Home ಸುದ್ಧಿಗಳು ಪ್ರಾದೇಶಿಕ ಕೆ.ಎಂ.ಸಿ ಮಣಿಪಾಲ: ಕೋವಿಡ್ ಲಸಿಕೆ ಲಭ್ಯ

ಕೆ.ಎಂ.ಸಿ ಮಣಿಪಾಲ: ಕೋವಿಡ್ ಲಸಿಕೆ ಲಭ್ಯ

396
0

ಮಣಿಪಾಲ: ಪ್ರಸ್ತುತ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಕೋವಿಡ್ ಲಸಿಕೆಯು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿರುತ್ತದೆ. ಮೊದಲ ಡೊಸ್, ಎರಡನೇ ಡೋಸ್ ಮತ್ತು ಸರಕಾರ ನಿರ್ಧರಿಸಿರುವ ಮಾನದಂಡದಂತೆ ಬೂಸ್ಟರ್ ಡೋಸ್ ಗಾಗಿ ಕೋವಿಶೀಲ್ಡ್ ಮತ್ತು ಕೋವಾಕ್ಷಿನ್ ಲಸಿಕೆ ಲಭ್ಯವಿರುತ್ತದೆ.

ಸರಕಾರ ನಿಗದಿಪಡಿಸಿದ ದರದಲ್ಲಿ ಲಸಿಕೆ ನೀಡುತ್ತಿದ್ದು ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ಕೋರಿದ್ದಾರೆ. 

ಅವಶ್ಯವಿದ್ದವರು ಕೋವಿನ್ ಆಪ್ ನಲ್ಲಿ ನೋಂದಣಿ ಮಾಡಿ ಅಥವಾ ನೇರವಾಗಿ ಆಧಾರ್ ಕಾರ್ಡ್ ಅಥವಾ ಸರ್ಕಾರ ನಿಗದಿಪಡಿಸಿರುವ ದಾಖಲೆಯೊಂದಿಗೆ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗೆ ಬರಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0820 2922761 ಗೆ ಕರೆ ಮಾಡಬಹುದು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.