Home ಸುದ್ಧಿಗಳು ಪ್ರಾದೇಶಿಕ ಕಲೆ, ಸಂಸ್ಕೃತಿಯಿಂದ ಸ್ವಸ್ಥ ಸಮಾಜ ಸೃಷ್ಠಿ: ವೆಂಕಟೇಶ್ ವೈದ್ಯ

ಕಲೆ, ಸಂಸ್ಕೃತಿಯಿಂದ ಸ್ವಸ್ಥ ಸಮಾಜ ಸೃಷ್ಠಿ: ವೆಂಕಟೇಶ್ ವೈದ್ಯ

271
0

ಕೋಟ, ಜೂನ್ 28: ಕಲೆ ಸಂಸ್ಕೃತಿಯಿಂದ ಸ್ವಸ್ಥ ಸಮಾಜ ಸೃಷ್ಠಿ ಸಾಧ್ಯ. ಯುವ ಜನಾಂಗವನ್ನು ನಮ್ಮ ಸಂಸ್ಕೃತಿ ಕಲೆಗಳಿಗೆ ತೊಡಗಿಸಕೊಳ್ಳುವಂತೆ ಸಂಘಟನೆಯ ಮೂಲಕ ಪ್ರೇರೆಪಿಸಬೇಕು, ಥೀಮ್ ಪಾರ್ಕ್ನಲ್ಲಿ ನಡೆಯುವ ಸಾಹಿತ್ಯಿಕ- ಸಾಂಸ್ಕೃತಿಕ ಕಾರ್ಯಕ್ರಮಗಳು ವಿಭಿನ್ನವಾಗಿವೆ ಎಂದು ಯಕ್ಷ ಸಂಘಟಕ ವೆಂಕಟೇಶ ವೈದ್ಯ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ನಡೆದ ತಿಂಗಳ ಸಡಗರ ‘ಯಕ್ಷ ಗಾನ ವೈಭವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಯಕ್ಷಗಾನದ ಸೊಗಡನ್ನು ವಿದೇಶಗಳಲ್ಲಿ ಪಸರಿಸುವಲ್ಲಿ ಕಾರಂತರ ಕೊಡುಗೆ ಅನನ್ಯವಾದುದು. ಯಕ್ಷಗಾನದಿಂದ ಸಂಸ್ಕೃತಿ ಅನಾವರಣದ ಜೊತೆಗೆ ಜ್ಞಾನ ವೃದ್ಧಿ ಸಾಧ್ಯ ಎಂದರು. ವೇದಿಕೆಯಲ್ಲಿ ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷ ಮನೋಜ್ ಕುಮಾರ್, ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್ ಉಪಸ್ಥಿತರಿದ್ದರು. ಕೋಟತಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಸ್ವಾಗತಿಸಿ, ಉಪಾಧ್ಯಕ್ಷ ವಾಸು ಪೂಜಾರಿ ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.