Home ಸುದ್ಧಿಗಳು ಪ್ರಾದೇಶಿಕ ಗಂಗೊಳ್ಳಿ: ಸಂಭ್ರಮದ ಕರ್ನಾಟಕ ರಾಜ್ಯೋತ್ಸವ

ಗಂಗೊಳ್ಳಿ: ಸಂಭ್ರಮದ ಕರ್ನಾಟಕ ರಾಜ್ಯೋತ್ಸವ

421
0

ಕುಂದಾಪುರ: ಬೆಂಗಳೂರು ಹೋಟೆಲ್ ನ್ಯೂಸ್ ಪತ್ರಿಕೆ ಮತ್ತು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ಸಮಿತಿ(ರಿ.) ವತಿಯಿಂದ ಗಂಗೊಳ್ಳಿಯಲ್ಲಿ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗಂಗೊಳ್ಳಿಯ ಕನ್ನಡ ಧ್ವಜಕಟ್ಟೆಯ ಬಳಿ ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿದ ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿಯ ಅಧ್ಯಕ್ಷರಾದ ಜಿ.ಗೋಪಾಲ ಪೂಜಾರಿ ಮಾತನಾಡಿ, ಕನ್ನಡಿಗರಾದ ನಾವು ನಮ್ಮ ದಿನನಿತ್ಯದ ಸಂವಹನದಲ್ಲಿ ಹೆಚ್ಚೆಚ್ಚು ಕನ್ನಡವನ್ನು ಬಳಸಬೇಕು. ಕನ್ನಡ ನಾಡು ನುಡಿಯ ಬಗ್ಗೆ ಸದಾಕಾಲ ಗೌರವ ಅಭಿಮಾನವನ್ನು ಹೊಂದಿರಬೇಕು ಎಂದು ಹೇಳಿದರು.

ನಟ ಪುನೀತ್ ರಾಜಕುಮಾರ್ ಅವರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿದರು.

ಪಂಚಾಯತ್ ಸದಸ್ಯ ನಾಗರಾಜ ಖಾರ್ವಿ, ಲಕ್ಷ್ಮಣ ಪೂಜಾರಿ, ಶಂಕರ ಪೂಜಾರಿ, ಭಾಸ್ಕರ, ಸಂಜೀವ, ಮೊಹಮ್ಮದ್ ಇಬ್ರಾಹಿಂ, ಗಂಗಾಧರ ಪೈ, ನಾಗರಾಜ ಶೇರುಗಾರ್, ಅಭಿಜಿತ್, ರವೀಂದ್ರ ಪಟೇಲ್, ಪ್ರಕಾಶ್ ಪಡಿಯಾರ್, ಗೋವಿಂದರಾಯ ನಾಯಕ್, ರತ್ನ ಖಾರ್ವಿ, ಗುರು ಪಟೇಲ್, ಅಜಿತ್ ನಾಯಕ್, ಭದ್ರಾ, ಲಕ್ಷ್ಮಣ ಬಿಲ್ಲವ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಕೊಡೇರಿ ಸ್ವಾಗತಿಸಿ ವಂದಿಸಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.