Home ಸುದ್ಧಿಗಳು ಪ್ರಾದೇಶಿಕ ಪುರುಷೋತ್ತಮ ಭಟ್ ಗೆ ಡಾಕ್ಟರೇಟ್

ಪುರುಷೋತ್ತಮ ಭಟ್ ಗೆ ಡಾಕ್ಟರೇಟ್

365
0

ಮಂಗಳೂರು: ರಥಬೀದಿಯ ಡಾ. ಪಿ. ದಯಾನಂದ ಪೈ- ಪಿ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪುರುಷೋತ್ತಮ ಭಟ್ ಎನ್. ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.

ಉಡುಪಿ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಗೋಪಾಲಕೃಷ್ಣ ಗಾಂವ್ಕರ್ ಮಾರ್ಗದರ್ಶನದಲ್ಲಿ ಪುರುಷೋತ್ತಮ ಭಟ್ ಅವರು ಸಿದ್ಧಪಡಿಸಿದ ‘ಆನ್ ಇಕಾನಮಿಕ್ ಅನಾಲಿಸಿಸ್ ಆಫ್ ಯುಟಿಲೈಸೇಶನ್ ಆಫ್ ಹೆಲ್ತ್ ಕೇರ್ ಸರ್ವಿಸಸ್- ಎ ಕೇಸ್ ಸ್ಟಡಿ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಎಂಬ ಮಹಾಪ್ರಬಂಧಕ್ಕೆ ಕೊಯಂಬತ್ತೂರಿನ ಭಾರತೀಯಾರ್ ವಿಶ್ವವಿದ್ಯಾಲಯ ಪಿ.ಎಚ್.ಡಿ ಪ್ರದಾನ ಮಾಡಿದೆ.

ಪುರುಷೋತ್ತಮ ಭಟ್ ಅವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಳೆ ವಿದ್ಯಾರ್ಥಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.