Home ಸುದ್ಧಿಗಳು ಪ್ರಾದೇಶಿಕ ಹೆಣ್ಣು ಸಮಾಜದ ಕಣ್ಣು: ಸಂದೀಪ್ ವಿ. ಪೂಜಾರಿ

ಹೆಣ್ಣು ಸಮಾಜದ ಕಣ್ಣು: ಸಂದೀಪ್ ವಿ. ಪೂಜಾರಿ

574
0

ಉಡುಪಿ, ಮಾ. 9: ಸಮಾಜದಲ್ಲಿ ಪುರುಷರಷ್ಟೇ ಸ್ತ್ರೀ ಕೂಡ ಸಮಾನಳಾಗಿದ್ದು ಹೆಣ್ಣು ಈ ಸಮಾಜದ ಕಣ್ಣಾಗಿದ್ದಾಳೆ. ಹೆಣ್ಣು ಇವತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಗಣನೀಯ ಸಾಧನೆಯನ್ನು ಮಾಡುತ್ತಿದ್ದಾಳೆ ಎಂದು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಹೇಳಿದರು. ಅವರು ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಜರಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಹಜ ಹೆರಿಗೆ ಎಂಬುದ ವೈದ್ಯಕೀಯ ಲೋಕಕ್ಕೆ ಸವಾಗಿರುವ ಇಂದಿನ ಕಾಲದಲ್ಲಿ ಸುಮಾರು 25 ವರ್ಷಗಳ ಹಿಂದೆಯೇ ಇನ್ನೂರಕ್ಕೂ ಅಧಿಕ ಗರ್ಭಿಣಿಯರಿಗೆ ಸಹಜ ಹೆರಿಗೆ ಮಾಡಿಸಿರುವ ಬೋಳ ಕೊಳಜಾಲು ಅಪ್ಪಿ ಪೂಜಾರ‍್ತಿ ಅವರಿಗರ ವಿಶ್ವ ಮಹಿಳಾ ದಿನದ ಅಂಗವಾಗಿ ಮನೆಗೆ ತೆರಳಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ನಿಕಟ ಪೂರ್ವಾಧ್ಯಕ್ಷ ಉದಯ ಅಂಚನ್, ಪೂರ್ವಾಧ್ಯಕ್ಷ ಸತೀಶ್ ಅಬ್ಬನಡ್ಕ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಸತೀಶ್, ಕಾರ್ಯದರ್ಶಿ ಲಲಿತಾ ಆಚಾರ್ಯ, ಉಫಾಧ್ಯಕ್ಷೆ ಲೀಲಾ ಪೂಜಾರಿ ಸದಸ್ಯರಾದ ಸುರೇಶ್ ಅಬ್ಬನಡ್ಕ, ಸಂಧ್ಯಾ ಶೆಟ್ಟಿ, ವೀಣಾ ಪೂಜಾರಿ, ಪುಷ್ಪ ಕುಲಾಲ್, ಹರಿಣಿ ಪೂಜಾರಿ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.