Home ಸುದ್ಧಿಗಳು ಪ್ರಾದೇಶಿಕ ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಪಾರ್ಕಿಂಗ್; ದಿನನಿತ್ಯ ಟ್ರಾಫಿಕ್ ಜಾಮ್

ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಪಾರ್ಕಿಂಗ್; ದಿನನಿತ್ಯ ಟ್ರಾಫಿಕ್ ಜಾಮ್

549
1

ಉಡುಪಿ: ರಾಷ್ಟ್ರ‍ೀಯ ಹೆದ್ದಾರಿ66 ಬಳಿಯ ಆಶೀರ್ವಾದ ಬಸ್ ನಿಲ್ದಾಣದಿಂದ ಸಂತೆಕಟ್ಟೆ ಜಂಕ್ಷನ್ ವರೆಗಿನ ಸರ್ವಿಸ್ ರಸ್ತೆಯಲ್ಲಿ ಉಡುಪಿಯಿಂದ ಆಗಮಿಸುವ ಸಿಟಿ ಮತ್ತು ಎಕ್ಸ್ಪ್ರೆಸ್ ಬಸ್ ಗಳು ರಾಹೆ66ರಿಂದ (ಆಶೀರ್ವಾದ ಚಿತ್ರ ಮಂದಿರದ ಎದುರು) ಮಾರ್ಗ ಬದಲಿಸಿ ಸಂಚರಿಸುವುದರಿಂದ ಆಗಾಗ್ಗೆ ಟ್ರಾಫಿಕ್ ಜಾಮ್ ಆಗುತ್ತಿದೆ ಎಂಬ ಕೂಗು ಕೇಳಿ ಬಂದಿದೆ. ರಾಹೆ66 ರಿಂದ ಸಂತೆಕಟ್ಟೆಯವರೆಗೆ ಈ ಬಸ್ಸುಗಳು ಸಂಚರಿಸಿದರೆ ಸರ್ವಿಸ್ ರಸ್ತೆಯಲ್ಲಿ ವಾಹನ ದಟ್ಟಣೆ ತಪ್ಪುವುದು ಎಂಬ ಅಭಿಪ್ರಾಯ ಬಹುತೇಕ ಮಂದಿ ವ್ಯಕ್ತಪಡಿಸಿದ್ದಾರೆ. ಆದರೆ ಇಲ್ಲಿಯವರೆಗೆ ಸಂಚಾರಿ ನಿಯಮದಲ್ಲಿ ಬದಲಾವಣೆಯಾಗಿಲ್ಲ, ಅಂದರೆ ಎಂದಿನಂತೆ ಸಿಟಿ ಮತ್ತು ಎಕ್ಸ್ಪ್ರೆಸ್ ಬಸ್ಸುಗಳು ಸರ್ವಿಸ್ ರಸ್ತೆಯಲ್ಲಿಯೇ ಸಂತೆಕಟ್ಟೆ ಬಸ್ ನಿಲ್ದಾಣದವರೆಗೆ ಸಂಚರಿಸುತ್ತವೆ.

ಟ್ರಾಫಿಕ್ ಪೊಲೀಸರು ಸಂತೆಕಟ್ಟೆ ಜಂಕ್ಷನ್ ನಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಿಂತಿರುತ್ತಾರೆ. ಇವರ ಕಣ್ಣು ತಪ್ಪಿಸಿ ಆಶೀರ್ವಾದ ಬಸ್ ನಿಲ್ದಾಣದಿಂದ ಸಂತೆಕಟ್ಟೆ ಬಸ್ ನಿಲ್ದಾಣದವರೆಗೆ ಸರ್ವಿಸ್ ರಸ್ತೆಯಲ್ಲಿ ಅಲ್ಲಲ್ಲಿ ಕಾರ್, ಇತ್ಯಾದಿ ವಾಹನಗಳನ್ನು ಗಂಟೆಗಟ್ಟಲೆ ಅಕ್ರಮವಾಗಿ ಪಾರ್ಕ್ ಮಾಡುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಕ್ರಮವಾಗಿ ಸರ್ವಿಸ್ ರಸ್ತೆಯಲ್ಲಿ ಪಾರ್ಕ್ ಮಾಡಿದ ವಾಹನಗಳನ್ನು ತಪ್ಪಿಸಲು ಎಕ್ಸ್ಪ್ರೆಸ್ ಬಸ್ಸುಗಳು ಎಡದಿಂದ ಬಲಕ್ಕೆ ಬಂದು ಮತ್ತೊಮ್ಮೆ ಎಡಕ್ಕೆ ಹೋಗುವ ಪರಿಸ್ಥಿತಿ. ಇದರಿಂದ ಮುಂದಿನಿಂದ ಬರುವ ವಾಹನಗಳು ಸಂಚರಿಸಲು ಆಗದೇ ಇಂತಹ ವಾಹನಗಳ ದೊಡ್ಡ ಸಾಲಿನಲ್ಲಿ ನಿಂತಿರುವ ದ್ರಶ್ಯ ಸಾಮಾನ್ಯವಾಗಿ ಬಿಟ್ಟಿದೆ.

ಒಬ್ಬ ಮಾಡಿದ ತಪ್ಪಿನಿಂದ ಉಳಿದವರು ತಮ್ಮ ಅಮೂಲ್ಯ ಸಮಯವನ್ನು ರಸ್ತೆಯ ಬದಿಯಲ್ಲೇ ವ್ಯರ್ಥ ಮಾಡುವ ಪರಿಸ್ಥಿತಿ. ಹಲವಾರು ಬಾರಿ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಆಗಿರುವುದು ಇದೇ ಕಾರಣದಿಂದ. ಸುತ್ತಮುತ್ತಲಿನ ಅಂಗಡಿಯವರು ಕಟ್ಟುನಿಟ್ಟಾಗಿ ಗ್ರಾಹಕರಿಗೆ ಸರ್ವಿಸ್ ರಸ್ತೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡಬೇಡಿ ಎಂದು ಹೇಳಿದರೆ ಇಂತಹ ಘಟನೆಗಳು ಕಡಿಮೆಯಾಗುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

ಇಲ್ಲಿಂದ ಕೆಲವೇ ಮೀಟರ್ ದೂರದಲ್ಲಿ ನಿಂತಿರುವ ಟ್ರಾಫಿಕ್ ಪೊಲೀಸರು ಮತ್ತು ಹೈವೇ ಪೆಟ್ರೋಲ್ ಪೊಲೀಸರು ಸರ್ವಿಸ್ ರಸ್ತೆಯಲ್ಲಿ ಅಕ್ರಮವಾಗಿ ಪಾರ್ಕ್ ಮಾಡಿರುವ ವಾಹನಗಳನ್ನು ಉಡುಪಿ ನಗರದಲ್ಲಿ ನಡೆಸುವ ಕಾರ್ಯಾಚರಣೆಯ ಮಾದರಿಯಲ್ಲಿ ಇಲ್ಲಿಯೂ ನಡೆಸಿದರೆ ಇದರಿಂದ ಉಳಿದವರಿಗೆ ಸ್ಪಷ್ಟ ಸಂದೇಶ ಹೋಗುವ ಮೂಲಕ ಆಗಾಗ್ಗೆ ಸರ್ವಿಸ್ ರಸ್ತೆಯಲ್ಲಿ ಸಂಭವಿಸುವ ಟ್ರಾಫಿಕ್ ಜಾಮ್ ನಂತಹ ಘಟನೆಗಳಿಗೆ ಪೂರ್ಣ ವಿರಾಮ ಬೀಳಬಹುದು ಎನ್ನುತ್ತಾರೆ ಸ್ಥಳೀಯರು.

1 COMMENT

  1. Especially this opposite side also. Near Navami bakery people park vehicle as if it is thier own property. That is bus stop and very next is auto stand, still they don’t bother and park vehicles

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.