Friday, September 11, 2026
Friday, September 11, 2026

ಕೃಷಿಯಿಂದ ಸ್ವಾವಲಂಬಿ ಭಾರತ ನಿರ್ಮಾಣ: ಸಚಿವ ಪಾಟೀಲ್

ಕೃಷಿಯಿಂದ ಸ್ವಾವಲಂಬಿ ಭಾರತ ನಿರ್ಮಾಣ: ಸಚಿವ ಪಾಟೀಲ್

Date:

ಫಲವತ್ತಾದ ಕೃಷಿ ಭೂಮಿ ಹಡಿಲು ಬಿಡುವುದು ರಾಷ್ಟ್ರಕ್ಕೆ ಮಾಡುವ ದ್ರೋಹ. ಭೂಮಿ ತಾಯಿಯನ್ನು ಹಸನಾಗಿಸಿದರೆ ಆ ತಾಯಿ ನಮಗೆ ಚಿನ್ನದಂತಹ ಬೆಳೆಯನ್ನು ನೀಡುತ್ತಾಳೆ. ಹಡಿಲು ಭೂಮಿಯನ್ನು ಕೃಷಿ ಮಾಡಲು ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಕಾರ್ಯ ರಾಷ್ಟ್ರಕ್ಕೆ ಮಾದರಿ ಎಂದು ಕೃಷಿ ಸಚಿವರಾದ ಬಿ. ಸಿ. ಪಾಟೀಲ್ ಹೇಳಿದರು.

ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 110 ಎಕರೆ ಹಡಿಲು ಭೂಮಿಯನ್ನು ಸಾವಯವ ಕೃಷಿ ಮಾಡಲಾಗುತ್ತಿದ್ದು, ಕಡೆಕಾರ್ ಗ್ರಾಮದ ಭುವನೇಂದ್ರ ಕಿದಿಯೂರು ಅವರ ಮನೆ ಹಿಂಬದಿಯ 40 ಎಕರೆ ಹಡಿಲು ಭೂಮಿ ಕೃಷಿಯ ನಾಟಿ ಕಾರ್ಯಕ್ಕೆ ಸಚಿವರು ಶನಿವಾರ ಚಾಲನೆ ನೀಡಿ ಮಾತನಾಡಿದರು.

ಕೃಷಿಯಿಂದ ಸ್ವಾವಲಂಬಿ ಭಾರತದ ನಿರ್ಮಾಣ ಸಾಧ್ಯ. ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಕ್ಷೇತ್ರ ಶೇ. 60 ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಕೊರೋನಾದಂತಹ ಸಂಕಷ್ಟದ ಸ್ಥಿತಿಯಲ್ಲಿಯೂ ಕೃಷಿ ಕ್ಷೇತ್ರ ಸದೃಢವಾಗಿದೆ. ರಾಜ್ಯದಲ್ಲಿ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಡಿಲು ಭೂಮಿಯಿದೆ. ಈ ಭೂಮಿಯಲ್ಲಿ ಕೃಷಿ ಕಾರ್ಯವಾದರೆ ಆಹಾರ ಉತ್ಪಾದನೆಯಲ್ಲಿ ಗಣನೀಯ ಪ್ರಗತಿಯಾಗುವುದು. ಹಿಂದಿನ ವರ್ಷ ರಾಜ್ಯದಲ್ಲಿ 153 ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು.

ಕೃಷಿ ಸಚಿವರೊಂದಿಗೆ ಶಾಸಕ ಕೆ. ರಘುಪತಿ ಭಟ್ ಅವರು ಯಂತ್ರ ನಾಟಿಗೆ ಚಾಲನೆ ನೀಡಿ ಸ್ಥಳೀಯರೊಂದಿಗೆ ಸೇರಿ ನೇಜಿ ನಟ್ಟರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ದಾಮಾ ರವೀಂದ್ರ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಉದ್ಯಮಿ ಭುವನೇಂದ್ರ ಕಿದಿಯೂರು, ರಿಕೇಶ್, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ಕೆ. ರಾಘವೇಂದ್ರ ಕಿಣಿ, ಸದಸ್ಯರಾದ ಮಹೇಶ್ ಠಾಕೂರ್, ದಿನಕರ್ ಬಾಬು ಮತ್ತು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆಂಪೇಗೌಡ, ಉಪ ನಿರ್ದೇಶಕರಾದ ಸೂರ್ಯಕಾಂತ್ ಬಿರಾದರ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಮುಖ್ಯಸ್ಥರಾದ ಡಾ.ಬಿ ಧನಂಜಯ್, ಸಂಶೋಧನಾ ನಿರ್ದೇಶಕರಾದ ಲಕ್ಷ್ಮಣ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ: ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ

ಉಡುಪಿ, ಸೆ.11: ಸರ್ಕಾರಿ ಜಿಲ್ಲಾ ಆಸ್ಪತ್ರೆ, ಅಜ್ಜರಕಾಡು, ಉಡುಪಿ – ಮನೋರೋಗ...

ಗುರುನರಸಿಂಹ ದೇವಸ್ಥಾನದಲ್ಲಿ ಲಕ್ಷ ತುಳಸಿ ಅರ್ಚನೆ

ಉಡುಪಿ, ಸೆ.11: ಕೆ. ರಾಧಾಕೃಷ್ಣ ಬ್ರಹ್ಮ ದಂಪತಿಗಳ ಲಕ್ಷತುಳಸಿ ಅರ್ಚನೆ ಬುಧವಾರ...

ಕ್ರಿಯೇಟಿವ್‌ ಗ್ಲೋಬಲ್‌ ಸ್ಕೂಲ್‌: ಕಾರ್ಕಳ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿ

ಕಾರ್ಕಳ, ಸೆ.10: ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಕಾರ್ಕಳ ತಾಲೂಕು...

ಅಂತರಂಗ ಅರಳಿದಾಗ ಅನುಭವ ಪ್ರಪಂಚ ವಿಸ್ತಾರವಾದಾಗ ಸಾಹಿತ್ಯ ಹುಟ್ಟುವುದು: ವಸಂತಿ ಶೆಟ್ಟಿ ಬ್ರಹ್ಮಾವರ

ಉಡುಪಿ, ಸೆ.10: ನಿತ್ಯ ಜೀವನದ ಅನುಭವಗಳಿಂದ ಸಾಹಿತ್ಯ ಹುಟ್ಟುತ್ತದೆ. ಸಾಹಿತಿ ನೀತಿ...
error: Content is protected !!