Saturday, January 18, 2025
Saturday, January 18, 2025

ಕೆ.ಎಂ.ಸಿ ಮಣಿಪಾಲ- ಆಂಟಿಮೈಕ್ರೊಬಿಯಲ್ ಪ್ರತಿರೋಧದ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ

ಕೆ.ಎಂ.ಸಿ ಮಣಿಪಾಲ- ಆಂಟಿಮೈಕ್ರೊಬಿಯಲ್ ಪ್ರತಿರೋಧದ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ

Date:

ಮಣಿಪಾಲ: ಸಾಂಕ್ರಾಮಿಕ ರೋಗಗಳ ವಿಭಾಗ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲವು ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ಸಪ್ತಾಹದ ಅಂಗವಾಗಿ 18 ನವೆಂಬರ್ 2021 ರಿಂದ 24 ನವೆಂಬರ್ 2021 ರವೆರೆಗೆ ಆಂಟಿಮೈಕ್ರೊಬಿಯಲ್ ಪ್ರತಿರೋಧದ ಕುರಿತು ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ. ಈ ವರ್ಷದ ಧ್ಯೇಯ ವಾಕ್ಯ “ಜಾಗೃತಿಯನ್ನು ಹರಡಿ ಪ್ರತಿರೋಧವನ್ನು ನಿಲ್ಲಿಸಿ”.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು, ವಿಶ್ವ ಆರೋಗ್ಯ ಸಂಸ್ಥೆಯು, ಮಾನವ ಆರೋಗ್ಯಕ್ಕೆ ಇರುವ 10 ಬೆದರಿಕೆಗಳಲ್ಲಿ ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ಒಂದು ಎಂದು ಘೋಷಿಸಿದೆ. ಇಂದು ಆಂಟಿಮೈಕ್ರೊಬಿಯಲ್ ಪ್ರತಿರೋಧವು ಪ್ರತಿ ನಿಮಿಷಕ್ಕೆ ಒಬ್ಬ ವ್ಯಕ್ತಿಯನ್ನು ಕೊಲ್ಲುತ್ತಿದೆ ಮತ್ತು ಇದು ಬಹಳ ಸಂಕೀರ್ಣವಾದ ಸಮಸ್ಯೆಯಾಗಿದೆ.

ಇದನ್ನು ತಡೆಗಟ್ಟಲು ಏಕೀಕೃತ ಮುಲ್ಟಿಸೆಕ್ಟರಲ್ ವಿಧಾನದ ಅಗತ್ಯವಿದೆ. ವೇಗವರ್ಧಿತ ಬೆದರಿಕೆಗೆ ಕೆಲವು ಕಾರಣಗಳೆಂದರೆ- 1) ಆ್ಯಂಟಿಬಯೋಟಿಕ್ಗಳ ಅತಿಯಾದ ಬಳಕೆ ಅಥವಾ ದುರ್ಬಳಕೆ, 2) ಜಾನುವಾರುಗಳಲ್ಲಿ ಪ್ರತಿಜೀವಕಗಳ ವ್ಯಾಪಕ ಬಳಕೆ, ಕೃಷಿ ಚಟುವಟಿಕೆಗಳಲ್ಲಿ ಪ್ರತಿಜೀವಕ ವ್ಯಾಪಕ ಬಳಕೆ, ಕಳಪೆ ರೋಗ ನಿರ್ಣಯ, ತಪ್ಪಾದ ಔಷದಗಳ ಅಭ್ಯಾಸ 3) ಸಾರ್ವಜನಿಕ ಆರೋಗ್ಯ ಸಮಸ್ಯೆಗಳಾದ ನೈರ್ಮಲ್ಯ, ಶುದ್ಧ ಕುಡಿಯುವ ನೀರಿನ ಅಭಾವ. ಆದ್ದರಿಂದ 2015 ರಲ್ಲಿ ಆಂಟಿಮೈಕ್ರೊಬಿಯಲ್ ಸಮಸ್ಯೆಯನ್ನು ನಿಭಾಯಿಸಲು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿತು ಎಂದರು.

ಚೆನ್ನೈ ಅಪೋಲೋ ಆಸ್ಪತ್ರೆಯ ಹಿರಿಯ ಸಾಂಕ್ರಾಮಿಕ ರೋಗ ಸಲಹೆಗಾರರು ಮತ್ತು ಮತ್ತು ಕ್ಲಿನಿಕಲ್ ಇನ್ಫೆಕ್ಷಿಯಸ್ ಡಿಸೀಸ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರಾಗಿರುವ ಡಾ. ರಾಮಸುಬ್ರಮಣಿಯನ್ ಗೌರವ ಅತಿಥಿಯಾಗಿ ಮಾತನಾಡಿ, ಆರಂಭದ ದಶಕಗಳಲ್ಲಿ ಕೆಲವು ಮಾತ್ರ ಸಾಂಕ್ರಾಮಿಕ ರೋಗಗಳ ತಜ್ಞರಿದ್ಧರು ಮತ್ತು ಭಾರತದ ಹೆಚ್ಚಿನ ಭಾಗದಲ್ಲಿ ಈ ತಜ್ಞರ ಕೊರತೆಯಿದೆ ಎಂದು ಹೇಳಿದರು.

ಈಗ ಸಾಂಕ್ರಾಮಿಕ ರೋಗ ವಿಭಾಗವು ದೇಶದ ಎಲ್ಲಾ ಭಾಗದಲ್ಲಿ ಮಹತ್ತರವಾಗಿ ಅಭಿವೃದ್ಧಿ ಹೊಂದಿದ್ದು, ಡಾ.ಕವಿತಾ ಸರವು ಅವರನ್ನು ಅಭಿನಂದಿಸಿ ಇಲಾಖೆಗೆ ಶುಭ ಹಾರೈಸಿದರು. ಎಲ್ಲಾ ಸಾಂಸ್ಥಿಕ ಮುಖ್ಯಸ್ಥರು ಮತ್ತು ನೀತಿ ನಿರೂಪಕರು ಆಂಟಿಮೈಕ್ರೊಬಿಯಲ್ ಕಣ್ಗಾವಲು ಬಲಪಡಿಸಲು ಮತ್ತು ಇರುವ ನೀತಿಗಳನ್ನು ಪರಿಣಾಮಕಾರಿಯಾಗಿ ಅಭ್ಯಾಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಅವರು ಒತ್ತಾಯಿಸಿದರು.

ಸಮ್ಮೇಳನದ ಮುಖ್ಯ ಆಯೋಜಕರಾದ ಡಾ. ಕವಿತಾ ಸರವು, ಸಮ್ಮೇಳನದ ಕುರಿತು ಅವಲೋಕನ ನೀಡಿದರು. ಈ ಸಮ್ಮೇಳನವು 5 ದಿನಗಳ ಕಾಲ ನಡೆಯಲಿದ್ದು ಆಂಟಿಮೈಕ್ರೊಬಿಯಲ್ ಪ್ರತಿರೋಧ ಮತ್ತು ಉಸ್ತುವಾರಿಯ ವಿವಿಧ ಅಂಶಗಳ ಕುರಿತು ಚರ್ಚಿಸಲು 11 ತಜ್ಞರು ಭಾಗವಹಿಸಲಿದ್ದಾರೆ.

ಈ ಸಮ್ಮೇಳನದಲ್ಲಿ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ತುರ್ತು ವೈದ್ಯಕೀಯ ಇಲಾಖೆ, ಕೆ.ಎಂ.ಸಿ ಮಂಗಳೂರಿನ ಜನರಲ್ ಮೆಡಿಸಿನ್ ಮತ್ತು ಮೈಕ್ರೋಬಯಾಲಜಿ ವಿಭಾಗಗಳು, ಎಂ.ಕಾಪ್ಸ್ ನಿಂದ ಫಾರ್ಮಸಿ ಅಭ್ಯಾಸ ವಿಭಾಗ ಮತ್ತು ವೇಯ್ನ್ ಸ್ಟೇಟ್ ಯೂನಿವರ್ಸಿಟಿ, ಯು.ಎಸ್.ಎ ನ ಸಾಂಕ್ರಾಮಿಕ ರೋಗಗಳ ವಿಭಾಗ ಭಾಗವಹಿಸಲಿದ್ದಾರೆ.

ಕೆಎಂಸಿ ಮಣಿಪಾಲದ ಡೀನ್ ಶರತ್ ಕುಮಾರ್ ರಾವ್ ಸ್ವಾಗತಿಸಿ, ಡಾ ಸ್ನೇಹಾ ದೀಪಕ್ ಮಲ್ಯ ವಂದಿಸಿದರು. ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!