Home ಸುದ್ಧಿಗಳು ಪ್ರಾದೇಶಿಕ ಉಡುಪಿ- ಮರಳು ಲಭ್ಯತೆ ಮಾಹಿತಿ

ಉಡುಪಿ- ಮರಳು ಲಭ್ಯತೆ ಮಾಹಿತಿ

578
0

ಉಡುಪಿ: ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿನ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಗುರುತಿಸಲಾಗಿರುವ ಮರಳು ದಿಬ್ಬಗಳನ್ನು ತೆರವುಗೊಳಿಸುವ ದೋಣಿಗಳಿಗೆ ಹಾಗೂ ಮರಳು ಸಾಗಾಣಿಕಾ ವಾಹನಗಳಿಗೆ ಅಳವಡಿಸಿರುವ ಜಿ.ಪಿ.ಎಸ್ ತಂತ್ರಾಂಶದ ನಿಯಂತ್ರಣ ಹಾಗೂ ಉಲ್ಲಂಘನೆ ಬಗ್ಗೆ ಪರಿಶೀಲಿಸಲು GPS Monitoring Center ಅನ್ನು ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಅನಧಿಕೃತ ಉಪಖನಿಜ ಗಣಿಗಾರಿಕೆ/ ಸಾಗಾಣಿಕೆ/ ದಾಸ್ತಾನು ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ 24X7 ರ ದೂರವಾಣಿ ದೂರು ಸೇವೆ, ಷರತ್ತು ಉಲ್ಲಂಘನೆ ಸೂಚನೆ (ಅಲರ್ಟ್) ಡ್ಯಾಶ್ ಬೋರ್ಡ್ ಇರುವ ಸೇವೆಯನ್ನು ಕಲ್ಪಿಸಿ ಕಂಟ್ರೋಲ್ ರೂಮ್‌ನ್ನು 24X7 ರಂತೆ ಸೇವೆಯನ್ನು e-Governence ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಿಬ್ಬಂದಿಯ ತಾಂತ್ರಿಕ ಸಹಾಯದಿಂದ ಪ್ರಾರಂಭಿಸಲಾಗಿರುತ್ತದೆ.

ಸದರಿ ಕಂಟ್ರೋಲ್ ರೂಮ್‌ನ ದೂರವಾಣಿ ಸಂಖ್ಯೆ: 0820-2950088 ಆಗಿರುತ್ತದೆ ಹಾಗೂ ಅನಧಿಕೃತ ಉಪಖನಿಜ ಗಣಿಗಾರಿಕೆ/ ಸಾಗಾಣಿಕೆ/ ದಾಸ್ತಾನು ನಿಯಂತ್ರಿಸುವ ಸಲುವಾಗಿ ಉಡುಪಿ ಜಿಲ್ಲೆಯಲ್ಲಿ ತಾಲ್ಲೂಕು ಮಟ್ಟದ
ಅಧಿಕಾರಿಗಳನ್ನೊಳಗೊಂಡ ಚಾಲಿತ ದಳವನ್ನು ರಚಿಸಲಾಗಿರುತ್ತದೆ.

ಮುಂದುವರೆದು ಉಡುಪಿ ಜಿಲ್ಲೆಯ ಕುಂದಾಪುರ, ಬ್ರಹ್ಮಾವರ ಮತ್ತು ಉಡುಪಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ವಾರಾಹಿ, ಸೌಪರ್ಣಿಕಾ, ಸ್ವರ್ಣಾ ಮತ್ತು ಸೀತಾ ನದಿ ಪಾತ್ರಗಳಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಹಾಗೂ ಜಿಲ್ಲಾ
ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ (NON CRZ) ಪ್ರದೇಶದಲ್ಲಿ ಮರಳು ಗಣಿ ಗುತ್ತಿಗೆಗಳಲ್ಲಿ ಮರಳು ಪೂರೈಕೆಯ ಕಾರ್ಯ ಪ್ರಗತಿಯಲ್ಲಿದ್ದು, ಸದರಿ ಮರಳನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ UDUPI
E-SAND APP ನ ಮೂಲಕ ಪೂರೈಸಲಾಗುತ್ತಿದ್ದು, ಮರಳು ಅವಶ್ಯಕತೆ ಇರುವವರು ಅಂತರ್ಜಾಲದಲ್ಲಿ http://udupiesand.com ನ್ನು ಸಂದರ್ಶಿಸಿ ತಮ್ಮ ಹೆಸರು/ ವಿಳಾಸ ದಾಖಲಿಸಿ ಬೇಕಾಗಿರುವ ಮರಳಿನ ಪ್ರಮಾಣವನ್ನು ನಮೂದಿಸಿ ಆನ್‌ಲೈನ್ ಮುಖಾಂತರ ಹಣ ಪಾವತಿ ಮಾಡಬಹುದಾಗಿದೆ.

ಇದೊಂದು ಸರಳ ಹಾಗೂ ಪಾರದರ್ಶಕ ಪ್ರಕ್ರಿಯೆಯಾಗಿದ್ದು, ಉಡುಪಿ ಜಿಲ್ಲೆಯ ಸಾರ್ವಜನಿಕರು ಇದರ ಉಪಯೋಗ ಪಡೆಯಬಹುದಾಗಿದೆ. Sand App Contact No: 6366745888, 6364024555 (App related queries), 6366871888 (Accounts related queries) ಆಗಿರುತ್ತದೆ.

ಅದರಂತೆ ಸಾರ್ವಜನಿಕರು ಮೇಲ್ಕಂಡ ಸೇವೆಗಳ ಸದುಪಯೋಗ ಪಡೆದುಕೊಳ್ಳಲು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.