Home ಸುದ್ಧಿಗಳು ಪ್ರಾದೇಶಿಕ ಅಂತಾರಾಷ್ಟ್ರೀಯ ಭರತನಾಟ್ಯ ಸ್ಪರ್ಧೆಯಲ್ಲಿ ಪನ್ನಗ ರಾವ್ ಪ್ರಥಮ

ಅಂತಾರಾಷ್ಟ್ರೀಯ ಭರತನಾಟ್ಯ ಸ್ಪರ್ಧೆಯಲ್ಲಿ ಪನ್ನಗ ರಾವ್ ಪ್ರಥಮ

1087
0

ಉಡುಪಿ: ಕೇರಳ ರಾಜ್ಯದ ಮಾತೃಭೂಮಿ ಮತ್ತು ಕ್ಲಬ್ ಎಫ್ ಎಂ ಇವರು ನಡೆಸುವ “ಮಾತೃಭೂಮಿ ನಾದನಂ ಶೋಭನಂ – 2021” ಅಂತಾರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಉಡುಪಿಯ ಸೃಷ್ಟಿ ನೃತ್ಯ ಕಲಾಕುಟೀರದ ವಿದ್ಯಾರ್ಥಿನಿ ಪಿ. ಜಿ ಪನ್ನಗ ರಾವ್ ಇವರು ಪ್ರಥಮ ಸ್ಥಾನವನ್ನು ಮತ್ತು ನಗದು ಬಹುಮಾನವನ್ನು ಗಳಿಸಿದ್ದಾರೆ.

ನಾಲ್ಕು ಹಂತಗಳಲ್ಲಿ ನಡೆದ ಪ್ರಾಯೋಗಿಕ ಮತ್ತು ವಾಕ್ಪರೀಕ್ಷೆಗಳಲ್ಲಿ ಪ್ರಸಿದ್ಧ ಭರತನಾಟ್ಯ ಕಲಾವಿದೆ ಮತ್ತು ಚಲನಚಿತ್ರ ನಟಿ ಶೋಭನಾ ಇವರು ನಿರ್ಣಾಯಕರಾಗಿ ಭಾಗವಹಿಸಿದ್ದರು. ಉಡುಪಿಯ ಗಣೇಶ್ ರಾವ್ ಮತ್ತು ಸುಮನಾ ಜಿ ರಾವ್ ದಂಪತಿಗಳ ಪುತ್ರಿಯಾಗಿರುವ ಇವರು ಪ್ರಸ್ತುತ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿ.ಕಾಂ ಅಧ್ಯಯನವನ್ನು ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.