Home ಸುದ್ಧಿಗಳು ಪ್ರಾದೇಶಿಕ ಉಡುಪಿ: ಪ್ರಜಾಪ್ರಭುತ್ವ ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಜನತೆ

ಉಡುಪಿ: ಪ್ರಜಾಪ್ರಭುತ್ವ ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಜನತೆ

254
0

ಉಡುಪಿ, ಮೇ 10: ವಿಧಾನಸಭಾ ಚುನಾವಣೆಯ ಅಂಗವಾಗಿ ಉಡುಪಿ ಜಿಲ್ಲೆಯ ವಿವಿಧೆಡೆ ಜನರು ಉತ್ಸಾಹದಿಂದ ಸಂವಿಧಾನ ನೀಡಿದ ಹಕ್ಕನ್ನು ಚಲಾಯಿಸಿದರು. ಬಿಸಿಲನ್ನು ಲೆಕ್ಕಿಸದೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವ ಉತ್ಸವದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಒಳಕಾಡು, ಮತಗಟ್ಟೆ ಸಂಖ್ಯೆ 207,208 ಮತ್ತು 209 ರಲ್ಲಿ ಮಕ್ಕಳಿಗಾಗಿ “ಚಿಣ್ಣರ ಅಂಗಳ” ವ್ಯವಸ್ಥೆ ಮಾಡಲಾಗಿದ್ದು, ಪೋಷಕರು ಮತಚಲಾಯಿಸುವ ವೇಳೆ ಪುಟ್ಟ ಮಕ್ಕಳು ಚಿಣ್ಣರ ಅಂಗಳದಲ್ಲಿ ಆಟವಾಡಿದರು.

ಉಡುಪಿ ಜಿಲ್ಲೆ, 121- ಕಾಪು ವಿಧಾನ ಸಭಾ ಕ್ಷೇತ್ರದ, ಮಟ್ಟು ಫಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ PS 187 ಮತಗಟ್ಟೆಯಲ್ಲಿ ನವ ವಧು ಮೇಲಿಟಾ ಅವರು ಮತ ಚಲಾಯಿಸಿದರು.

ಅಮಾಸೆಬೈಲು ಹಿ.ಪ್ರಾ.ಶಾಲೆಯಲ್ಲಿ ಮತದಾರರು ಉರಿ ಬಿಸಿಲನ್ನು ಲೆಕ್ಕಿಸದೇ ಸಾಲುಗಟ್ಟಿ ಉತ್ಸಾಹದಿಂದ ಮತಗಟ್ಟೆಯಲ್ಲಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.

ಉಡುಪಿಯ ಕೊರಂಗ್ರಪಾಡಿಯಲ್ಲಿ ಶತಾಯುಷಿ ರಾಧಾ ಮತ ಚಲಾಯಿಸಿದರು.

ಉಡುಪಿ ಜಿಲ್ಲೆಯ ಮುನಿಯಾಲು ಸರ್ಕಾರಿ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಪ್ರಜ್ವಲ್ ಬಹಳ ಉತ್ಸಾಹದಿಂದ ಮೊದಲ ಬಾರಿಗೆ ಮತ ಚಲಾಯಿಸಿದರು.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.