ಕಾರ್ಕಳ: ಎನ್‌ಟಿಎ ನಡೆಸಿದ ಅಖಿಲ ಭಾರತ ಮಟ್ಟದ ಪ್ರತಿಷ್ಠಿತ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಪ್ರವೇಶ ಪರೀಕ್ಷೆಯಲ್ಲಿ ಗಣಿತನಗರ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸುಕ್ಷಿತ್.ಪಿ.ಎಚ್ 100 ಪರ್ಸೆಂಟೈಲ್‌ನೊಂದಿಗೆ ಜನರಲ್ ಮೆರಿಟ್ ವಿಭಾಗದಲ್ಲಿ 7ನೇ ರ‍್ಯಾಂಕ್ ಮತ್ತು ಶ್ರೇಯಸ್.ಕೆ 99.9833 ಪರ್ಸೆಂಟೈಲ್‌ನೊಂದಿಗೆ 25ನೇ ರ‍್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 8ನೇ ರ‍್ಯಾಂಕ್ ಗಳಿಸಿರುತ್ತಾರೆ.



ಇವರ ಸಾಧನೆಯನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಹಾಗೂ ಜ್ಞಾನಸುಧಾ ಬಳಗ ಅಭಿನಂದಿಸಿರುತ್ತದೆ.