ಕೋಟ: ಪ್ರವಾಸ ಕಥನವು ಬರಹಗಾರನ ನೈಜ ಅನುಭವದ ಮಾಲಿಕೆಯಾಗಿದ್ದು, ಪ್ರವಾಸದುದ್ದಕ್ಕೂ ತಾನು ಪಡೆದುಕೊಂಡ ಅನುಭವಗಳ ಎಳೆ ಎಳೆಯಾಗಿ ಬಿಚ್ಚಿಡುವ ಕಥನ ಅದು ಬದುಕಿನ ಒಂದು ಭಾಗವೇ ಸರಿ. ಲೇಖಕ ಗೋಪಾಲ ತ್ರಾಸಿ ಅವರ ಪ್ರವಾಸ ಕಥನ “ಲಂಡನ್ ಟು ವ್ಯಾಟಿಕನ್ ಸಿಟಿ (ಎಂಟು ದೇಶ-ನೂರೆಂಟು ವಿಶೇಷ)” ಪ್ರವಾಸ ಕಥನ ಓದುಗರಲ್ಲಿ ಪ್ರವಾಸ ಸಾಹಿತ್ಯದ ಕುರಿತು ವಿಶೇಷ ಅಭಿರುಚಿ ನೀಡುವುದರಲ್ಲಿ ಸಂಶಯವಿಲ್ಲ.
ಕೃತಿಯಲ್ಲಿನ ವರ್ಣರಂಜಿತ ಭಾಷ ಪ್ರಯೋಗ ಎಲ್ಲರನ್ನು ಆಕರ್ಷಿಸಲಿದೆ ಎಂದು ಸಾಹಿತಿ, ಶಿಕ್ಷಕ ಸತೀಶ್ ವಡ್ಡರ್ಸೆ ಹೇಳಿದರು.
ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ಗೋಪಾಲ ತ್ರಾಸಿ ಅವರ “ಲಂಡನ್ ಟು ವ್ಯಾಟಿಕನ್ ಸಿಟಿ (ಎಂಟು ದೇಶ-ನೂರೆಂಟು ವಿಶೇಷ)” ಪ್ರವಾಸ ಕಥನ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕದ ಪರಿಚಯದ ಕುರಿತು ಮಾತನಾಡುತ್ತಿದ್ದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಯುವ ಜನಾಂಗ ಇತ್ತೀಚಿನ ದಿನಗಳಲ್ಲಿ ಸಾಹಿತ್ಯದ ಬಗ್ಗೆ ಒಲವು ತೋರಿಸುತ್ತಿರುವುದು ಸಂತಸದ ವಿಷಯ ಎಂದರು.
ಲೇಖಕ ಗೋಪಾಲ ತ್ರಾಸಿ, ಸಾಹಿತಿ ಅಮಿತಾಂಜಲಿ ಕಿರಣ್, ಸಾಹಿತಿ ಹಾಗೂ ಉಪನ್ಯಾಸಕಿ ವಾಸಂತಿ ಅಂಬಲಪಾಡಿ, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಪ್ರತಿಷ್ಠಾನದ ಅಧ್ಯಕ್ಷ ಆನಂದ್ ಸಿ ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸುಬ್ರಾಯ ಆಚಾರ್, ಸುಮನ ಆರ್ ಹೇರ್ಳೆ, ಉಪನ್ಯಾಸಕ ಸಂಜೀವ, ಪ್ರಶಾಂತ್ ಉಪಸ್ಥಿತರಿದ್ದರು.