Home ಸುದ್ಧಿಗಳು ಪ್ರಾದೇಶಿಕ ಜೀವನಪೂರ್ತಿ ಸನ್ನಡತೆಗೆ ಉಪನಯನ ಸಂಸ್ಕಾರ ಸಹಕಾರಿ: ಪೇಜಾವರ ಶ್ರೀ

ಜೀವನಪೂರ್ತಿ ಸನ್ನಡತೆಗೆ ಉಪನಯನ ಸಂಸ್ಕಾರ ಸಹಕಾರಿ: ಪೇಜಾವರ ಶ್ರೀ

375
0

ಉಡುಪಿ, ಮೇ 18: ಹಿಂದೂ ಧರ್ಮದಲ್ಲಿ ಉಪನಯನ ಸಂಸ್ಕಾರಕ್ಕೆ ಬಹಳ ಪ್ರಾಶಸ್ತ್ಯವಿದೆ. ಜೀವನದಲ್ಲಿ ಸಾತ್ವಿಕತೆಯನ್ನು ಹೆಚ್ಚಿಸಿಕೊಳ್ಳಲು ಜಪಾನುಷ್ಠಾನದಂತಹ ಆಧ್ಯಾತ್ಮಿಕ ದಾರಿಯಲ್ಲಿ ಮುನ್ನಡೆಯಬೇಕು. ಇದಕ್ಕೆ ಉಪನಯನ ಸಂಸ್ಕಾರ ಸಹಕಾರಿ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಕಡಿಯಾಳಿ ದೇವಸ್ಥಾನದ ಶರ್ವಾಣಿ ಮಂಟಪದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿಯವರ ಪುತ್ರ ರಚಿತ್ ಕಿಣಿಯ ಉಪನಯನ ಸಂಸ್ಕಾರದ ಜತೆ 19 ವಟುಗಳಿಗೆ ನಡೆದ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಶ್ರೀಪಾದರು, ತಮ್ಮ ಮಗನ ಉಪನಯನದ ಜತೆ ಇತರರಿಗೂ ಉಪನಯನ ಸಂಸ್ಕಾರವನ್ನು ನಡೆಸಿರುವುದು ಉತ್ತಮ ಮಾದರಿ ನಡೆಯಾಗಿದೆ. ಇದರಿಂದ ನಾವೆಲ್ಲ ಒಂದು ಎಂಬ ಸಂದೇಶ ಸಿಗುತ್ತದೆ ಎಂದರು.

ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಗಮಿಸಿ ನೂತನ ವಟುಗಳನ್ನು ಹರಸಿದರು. ಹಿರಿಯ ವಿದ್ವಾಂಸ ಡಾ. ಸೋಂದಾ ಭಾಸ್ಕರ ಭಟ್ ಮುಖ್ಯ ಉಪನ್ಯಾಸ ನೀಡಿ ಉಪನಯನ ಸಂಸ್ಕಾರದ ಮಹತ್ವವನ್ನು ವಿವರಿಸಿದರು. ಮಂಗಳನಿಧಿ ಕಾರ್ಯಕ್ರಮವನ್ನು ಆರ್.ಎಸ್.ಎಸ್. ಹಿರಿಯರಾದ ಅಲೆವೂರು ಸಂಜೀವ ನಾಯಕ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಕಡಿಯಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ರವಿರಾಜ ಆಚಾರ್ಯ ವಹಿಸಿದ್ದರು. ವೇ.ಮೂ ರಾಜೇಂದ್ರ ಭಟ್ ಉಪಸ್ಥಿತರಿದ್ದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಬಿಜೆಪಿ ಆದ್ಯಕ್ಷ ಸುರೇಶ್ ನಾಯಕ್, ದಾ.ಮ.ರವೀಂದ್ರ, ಶಾಸಕರುಗಳಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಕೆ.ರಘುಪತಿ ಭಟ್, ಮುನಿಯಾಲು ಉದಯಕುಮಾರ ಶೆಟ್ಟಿ ಮೊದಲಾದವರು ಆಗಮಿಸಿ ಶುಭ ಕೋರಿದರು. ಕೆ.ರಾಘವೇಂದ್ರ ಕಿಣಿ ಸ್ವಾಗತಿಸಿ, ಎಂಐಟಿ ಪ್ರಾಧ್ಯಾಪಕ ಬಿ ಗೌರವ ಶೆಣೈ ವಂದಿಸಿದರು. ಕೆ. ಸಂತೋಷ್ ಕಿಣಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.