ಪರಬ್ರಹ್ಮ ಪ್ರತಿಷ್ಠಾನ- ಸ್ಪಿರಿಚುಯ್ಯಲ್ ಸೈನ್ಸ್ ಅಕಾಡೆಮಿ ಉಡುಪಿ ಶಾಖೆ, ಇವರ ಆಯೋಜನೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವು ಉಡುಪಿ ರಥಬೀದಿಯ ಭಂಡಾರಕೇರಿ ಮಠದಲ್ಲಿ ಭಾನುವಾರ ಜರುಗಿತು.
ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಯುವ ಸಾಹಿತಿ, ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತ ಶಿರೂರು ಅವರನ್ನು ಸನ್ಮಾನಿಸಲಾಯಿತು. ಪರಬ್ರಹ್ಮ ಪ್ರತಿಷ್ಠಾನದ ಪ್ರಮುಖರಾದ ವೆಂಕಟೇಶ ಭಾರಧ್ವಜ್, ಜಯಕೃಪ ಭಾರಧ್ವಜ್, ರಮ್ಯಶ್ರೀನಾಗ್, ಹೇಮಲತಾ, ಉಡುಪಿ ಶಾಖಾ ಮುಖ್ಯಸ್ಥರಾದ ರಘುಪತಿ ರಾವ್ ಎಸ್., ಹಾಗೂ ಪರಬ್ರಹ್ಮ ಪ್ರತಿಷ್ಠಾನದ ಪ್ರತಿನಿಧಿಗಳು ಉಪಸ್ಥಿತರಿದ್ದರು.