ಕೋಟ: ಇತ್ತೀಚಿನ ದಿನಗಳಲ್ಲಿ ಸಂಘಟನೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚತೆ, ಶೈಕ್ಷಣಿಕ, ಸೇರಿದಂತೆ ಸಮಾಜಮುಖಿ ಕಾರ್ಯಗಳಲ್ಲಿ
ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ.
ಯುವವಾಹಿನಿ ಘಟಕವು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಂಘಟನಾತ್ಮಕವಾಗಿ ಸಕ್ರಿಯವಾಗಿ ತೊಡಗಿಸಿಕೊಂಡು ಇನ್ನಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಯುವವಾಹಿನಿ (ರಿ.) ಯಡ್ತಾಡಿ ಘಟಕದ ಅಧ್ಯಕ್ಷ ರಾಜು ಪೂಜಾರಿ ಹೇಳಿದರು.
ಅವರು ಯಡ್ತಾಡಿಯ ಸಣಗಲ್ಲುವಿನಲ್ಲಿ ನಡೆದ ಯುವವಾಹಿನಿ (ರಿ.) ಯಡ್ತಾಡಿ ಘಟಕದ ವತಿಯಿಂದ ಸುನೀಲ್ ಪೂಜಾರಿ ಸಣಗಲ್ಲು ಅವರ ಮನೆ ವಠಾರದಲ್ಲಿ ನಡೆದ ಸಂಘಟನೆಗಾಗಿ ನಮ್ಮ ನಡೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕೂಳೂರು ಯುವವಾಹಿನಿ ಘಟಕದ ವತಿಯಿಂದ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಯಡ್ತಾಡಿ ಯುವವಾಹಿನಿಯ ಮಹಿಳಾ ವಾಲಿಬಾಲ್ ಸದಸ್ಯರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ವಡ್ಡರ್ಸೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಗಿರಿಜಾ ಪೂಜಾರ್ತಿ, ಸಂತೋಷ್ ಪೂಜಾರಿ ಸಣಗಲ್ಲು ಉಪಸ್ಥಿತರಿದ್ದರು.
ಸೋಮಪ್ಪ ಸುವರ್ಣ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಜಿತ್ ಕುಮಾರ್ ನಿರೂಪಿಸಿದರು.