Home ಸುದ್ಧಿಗಳು ಪ್ರಾದೇಶಿಕ ಕಟ್ಬೆಲ್ತೂರು: ವಿಶೇಷ ಚೇತನರ ಸ್ವಸಹಾಯ ಸಂಘ ಉದ್ಘಾಟನೆ

ಕಟ್ಬೆಲ್ತೂರು: ವಿಶೇಷ ಚೇತನರ ಸ್ವಸಹಾಯ ಸಂಘ ಉದ್ಘಾಟನೆ

310
0

ಉಡುಪಿ, ಸೆ. 2: ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಗ್ರಾಮೀಣ ಜೀವಾನೋಪಾಯ ಅಭಿಯಾನ, ತಾಲೂಕು ಪಂಚಾಯತ್ ಕುಂದಾಪುರ, ಭದ್ರ ಮಹಾಕಾಳಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕಟ್ಬೆಲ್ತೂರು ಇವರ ಆಶ್ರಯದಲ್ಲಿ ವಿಕಲ ಚೇತನರ ಸಂಜೀವಿನಿ ಸ್ವ ಸಹಾಯ ಸಂಘಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿ.ಆರ್.ಡಬ್ಲ್ಯೂ ಲಿಡಿಯಾ ರೋಡ್ರಿಗಸ್ ಇವರು 8 ಹೊಸ ಸಂಘಗಳನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲಿರುವ ಎಲ್ಲಾ ವಿಕಲ ಚೇತನರನ್ನು ಸಂಜೀವಿನಿ ಸ್ವ ಸಹಾಯ ಸಂಘಗಳಿಗೆ ಸೇರ್ಪಡೆಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ. .ಸರಕಾರದ ಆಶಯದಂತೆ ಸಮಾಜದ ಎಲ್ಲಾ ಪ್ರಜೆಗೂ ಸರಕಾರದ ಯೋಜನೆ ತಲುಪಿಸುವ ನಿಟ್ಟಿನಲ್ಲಿ ವಿಕಲ ಚೇತನರನ್ನು ಸಂಜೀವಿನಿ ಸ್ವ ಸಹಾಯ ಸಂಘಗಳಿಗೆ ಸೇರಿಸುವುದರ ಮೂಲಕ ಅವರಿಗೆ ಸಂಜೀವಿನಿಯ ಯೋಜನೆಗಳನ್ನು ಹಾಗೂ ಸಂಬಂಧಪಟ್ಟ ಇಲಾಖೆಯ ಯೋಜನೆಯನ್ನು ಹಾಗೂ ಸ್ವ ಉದ್ಯೋಗ ತರಬೇತಿಯನ್ನು ಮುಂದಿನ ದಿನಗಳಲ್ಲಿ ವಿಶೇಷ ಆದ್ಯತೆಯಲ್ಲಿ ನೀಡಲಾಗುವುದು ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೈಶಾಲಿ ಇವರು ಮಾತನಾಡಿ, ಗ್ರಾಮ ಪಂಚಾಯತ್ ನಲ್ಲಿ ಈಗಾಗಲೇ ವಿಶೇಷ ಚೇತನರಿಗೆ ಇರುವ ಸೌಲಭ್ಯಗಳನ್ನು ಪ್ರಥಮ ಆದ್ಯತೆ ಯಲ್ಲಿ ನೀಡಲಾಗುತ್ತಿದೆ. ಸಂಜೀವಿನಿ ಸ್ವಸಹಾಯ ಸಂಘಗಳಿಗೆ ವಿಕಲ ಚೇತನರನ್ನು ಸೇರ್ಪಡೆಗೊಳಿಸುವುದರ ಮೂಲಕ ಇನ್ನಷ್ಟು ಯೋಜನೆಗಳನ್ನು ಅವರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯತ್ ಸದಸ್ಯರಾದ ನಾಗರಾಜ್ ಪುತ್ರನ್ ಮಾತನಾಡಿ, ಕಟ್ಬೇಲ್ತೂರು ಗ್ರಾಮ ಪಂಚಾಯತ್ ಒಕ್ಕೂಟದ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದ್ದು ಹಾಗೂ ಇಂದು ಒಕ್ಕೂಟದ ಮೂಲಕ ಗ್ರಾಮದಲ್ಲಿರುವ ವಿಕಲಚೇತನರನ್ನು ಒಟ್ಟುಗೂಡಿಸಿ ಸಂಜೀವಿನಿ ಸಂಘಗಳನ್ನು ರಚಿಸುವುದರ ಮೂಲಕ ಇವರನ್ನು ಸಹ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳಿಸುವ ಕೆಲಸ ಮಾಡಲಾಗುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ ವಿವಿಧ ಸ್ವ ಉದ್ಯೋಗಕ್ಕೆ ಸಂಬಂಧಿಸಿದ ತರಬೇತಿ ನೀಡುವುದರ ಮೂಲಕ ಇವರನ್ನು ಸಹ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸಲು ಒಕ್ಕೂಟದ ಮೂಲಕ ಪ್ರಯತ್ನಿಸಲಾಗುವುದು ಎಂದರು.

ಗ್ರಾಮ ಪಂಚಾಯತ್ ಸಂಜೀವಿನಿ ಒಕ್ಕೂಟ ದ ಅಧ್ಯಕ್ಷರಾದ ಶ್ಯಾಮಲ ಜಿ ಚಂದನ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಸರೋಜ, ಪಂಚಾಯತ್ ಸದಸ್ಯರಾದ ಶಾಲಿನಿ ಶೆಟ್ಟಿ, ಗ್ರಾಮ ಪಂಚಾಯತ್ ಒಕ್ಕೂಟದ ಕಾರ್ಯದರ್ಶಿ ಸಾವಿತ್ರಿ, ಕೋಶಾಧಿಕಾರಿ ಸಹನಾ, ಮುಖ್ಯ ಪುಸ್ತಕ ಬರಹಗಾರರಾದ ಮಲ್ಲಿಕಾ, ಸಮುದಾಯದ ಸಂಪನ್ಮೂಲ ವ್ಯಕ್ತಿ ಜಯಶ್ರೀ, ರೇಣುಕಾ, ಶಾಂತ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.