ಉಡುಪಿ: ಛಾಯಾಗ್ರಹಣ ಒಂದು ಪರಿಪೂರ್ಣ ಕಲೆ. ಛಾಯಾಗ್ರಾಹಕರು ದಾಖಲೆಗಾರರು. ನೂರಾರು ವರುಷಗಳ ದಾಖಲೆಗಳು ಈಗಲೂ ನಮ್ಮ ಕಣ್ಣ ಮುಂದೆ ಛಾಯಾಚಿತ್ರದ ಮೂಲಕ ನೋಡಬಹುದಾಗಿದೆ ಎಂದು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಳದ ಧರ್ಮದರ್ಶಿ ನಿ.ಬೀ.ವಿಜಯ ಬಲ್ಲಾಳ್ ಅಭಿಪ್ರಾಯಪಟ್ಟರು.
ಅವರು ಅಂಬಲಪಾಡಿ ಶ್ರೀ ಭವಾನಿ ಮಂಟಪದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಉಡುಪಿ ವಲಯದ ಪದಗ್ರಹಣ ಹಾಗೂ 28ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿ ಸ್ಥಾನದಲ್ಲಿ ಮಾತನಾಡಿದರು. ಪ್ರತಿಭಾ ಪುರಸ್ಕಾರ ನೀಡಿ ಸಂಘಟನೆಯ ಕನಸಿನ ಸ್ವಂತ ಕಚೇರಿಗೆ ಕೈಲಾದಷ್ಟು ಸಹಾಯ ಮಾಡುವೆನು ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಛಾಯಾಗ್ರಾಹಕರು ಸಮಾಜದಲ್ಲಿ ತಮ್ಮದೇ ಕೊಡುಗೆಯನ್ನು ನೀಡುತ್ತಿದ್ದಾರೆ. ಛಾಯಾಗ್ರಹಣ ಕ್ಷೇತ್ರ ಎಂದಿಗೂ ಬೇಡಿಕೆ ಕಳೆದುಕೊಳ್ಳದು. ಸ್ವಂತ ಕಟ್ಟಡ ಯೋಜನೆಗೆ ದೊಡ್ಡ ಮೊತ್ತವನ್ನು ಈ ಸಂದರ್ಭದಲ್ಲಿ ಘೋಷಿಸಿದರು.
ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು. ಸಾಪಲ್ಯ ಟ್ರಸ್ಟ್ ನ ಪ್ರವರ್ತಕಿ ನಿರುಪಮಾ ಪ್ರಸಾದ್ ಶೆಟ್ಟಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಆನಂದ್ ಬಂಟ್ವಾಳ್ ನೂತನ ತಂಡಕ್ಕೆ ಅಧಿಕಾರ ಹಸ್ತಾಂತರಿಸಿ ಸಂಘಟನೆಯ ಧ್ಯೇಯೋದ್ದೇಶಗಳನ್ನು ಪರಿಚಯಿಸಿ, ಉಡುಪಿ ವಲಯಕ್ಕೆ ಶುಭ ಹಾರೈಸಿ ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಅಭಿನಂದಿಸಿದರು.
ಸಂಘಟನೆಯಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿದ್ದ ಹಿರಿಯ ಛಾಯಾಗ್ರಾಹಕರಾದ ರಾಮಚಂದ್ರ ಭಟ್, ಸದಾಶಿವ ಸಾಲ್ಯಾನ್, ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಕರಂದಾಡಿ ಶ್ರೀಧರ್ ಶೆಟ್ಟಿಗಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಅಡ್ಯಾರ್, ವಲಯಾಧ್ಯಕ್ಶ ಪ್ರಕಾಶ್ ಕೊಡಂಕೂರ್, ಕಾರ್ಯದರ್ಶಿ ಸುಕೇಶ್ ಅಮೀನ್, ಕೋಶಾಧಿಕಾರಿ ಪ್ರಸಾದ್ ಜತ್ತನ್ ರವರನ್ನು ಅಭಿನಂದಿಸಿ ಗೌರವಿಸಲಾಯಿತು.
ಎಸ್ಕೆಪಿಎ ಸೊಸೈಟಿ ಅಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಸಂಚಾಲಕ ನವೀನ ಕುದ್ರೋಳಿ, ಜಿಲ್ಲಾ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಜಿಲ್ಲಾ ಜೊತೆ ಕಾರ್ಯದರ್ಶಿ ವಾಮನ್ ಪಡುಕೆರೆ, ಗೌರವಾಧ್ಯಕ್ಷ ಜಯಕರ ಸುವರ್ಣ, ಉಪಾಧ್ಯಕ್ಷರಾದ ಸುಧೀರ್ ಎಂ ಶೆಟ್ಟಿ, ಪ್ರವೀಣ್ ಬಂಗೇರ, ಕಟ್ಟಡ ಸಮಿತಿ ಸಂಚಾಲಕ ಆಸ್ಟ್ರೋ ಮೋಹನ್, ವಲಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೊರೆಯ, ಜೊತೆ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಗಳಾದ ಅಶೋಕ್ ಪುತ್ರನ್, ಪ್ರವೀಣ್ ಹರಿಖಂಡಿಗೆ, ಸಂಘಟನಾ ಕಾರ್ಯದರ್ಶಿಗಳಾದ ಮಂಜು ಪರ್ಕಳ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಸತೀಶ್ ಶೇರಿಗಾರ್, ಹರೀಶ್ ಅಲೆವೂರು, ಛಾಯಾ ಕಾರ್ಯದರ್ಶಿ ಸಂದೀಪ್ ಕಾಮತ್, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕೊಡಂಕೂರ್, ಕಾರ್ಯದರ್ಶಿ ಸುಕೇಶ್ ಕೆ ಅಮೀನ್ ಉಪಸ್ಥಿತರಿದ್ದರು.
ಅಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿ, ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ ಧನ್ಯವಾದವಿತ್ತರು. ರಾಘವೇಂದ್ರ ಶೇರಿಗಾರ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಘಟನೆಯ ಸದಸ್ಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ, ಕೊಳಲು ಹಾಗೂ ಯಕ್ಷಗಾನ ನೃತ್ಯರೂಪಕ ಪ್ರದರ್ಶನ ಸಂಪನ್ನಗೊಂಡಿತು.