Home ಸುದ್ಧಿಗಳು ಪ್ರಾದೇಶಿಕ ಮಲ್ಪೆ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಕಾರ್ಯಗಾರ

ಮಲ್ಪೆ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಕಾರ್ಯಗಾರ

376
0

ಮಲ್ಪೆ, ಅ. 7: ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ, ಮಣಿಪಾಲ, ರೋಟರಿ ಕ್ಲಬ್ ಅಂಬಲಪಾಡಿ ಉಡುಪಿ ಮತ್ತು ಸಾಫಲ್ಯ ಟ್ರಸ್ಟ್ (ರಿ.), ಉಡುಪಿ ಮತ್ತು ಮಲ್ಪೆ ನಗರ ಆರೋಗ್ಯ ತರಬೇತಿ ಕೇಂದ್ರ (ಯು.ಹೆಚ್.ಟಿ.ಸಿ.) ಇವರ ಸಹಯೋಗದೊಂದಿಗೆ ಕೆ.ಎಂ.ಸಿ. ಯ ಮಲ್ಪೆ ನಗರ ಆರೋಗ್ಯ ತರಬೇತಿ ಕೇಂದ್ರದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಕಾರ್ಯಗಾರ, ಬಾಡಿ ಮ್ಯಾಪಿಂಗ್ ತಂತ್ರದ ಮೂಲಕ ತಳಮಟ್ಟದ ಆರೋಗ್ಯ ಕಾರ್ಯಕರ್ತರನ್ನು (ಪ್ರಾಥಮಿಕ ಆರೋಗ್ಯ ಕೇಂದ್ರ, ಮಲ್ಪೆಯ ಆಶಾ ಕಾರ್ಯಕರ್ತೆಯರು, ಸಿಎಚ್‌ಒಗಳು, ಪಿಎಚ್‌ಒಗಳು ಮತ್ತು ಯುಹೆಚ್‌ಟಿಸಿ, ಮಲ್ಪೆಯ ಎ.ಎನ್.ಎಮ್. ಗಳು) ಸಬಲೀಕರಣಗೊಳಿಸುವ ಕಾರ್ಯಾಗಾರವು ನಡೆಯಿತು. ರೋಟರಿ ಕ್ಲಬ್, ಅಂಬಲಪಾಡಿ ಇದರ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಅವರು ದೀಪ
ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರೋಟರಿ ಕ್ಲಬ್ ಭಾರತದಿಂದ ಪೋಲಿಯೊವನ್ನು ತೊಡೆದು ಹಾಕಲು ಹೇಗೆ ಸಹಾಯ ಮಾಡಿದೆಯೋ ಮತ್ತು ಅದೇ ರೀತಿ ಇತರ ರೋಗಗಳುಳ್ಳ ಜನರಿಗೆ ಸಹಾಯ ಮಾಡಲು ಬಯಸುತ್ತದೆ ಎಂದು ತಿಳಿಸಿದರು.

ಸಾಫಲ್ಯ ಟ್ರಸ್ಟ್ ಅಧ್ಯಕ್ಷೆ ರತ್ನಾ ಅಶೋಕ್ ಶೆಟ್ಟಿ ಮಾತನಾಡಿ, ಮಹಿಳೆಯರು ಕುಟುಂಬದ ಬೆನ್ನೆಲುಬು ಮತ್ತು ಅದರ ಆರೋಗ್ಯವನ್ನು ನಿರ್ಲಕ್ಷಿಸುವುದು ಕುಟುಂಬದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆದ್ದರಿಂದ, ತಳಮಟ್ಟದ ಆರೋಗ್ಯ ಕಾರ್ಯಕರ್ತರು ಕುಟುಂಬವನ್ನು ಸಂಪರ್ಕಿಸಿದಾಗ ಕ್ಯಾನ್ಸರ್ ಸ್ಕ್ರೀನಿಂಗ್ ತಂತ್ರಗಳ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಬೇಕೆಂದು ತಿಳಿಸಿದರು. ಉಡುಪಿ ನಗರಸಭಾ ಸದಸ್ಯೆ ಲಕ್ಷ್ಮಿ ಮಂಜುನಾಥ್ ಅವರು ಗರ್ಭಕಂಠದ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಲು ಇಂತಹ ಕಾರ್ಯಾಗಾರಗಳ ಮಹತ್ವವನ್ನು ತಿಳಿಸಿದರು. ಉಡುಪಿಯ ಸಾಫಲ್ಯ ಟ್ರಸ್ಟ್ ನಿರುಪಮಾ ಶೆಟ್ಟಿ, ಕೆ.ಎಂ.ಸಿ. ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ಮಲ್ಪೆ ನಗರ ಆರೋಗ್ಯ ತರಬೇತಿ ಕೇಂದ್ರದ ವೈದ್ಯಾಧಿಕಾರಿ ಡಾ. ಅಖಿಲಾ ಡಿ., ಮಹಿಳಾ ವೈದ್ಯಾಧಿಕಾರಿ ಡಾ. ಅಫ್ರೋಜ್ ಜಹಾನ್ ಹಾಗೂ ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕರು ಮತ್ತು ಸಂಪನ್ಮೂಲ ವ್ಯಕ್ತಿಯಾದ ಡಾ. ಈಶ್ವರಿ ಕೆ. ಉಪಸ್ಥಿತರಿದ್ದರು.

ಡಾ ಅಖಿಲಾ ಡಿ. ಅವರು ಮಾತನಾಡಿ, ತಳಮಟ್ಟದ ಆರೋಗ್ಯ ಕಾರ್ಯಕರ್ತರು ಸಮುದಾಯ ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆಯ ನಡುವಿನ ಪ್ರಮುಖ ಕೊಂಡಿಯಾಗಿದೆ, ಆದ್ದರಿಂದ ಅವರು ಗರ್ಭಕಂಠದ ಕ್ಯಾನ್ಸರ್ ಮತ್ತು ಅದರ ಸ್ಕ್ರೀನಿಂಗ್ ತಂತ್ರಗಳ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಿರಬೇಕು. ನಂತರ ಅದನ್ನು ಅವರು ಭೇಟಿ ನೀಡುವ ಕುಟುಂಬಗಳಿಗೆ ತಿಳಿಸಬಹುದು ಮತ್ತು ಆ ಮೂಲಕ ಮಹಿಳೆ ಆದಷ್ಟು ಬೇಗ ಆರೋಗ್ಯ ಸೇವೆಯನ್ನು ಪಡೆಯಬಹುದೆಂದು ತಿಳಿಸಿದರು. ಶೂನ್ಯ ಪ್ಲಾಸ್ಟಿಕ್ ಬಳಕೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಒಟ್ಟಾರೆ ೨೮ ಫಲಾನುಭವಿಗಳು ಭಾಗವಹಿಸಿದ್ದರು. ನೀಲಾವತಿ ಹಾಗೂ ಜಯಶ್ರೀ ಪ್ರಾರ್ಥಿಸಿದರು. ನೀಲಾವತಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.