Home ಸುದ್ಧಿಗಳು ಪ್ರಾದೇಶಿಕ ರುಡ್ ಸೆಟ್: ಉಚಿತ ಮಹಿಳಾ ಬ್ಯೂಟಿ ಪಾರ್ಲರ್ ನಿರ್ವಹಣಾ ತರಬೇತಿ

ರುಡ್ ಸೆಟ್: ಉಚಿತ ಮಹಿಳಾ ಬ್ಯೂಟಿ ಪಾರ್ಲರ್ ನಿರ್ವಹಣಾ ತರಬೇತಿ

2473
0

ಬ್ರಹ್ಮಾವರ, ಏ. 1: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಕೆನರಾ ಬ್ಯಾಂಕ್ ನ ಸಹಯೋಗದೊಂದಿಗೆ ನಡೆಯುತ್ತಿರುವ ಬ್ರಹ್ಮಾವರ ರುಡ್ ಸೆಟ್‌ ಸಂಸ್ಥೆಯಲ್ಲಿ ಉಚಿತ ಊಟ, ವಸತಿ, ಸಮವಸ್ತ್ರ, ತರಬೇತಿ ಕಿಟ್ ನೊಂದಿಗೆ ಸಂಪೂರ್ಣ ಉಚಿತ ಮಹಿಳಾ ಬ್ಯೂಟೀಪಾರ್ಲರ್ ನಿರ್ವಹಣಾ ತರಬೇತಿ  ಯುವಕ-ಯುವತಿಯರಿಗೆ ಪುರುಷ ಮತ್ತು ಮಹಿಳೆಯರಿಗೆ ದಿನಾಂಕ 17.04.2023 ರಿಂದ 16.05.2023 ರವರೆಗೆ 30 ದಿನಗಳ ಕಾಲ ನಡೆಯಲಿದೆ.

ಈ ತರಬೇತಿಗೆ ಹೆಚ್ಚು ಬೇಡಿಕೆ ಇದ್ದು ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚಿನ‌ ಮಾರುಕಟ್ಟೆಯನ್ನು ಹೊಂದಲಿದೆ. ಈ ತರಬೇತಿಯಲ್ಲಿ ಮಹಿಳಾ ಬ್ಯೂಟೀ ಪಾರ್ಲರ್ನಿ ನಿರ್ವಹಣೆ ಮಾಡಿ ಅದರ ವ್ಯವಹಾರ ನಡೆಸಲು‌ ಬೇಕಾದ ಮಾರುಕಟ್ಟೆ ನಡೆಸುವ ಬಗ್ಗೆ, ಬ್ಯಾಂಕಿನ ವ್ಯವಹಾರ, ಸರಕಾರಿ ಯೋಜನೆಗಳು, ಯೋಜನಾ ವರದಿ ತಯಾರಿಕೆ, ಸಮಯ ನಿರ್ವಹಣೆ, ಸಂವಹನ ಕೌಶಲ್ಯ, ಸಮಸ್ಯೆ ಬಗೆಹರಿಸುವುದು, ಅವಲಂಬನೆ ಇಲ್ಲದೆ ವ್ಯವಹರಿಸುವ ಬಗ್ಗೆ, ರಿಸ್ಕ್ ತೆಗೆದುಕೊಳ್ಳವ ರೀತಿ, ಗುಣಮಟ್ಟದ ನಿರ್ವಹಣೆ, ಮುಂತಾದ ವಿಷಯಗಳ ಬಗ್ಗೆ ವಿಶೇಷವಾದ ತರಬೇತಿ ನೀಡಲಾಗುವುದು.

ಈ ತರಬೇತಿ ಪಡೆಯಲು ಬಯಸುವವರು ಗ್ರಾಮೀಣ ಭಾಗದ 18 ರಿಂದ 45 ವರ್ಷದ ಒಳಗಿನವರು, ಬಿ.ಪಿ.ಎಲ್ ಕುಟುಂಬದ ಸದಸ್ಯರಾಗಿ ಇರಬೇಕು. ಕನ್ನಡ ಓದಲು ಬರೆಯಲು ಬರುವ, ಮುಂದೆ ಇದನ್ನೇ ವೃತ್ತಿಯನ್ನಾಗಿ ಮಾಡಲು ಇಚ್ಚಿಸುವವರು ನಿಮ್ಮ ಹೆಸರು, ವಿಳಾಸ, ನಿಮ್ಮ ಮೊಬೈಲ್ ನಂ. ಜನ್ಮ ದಿನಾಂಕ ಬರೆದು ನೀವು ಪಡೆಯಲು ಇಚ್ಚಿಸುವ ತರಬೇತಿಯ ಯಾವುದೆಂದು ಬರೆದು, ನಿಮ್ಮ ಹೆಸರು ಇರುವ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇರಿಸಿ ತಕ್ಷಣ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗಿನ ವಾಟ್ಸಪ್ ನಂ. ಕಳುಹಿಸಿ ಕೊಡಿ.

ವಿಳಾಸ: ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ- 576213 ಉಡುಪಿ ಜಿಲ್ಲೆ
ವಾಟ್ಸಪ್ ನಂ. 9632561145, 9448348569, 9844086383, 9611544930, 9591233748, 
8861325564

ವೆಬ್ ಸೈಟ್ ನ  ಮೂಲಕ ಸಹ ಅರ್ಜಿ ಸಲ್ಲಿಸಬಹುದು.  www.rudsetitraining.org ಇಮೇಲ್ ವಿಳಾಸ : [email protected]

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.