Home ಸುದ್ಧಿಗಳು ಪ್ರಾದೇಶಿಕ ಕರಾಟೆ- ಎಚ್.ಎಂ.ಎಂ ವಿದ್ಯಾರ್ಥಿಗಳ ಸಾಧನೆ

ಕರಾಟೆ- ಎಚ್.ಎಂ.ಎಂ ವಿದ್ಯಾರ್ಥಿಗಳ ಸಾಧನೆ

1223
0

ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಂ. ಎಂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬುಡೋಕಾಯ್ ಕರಾಟೆ ಅಕಾಡೆಮಿ ವತಿಯಿಂದ ಆಯೋಜಿಸಲ್ಪಟ್ಟ 9ನೇ ರೈನ್ಬೋ ಕಪ್ 2022-23 ರಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.

ಎರಡನೇ ತರಗತಿಯ ಆರ್ಯನ್. ಕೆ. ಪೂಜಾರಿ ಕಟ ಮತ್ತು ಕುಮಿಟೆಯಲ್ಲಿ ಚಿನ್ನದ ಪದಕ, ಐದನೇ ತರಗತಿಯ ಶ್ರೇಯಸ್ ಎಸ್.ಕೆ. ಕುಮಿಟೆಯಲ್ಲಿ ಮೂರನೇ ಸ್ಥಾನ, ಭುವನ್ ಎಸ್ ಕುಮಿಟೆಯಲ್ಲಿ ಪ್ರಥಮ ಸ್ಥಾನ ಮತ್ತು ಕಟದಲ್ಲಿ ಮೂರನೇ ಸ್ಥಾನ ಪಡೆದಿರುತ್ತಾರೆ. ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ಮತ್ತು ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ ವಿಜೇತರನ್ನು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.