Home ಸುದ್ಧಿಗಳು ಪ್ರಾದೇಶಿಕ ಕಾಂಗ್ರೆಸ್ ಪಕ್ಷದ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಬಗ್ಗೆ ಮನೆ ಮನೆಗೂ ಮಾಹಿತಿ ನೀಡಿ: ಪ್ರತಾಪನ್

ಕಾಂಗ್ರೆಸ್ ಪಕ್ಷದ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಬಗ್ಗೆ ಮನೆ ಮನೆಗೂ ಮಾಹಿತಿ ನೀಡಿ: ಪ್ರತಾಪನ್

263
0

ಉಡುಪಿ, ಫೆ. 13: ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆ ಹಾಗೂ ಕರಾವಳಿ ಪ್ರದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಘೋಷಿಸಿರುವ ಪ್ರತ್ಯೇಕ ಪ್ರಣಾಳಿಕೆ ಬಗ್ಗೆ ಕಾರ್ಯಕರ್ತರು ಪ್ರತಿ ಮನೆ ಮನೆಗೂ ಹೋಗಿ ಈ ಯೋಜನೆಗಳ ಕುರಿತು ಮಾಹಿತಿ ನೀಡಬೇಕು ಎಂದು ಲೋಕಸಭಾ ಸದಸ್ಯರು ಮತ್ತು ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳ ಉಸ್ತುವಾರಿ ಪ್ರತಾಪನ್‍ ಹೇಳಿದರು. ಅವರು ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮಾತನಾಡುತ್ತಾ, ಚುನಾವಣೆಯು ಸಮೀಪಿಸುತ್ತಿರುವುದರಿಂದ ಶೀಘ್ರ ಬಿ.ಎಲ್.ಎ ಹಾಗೂ ಬೂತು ಅಧ್ಯಕ್ಷರ ಸಭೆಗಳನ್ನು ಕರೆಯಲಾಗುವುದು. ಬಿ.ಎಲ್.ಎಗಳಿಗೆ ಗುರುತು ಚೀಟಿ ನೀಡುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಎರಡು ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಸಮಾಪನಗೊಂಡಿದ್ದು, ಇನ್ನೂ ಉಳಿದ ಮೂರು ಕ್ಷೇತ್ರಗಳಲ್ಲಿಯೂ ಹಮ್ಮಿಕೊಳ್ಳಲಾಗುವುದು. ಯಕ್ಷಗಾನದ ಹೆಸರಲ್ಲಿ ಯಕ್ಷಗಾನದ ಸಮಗ್ರತೆಯನ್ನು ಮರೆತು ಪಕ್ಷದ ಸಂಘಟನೆಗೆ ಯಕ್ಷಗಾನ ಕಲೆಯನ್ನು ಬಳಸುವುದು, ಯಕ್ಷಗಾನದ ಬಗ್ಗೆ ಸಮಗ್ರವಾಗಿ ಅರಿತಿರುವ ವಿದ್ವಾಂಸರು ಕರಾವಳಿ ಪ್ರದೇಶದಲ್ಲಿ ಇರುವಾಗ ವಿವಾದಿತ ಲೇಖಕರನ್ನು ಕರೆಸಿ, ದಿಕ್ಸೂಚಿ ಭಾಷಣ ಮಾಡಿಸುವ ಬಿಜೆಪಿಯ ನಡೆ ಕಲೆಯನ್ನೂ ರಾಜಕೀಯಗೊಳಸಿದಂತೆ ಎಂದು ಹೇಳಿದರು.

ಮಾಜಿ ಸಚಿವರು, ಕೆಪಿಸಿಸಿ ಉಪಾಧ್ಯಕ್ಷರಾದ ವಿನಯಕುಮಾರ್ ಸೊರಕೆ ಮಾತನಾಡುತ್ತಾ, ಬರ, ಪ್ರವಾಹ ಬಂದಾಗ ಕರ್ನಾಟಕಕ್ಕೆ ಬಾರದ ಮೋದಿ, ಶಾರವರು ಮತಯಾಚಿಸಲು ಮುಂದಿನ ದಿನಗಳಲ್ಲಿ ಓಣಿ ಓಣಿಗೆ ಬರಬಹುದು. ಈಗಲೂ ಜನ ಮೋದಿ ಮುಖ ನೋಡಿಕೊಂಡು ಮತ ಹಾಕುವ ಪರಿಸ್ಥಿತಿಯಿದೆ ಎಂದರೆ ನಿಮ್ಮ ಸಾಧನೆ ಏನು ಎಂದು ಪಕ್ಷದ ಮುಖಂಡರಿಗೆ ಅಮಿತ್ ಶಾ ಮೊನ್ನೆಯ ತಮ್ಮ ಮಂಗಳೂರು ಭೇಟಿ ವೇಳೆ ಪ್ರಶ್ನಿಸಿರುವುದು ಇದಕ್ಕೆ ಸಾಕ್ಷಿ. ಬಿಜೆಪಿ ಇಷ್ಟರವರೆಗೆ ಧರ್ಮರಾಜಕೀಯದಿಂದ ಜನರ ಹಾದಿ ತಪ್ಪಿಸುತ್ತಿದ್ದರು. ಈಗ ಕಲೆ, ಸಾಹಿತ್ಯ ಕ್ಷೇತ್ರಗಳಿಗೂ ರಾಜಕೀಯದ ಲೇಪ ಹಚ್ಚಿ ಮಲೀನಗೊಳಿಸುವ ಹುನ್ನಾರ ನಡೆದಿದೆ. ರಾಜಕೀಯ ಗುರಿಸಾಧನೆಗೆ ಧರ್ಮ, ಕಲೆ, ಸಾಹಿತ್ಯವನ್ನು ದುರ್ಬಳಕೆ ಮಾಡುವುದು ಅತ್ಯಂತ ಖಂಡನೀಯ ಎಂದರು.

ಕೇರಳ ಪ್ರದೇಶ್ ಕಾಂಗ್ರೆಸ್ ಸಮಿತಿಯ ಪ್ರ. ಕಾರ್ಯದರ್ಶಿ ನೌಷಾದ್ ಹಾಗೂ ಮುಖಂಡರಾದ ಎಮ್.ಎ.ಗಫೂರ್, ದಿನೇಶ್ ಪುತ್ರನ್, ಭುಜಂಗ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮಂಜುನಾಥ ಪೂಜಾರಿ, ಶ್ಯಾಮಲಾ ಭಂಡಾರಿ, ಬಿ. ನರಸಿಂಹಮೂರ್ತಿ, ಪ್ರಶಾಂತ ಜತ್ತನ್ನ, ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಇಸ್ಮಾಯಿಲ್ ಆತ್ರಾಡಿ, ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಪಕ್ಷದ ಮುಖಂಡರಾದ ಹಿರಿಯಣ್ಣ, ಪ್ರಖ್ಯಾತ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ, ದಿವಾಕರ್ ಕುಂದರ್, ಮುರಲಿ ಶೆಟ್ಟಿ, ಶಶಿಧರ ಶೆಟ್ಟಿ, ಎಲ್ಲೂರು, ಜಯಕುಮಾರ್, ರೋಶನ್ ಶೆಟ್ಟಿ, ಬಿಪಿನ್ ಚಂದ್ರಪಾಲ್ ನಕ್ರೆ, ಅಬೀಬ್ ಆಲಿ, ಸಂತೋಷ ಕುಲಾಲ್, ಸದಾಶಿವ ದೇವಾಡಿಗ, ಸೌರಭ ಬಲ್ಲಾಳ್, ಯತೀಶ್ ಕರ್ಕೇರ, ಕಿಶೋರ್ ಕುಮಾರ್ ಎರ್ಮಾಳ್, ಉದ್ಯಾವರ ನಾಗೇಶ್ ಕುಮಾರ್, ಬಾಲಕೃಷ್ಣ ಪೂಜಾರಿ, ಉಪೇಂದ್ರ ಮೆಂಡನ್, ರೇವತಿ ಶೆಟ್ಟಿ, ಹಮೀದ್, ಲೂಯಿಸ್ ಲೋಬೋ, ಕೇಶವ ಕೋಟ್ಯಾನ್, ರಾಜೇಶ್ ಶೆಟ್ಟಿ ಕುಂಬ್ರಗೋಡು, ಉಪೇಂದ್ರ ಗಾಣಿಗ, ವಿಲ್ಸನ್ ರೋಡ್ರಿಗಸ್ ಉಪಸ್ಥಿತರಿದ್ದರು.

ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಸ್ವಾಗತಿಸಿ, ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ ವಂದಿಸಿದರು. ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.