್ ಕೆ ಎಸ್ ಕಾರ್ಯಕ್ರಮ ನಿರೂಪಿಸಿದರು. ಸಾನ್ವಿ ಪ್ರಾರ್ಥಿಸಿದರು. ಕಾಲೇಜಿನ ರಾ.ಸೇ.ಯೋ. ಸಂಯೋಜನಾಧಿಕಾರಿ ಉಮೇಶ್ ಸ್ವಾಗತಿಸಿ, ಉಪನ್ಯಾಸಕಿ ಪ್ರಿಯಾಂಕ ವಂದಿಸಿದರು. ‌

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ

ನವದೆಹಲಿ, ಮಾ.28: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೋಯ್ಡಾದ ಜೇವರ್‌ನಲ್ಲಿ...

ಮಲಬಾರ್ ವಿಶ್ವರಂಗ ಪುರಸ್ಕಾರ

ಉಡುಪಿ, ಮಾ.28: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ)ಮತ್ತು ಮಲಬಾರ್ ಗೋಲ್ಡ್ ಅಂಡ್...

ಇಂಧನ ಬೆಲೆ ಏರಿಕೆ ಇಲ್ಲ; ಲಾಕ್‌ಡೌನ್ ವದಂತಿಗಳನ್ನು ತಳ್ಳಿ ಹಾಕಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ, ಮಾ.27: ಪೆಟ್ರೋಲ್, ಡೀಸೆಲ್ ಮತ್ತು ವಿಮಾನಯಾನ ಟರ್ಬೈನ್ ಇಂಧನ (ಎಟಿಎಫ್)...
error: Content is protected !!