Home ಸುದ್ಧಿಗಳು ಪ್ರಾದೇಶಿಕ ಪರಶುರಾಮ ಥೀಂ ಪಾರ್ಕ್: ಸಾಂಸ್ಕೃತಿಕ ವೈಭವ ಕಾರ್ಯಕ್ರಮ

ಪರಶುರಾಮ ಥೀಂ ಪಾರ್ಕ್: ಸಾಂಸ್ಕೃತಿಕ ವೈಭವ ಕಾರ್ಯಕ್ರಮ

206
0

ಉಡುಪಿ, ಮಾ. 28: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಕಾರ್ಕಳ ಬೈಲೂರು ಉಮಿಕಲ್ ಬೆಟ್ಟದ ಪರಶುರಾಮ ಥೀಂ ಪಾರ್ಕ್ ನಲ್ಲಿ ನಡೆಯಿತು. ಯಕ್ಷರಂಗಾಯಣ ಅಧ್ಯಕ್ಷ ಜೀವನರಾಂ ಸುಳ್ಯ ಕಾರ್ಯಕ್ರಮ ಉದ್ಘಾಟಿಸಿದರು.

ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಪೂಜಾರಿ, ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ, ಎರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ಪೂಜಾರಿ, ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಶೆಟ್ಟಿ, ಉಡುಪಿ ನಗರಸಭೆ ಸದಸ್ಯ ಬಾಲಕೃಷ್ಣ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಬೈಲೂರು ಘಟಕ ಮೇಲ್ವಿಚಾರಕಿ ಸೌಮ್ಯ, ಕಾರ್ಕಳ ತಾಲೂಕು ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಉದ್ಯಮಿಗಳಾದ ಸಂತೋಷ್ ವಾಗ್ಲಿ, ರಮೇಶ್ ಕಿಣಿ, ರಮೇಶ ಶೆಟ್ಟಿ, ಸುಭಾಶ್ ಶೆಟ್ಟಿ ಹಾಗೂ ಸನಾತನ ನಾಟ್ಯಾಲಯದ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುಮಿತ್ ಶೆಟ್ಟಿ ಕೌಡೂರು ನಿರೂಪಿಸಿ, ವಂದಿಸಿದರು. ಜೋಗಿ ಸುನೀತ ಮತ್ತು ತಂಡ ಬೆಂಗಳೂರು ಇವರಿಂದ ಜಾನಪದ ಹಾಗೂ ಶಿಶುನಾಳ ಶರೀಫ್ ಹಾಡುಗಳು, ಸನಾತನ ನೃತ್ಯಾಲಯ ಮಂಗಳೂರು ಇವರಿಂದ ಸನಾತನ ರಾಷ್ಟ್ರಂಜಲಿ ನೃತ್ಯ ಕಾರ್ಯಕ್ರಮ, ಸೃಷ್ಠಿ ಕಲಾಕುಟೀರ ಉಡುಪಿ ಇವರಿಂದ ಮಹಾಕಾಳಿ ನೃತ್ಯರೂಪಕ ಹಾಗೂ ವಿದೂಷಿ ಪವನ್ ಆಚಾರ್ ಬಳಗದಿಂದ ಪಂಚ ವೀಣಾವಾದನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.