ಉಡುಪಿ: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ಜನಔಷಧಿ ಕೇಂದ್ರ ಬ್ರಹ್ಮಾವರ ಜಂಟಿ ಆಶ್ರಯದಲ್ಲಿ ಜಯಂಟ್ಸ್ ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮ ಅಜ್ಜರಕಾಡು ಪುರಭವನದಲ್ಲಿ ನೆಡೆಯಿತು. ಉಡುಪಿ ನಗರಸಭೆಯ ಪೌರಾಯುಕ್ತ ಡಾ. ಉದಯ ಶೆಟ್ಟಿ ರವರು ನಗರಸಭೆಯಲ್ಲಿ 30 ವರ್ಷಕ್ಕೂ ಹೆಚ್ಚಿನ ಸೇವೆ ಸಲ್ಲಿಸಿದ ಪೌರ ಕಾರ್ಮಿಕರಾದ ತೇಜಪ್ಪ, ಲಕ್ಷ್ಮಣ ರವರನ್ನು ಗೌರವಿಸದರು.
ನಗರ ಸಭೆಯ ಹಿರಿಯ ಅರೋಗ್ಯ ಅಧಿಕಾರಿ ಕರುಣಾಕರ ಹಾಗು ದ್ವಿತೀಯ ದರ್ಜೆ ಸಹಾಯಕರಾದ ಮನೋಹರ್ ಅವರನ್ನು ಡಾ. ವಿಜಯೇಂದ್ರ, ಡಾ. ರಾಮಚಂದ್ರ ಕಾಮತ ಜತೆಗೂಡಿ ಸನ್ಮಾನಿಸಿದರು.
ನಗರಸಭಾ ಸದಸ್ಯರಾದ ಕೃಷ್ಣ ರಾವ್ ಕೊಡಂಚ, ರಶ್ಮಿ ಚಿತ್ತರಂಜನ್ ಭಟ್, ಜಯಂಟ್ಸ್ ಗ್ರೂಪ್ ಬ್ರಹ್ಮಾವರದ ಅಧ್ಯಕ್ಷರಾದ ಸುಂದರ್ ಪೂಜಾರಿ, ವಲಯ ನಿರ್ದೇಶಕರಾದ ದೇವದಾಸ್ ಕಾಮತ್, ಸುವರ್ಣ ಎಂಟರ್ಪ್ರೈಸಸ್ ಮಾಲಕರಾದ ಮಧುಸೂಧನ್ ಹೇರೂರು, ಸೇವಾ ಭಾರತೀಯ ಪ್ರಭಾಕರ್ ಭಟ್, ವೈದ್ಯಕೀಯ ಪ್ರತಿನಿಧಿ ಸಂಘದ ಪ್ರಸನ್ನ ಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪೌರಕಾರ್ಮಿಕರಿಗೆ ಮಾಸ್ಕ್ ಹಾಗೂ ಕೈಗವಸುಗಳನ್ನು ವಿತರಿಸಲಾಯಿತು.