Home ಸುದ್ಧಿಗಳು ಪ್ರಾದೇಶಿಕ ಕ್ರಿಸ್‌ಮಸ್ ಸಹಮಿಲನ

ಕ್ರಿಸ್‌ಮಸ್ ಸಹಮಿಲನ

501
0

ಮಂಗಳೂರು: ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ (ಸಿಒಡಿಪಿ) (ರಿ) ಮಂಗಳೂರು ಇದರ ಆಶ್ರಯದಲ್ಲಿ ಸಿಒಡಿಪಿ ಸಿಬ್ಬಂಧಿ ವರ್ಗದವರು, ಹಿತೈಷಿಗಳು ಹಾಗೂ ದಾನಿಗಳ ಜೊತೆಯಲ್ಲಿ ಕ್ರಿಸ್‌ಮಸ್ ಸಹಮಿಲನ ಕಾರ್ಯಕ್ರಮ ಸಿಒಡಿಪಿ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂ.ಫಾ| ವಿನ್ಸೆಂಟ್ ಡಿಸೋಜ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೆನರಾ ಕಮ್ಯೂನಿಕೆಷನ್ ಸೆಂಟರ್ ಮಂಗಳೂರು ಇದರ ನಿರ್ದೇಶಕರಾದ ವಂ.ಫಾ| ಅನಿಲ್ ಐವನ್‌ರವರು ಶುಭ ಹಾರೈಸಿದರು. ಕ್ರಿಸ್ಮಸ್ ಹಬ್ಬವು ಶಾಂತಿ, ಪ್ರೀತಿಯ ಹಬ್ಬವಾಗಲಿ ಎಂದರು.

ತದನಂತರ ಕಿರು ನಾಟಕವನ್ನು ಸಿರಿಲ್ ನೇತೃತ್ವದಲ್ಲಿ ಪ್ರದರ್ಶನಗೊಂಡಿತು. ದ.ಕ ಸಹಜೀವನ ಒಕ್ಕೂಟದ ಸದಸ್ಯರು ಹಾಗೂ ಸಿಒಡಿಪಿ ವರ್ಗದಿಂದ ಕ್ರಿಸ್ಮಸ್ ಗೀತೆಗಳನ್ನು ಹಾಡಲಾಯಿತು. ಸಿಒಡಿಪಿ ಸಂಸ್ಥೆಯ ಸಿಬ್ಬಂದಿ ಪ್ಯಾಟ್ರಿಷಿಯ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಪೀಟರ್ ಪೌಲ್‌ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.