Home ಸುದ್ಧಿಗಳು ಪ್ರಾದೇಶಿಕ ವಿಜಯ ಕೊಡವೂರು ನೇತೃತ್ವದಲ್ಲಿ ‘ಮಿನಿ ಉದ್ಯೋಗ ಮೇಳ’

ವಿಜಯ ಕೊಡವೂರು ನೇತೃತ್ವದಲ್ಲಿ ‘ಮಿನಿ ಉದ್ಯೋಗ ಮೇಳ’

322
0

ಉಡುಪಿ, ಫೆ. 7: ಸ್ವಾವಲಂಬಿ ಭಾರತ ಉಡುಪಿ ಜಿಲ್ಲೆ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ, ರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿಗಳ ಸಂಘ ಸಹಯೋಗದಲ್ಲಿ ಶ್ರೀ ಭಗವಾನ್ ನಿತ್ಯಾನಂದಸ್ವಾಮಿ ಮಂದಿರ ಉಡುಪಿ ಇಲ್ಲಿ ಸ್ವಾವಲಂಬಿ ಭಾರತ ಜಿಲ್ಲಾ ಸಮನ್ವಯಕಾರರಾದ ವಿಜಯ ಕೊಡವೂರು ಇವರ ಸಂಯೋಜನೆಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಿತು.

ತೋಟದ ಮನೆ ದಿವಾಕರ್ ಶೆಟ್ಟಿ ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ನಂತರ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಮಾತನಾಡಿ, ನಮ್ಮ ದೇಶದಲ್ಲಿನ ಯುವಜನರಲ್ಲಿನ ನಿರುದ್ಯೋಗ ಸಮಸ್ಯೆ ಒಂದು ಗಂಭೀರ ಸಮಸ್ಯೆಯಾಗಿದ್ದು, ವಿದ್ಯಾವಂತ ಯುವಕ ಯುವತಿಯರು ಉದ್ಯೋಗ ಹುಡುಕುವ ಬದಲು ಸ್ವಯಂ ಉದ್ಯೋಗ ಕೊಡುವವರಾಗಿ ಬೆಳೆಯಬೇಕು. ಸ್ವಂತ ಉದ್ಯಮಗಳನ್ನು ಕಟ್ಟಿ ಬೆಳೆಸಬೇಕು. ಈ ದಿಸೆಯಲ್ಲಿ ಚಿಂತಿಸಿ ಮುಂದೆ ಬರಬೇಕು.

ADVERTISEMENT

ನೂತನ ಉದ್ಯಮಗಳನ್ನು ಹುಟ್ಟುಹಾಕಬೇಕೆಂಬುದಾಗಿ ಕರೆ ನೀಡಿದರು. ಸರಕಾರವೂ ಇಂತಹ ಪ್ರಯತ್ನಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಈ ನಿಟ್ಟಿನಲಿ ಕೊಡವೂರು ವಾರ್ಡನ್ನು ಸರ್ವೆ ಮಾಡಿ ಅಲ್ಲಿರುವ ನಿರೋದ್ಯೋಗಿಗಳ ಪಟ್ಟಿ ಪಡೆದು ಅವರಿಗೆ ಉದ್ಯೋಗ ನೀಡುವಂತಹ ಕಾರ್ಯ ನಡೆಯುತ್ತಿದೆ. ಇದುವರೆಗೆ 73 ಜನರಿಗೆ ಉದ್ಯೋಗ ನೀಡುವಂತದ್ದು ಕೊಡವೂರು ವಾರ್ಡಿನಲ್ಲಿ ನಡೆದಿದೆ ಎಂದರು.

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ಅಧ್ಯಕ್ಷರಾದ ಜನಾರ್ಧನ್ ಕೊಡವೂರು, ಎನ್.ಪಿ.ಯು.ಎಸ್.ತಿ. ಎ ಸಂಸ್ಥಾಪಕ ಮಿತೇಷ್ ಕುಮಾರ್ ಮೂಡುಕೊಣಾಜೆ, ಕೊಡವೂರು ಅಯ್ಯಪ್ಪ ಸ್ವಾಮಿ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ಮೆಂಡನ್ ಉಪಸ್ಥಿತರಿದ್ದರು. ಶರೋನ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.