Home ಸುದ್ಧಿಗಳು ಪ್ರಾದೇಶಿಕ ಚುನಾವಣಾ ಸಾಕ್ಷರತೆ: ತಾಲೂಕು ಮಟ್ಟದ ಸ್ಪರ್ಧೆಗಳ ಫಲಿತಾಂಶ

ಚುನಾವಣಾ ಸಾಕ್ಷರತೆ: ತಾಲೂಕು ಮಟ್ಟದ ಸ್ಪರ್ಧೆಗಳ ಫಲಿತಾಂಶ

808
0

ಮಲ್ಪೆ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಸಾಕ್ಷರತೆ ಆಂದೋಲನದ ಅಂಗವಾಗಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ
ಕೇಂದ್ರ ತೆಂಕನಿಡಿಯೂರು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕನ್ನಡ, ಇಂಗ್ಲಿಷ್ ಪ್ರಬಂಧ ಹಾಗೂ ಭಿತ್ತಿಚಿತ್ರ ಸ್ಪರ್ಧೆಯನ್ನು ತಾಲೂಕುವಾರು ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ಪರ್ಧೆಯ ಉದ್ದೇಶಗಳನ್ನು ವಿವರಿಸಿದರು. ಮತದಾರರ ಸಾಕ್ಷರತಾ ಕ್ಲಬ್‌ನ ಸಂಚಾಲಕ ಮಂಜುನಾಥ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಐಕ್ಯೂಎಸಿ ಸಂಚಾಲಕರಾದ ಡಾ. ಸುರೇಶ್ ರೈ ಕೆ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಪ್ರತಿಮಾ ವಂದಿಸಿದರು. ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ 100 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದರು.

ತಾಲೂಕುವಾರು ವಿಜೇತರ ವಿವರಗಳು ಈ ಕೆಳಗಿನಂತಿದೆ.

ಉಡುಪಿ: ಕನ್ನಡ ಪ್ರಬಂಧ – ಪ್ರಥಮ: ನಿಶಾ ಎನ್ ಬಂಗೇರ- ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು. ದ್ವಿತೀಯ: ಗಣೇಶ್ – ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು. ತೃತೀಯ: ನಿಕ್ಷಿತಾ ಸಿ- ಪೂರ್ಣಪ್ರಜ್ಞಾ ಕಾಲೇಜು ಉಡುಪಿ, ಚೈತನ್ಯಾ– ಮಾಧವ ಪೈ ಮೆಮೋರಿಯಲ್ ಕಾಲೇಜು ಮಣಿಪಾಲ.

ಇಂಗ್ಲೀಷ್ ಪ್ರಬಂಧ: ಪ್ರಥಮ- ನಿಶಾ ಎನ್ ಬಂಗೇರ – ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು. ದ್ವಿತೀಯ: ಚೈತ್ರಾ ಶ್ರೀಧರ ಭಟ್ – ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜು ಉಡುಪಿ, ಶ್ರೀನಿತ್ಯ ಕಾರಂತ – ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜು ಉಡುಪಿ. ತೃತೀಯ- ಕಾರ್ತಿಕ್ ಹೆಚ್ ಆರ್ – ಮಾಧವ ಪೈ ಮೆಮೋರಿಯಲ್ ಕಾಲೇಜು ಮಣಿಪಾಲ.

ಭಿತ್ತಿಚಿತ್ರ: ಪ್ರಥಮ- ಸಮೀಕ್ಷಾ – ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು. ದ್ವಿತೀಯ- ದಿವ್ಯಾ ಶೆಟ್ಟಿ – ಪೂರ್ಣಪ್ರಜ್ಞಾ ಕಾಲೇಜು ಉಡುಪಿ. ತೃತೀಯ- ಶ್ಯದ್ಧಾ – ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು.

ಕುಂದಾಪುರ: ಕನ್ನಡ ಪ್ರಬಂಧ: ಪ್ರಥಮ-ನಿತೀಶ್- ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟೇಶ್ವರ. ದ್ವಿತೀಯ: ಸುಧೀರ್ ಜಿ.ಟಿ. ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕೆರೆ. ತೃತೀಯ: ರೇಷ್ಮ- ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟೇಶ್ವರ. ಇಂಗ್ಲೀಷ್ ಪ್ರಬಂಧ: ಪ್ರಥಮ- ಮಲ್ಲಿಕಾರ್ಜುನ ಎಂ – ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟೇಶ್ವರ.

ಕಾರ್ಕಳ: ಕನ್ನಡ ಪ್ರಬಂಧ: ಪ್ರಥಮ- ಶ್ರೀನಿಧಿ ನಾಯಕ್ – ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳ.
ದ್ವಿತೀಯ- ಸೌಜನ್ಯ ನಾಯಕ್ – ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳ. ಇಂಗ್ಲೀಷ್ ಪ್ರಬಂಧ: ಪ್ರಥಮ: ಸೋನಾ – ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳ. ದ್ವಿತೀಯ: ಹರ್ಷಿತಾ ಎಂ. ನಾಯ್ಕ್, – ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳ. ಭಿತ್ತಿಚಿತ್ರ: ಪ್ರಥಮ-ದೀಕ್ಷಿತಾ – ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳ. ದ್ವಿತೀಯ- ಲತಾ ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳ.

ಹೆಬ್ರಿ: ಕನ್ನಡ ಪ್ರಬಂಧ: ಪ್ರಥಮ- ಅಕ್ಷಿತಾ ಕೆ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ.
ದ್ವಿತೀಯ- ಅಶ್ವಿನಿ ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ. ಇಂಗ್ಲಿಷ್ ಪ್ರಬಂಧ: ಪ್ರಥಮ-ಸ್ವಾತಿ ಎಸ್. ನಾಯಕ್, – ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ. ದ್ವಿತೀಯ- ಕೆ. ಶಿವಾನಿ, – ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ.

ಕಾಪು: ಕನ್ನಡ ಪ್ರಬಂಧ: ಪ್ರಥಮ : ಪ್ರತೀಕ್ಷಾ ಆಚಾರ್ಯ– ಎಂ.ಎಸ್.ಆರ್ ಎಸ್ ಕಾಲೇಜು ಶಿರ್ವ. ದ್ವಿತೀಯ- ವಾಣಿ ಹೆಚ್ ಎಂ, – ಎಂ.ಎಸ್.ಆರ್ ಎಸ್ ಕಾಲೇಜು ಶಿರ್ವ. ತೃತೀಯ- ಶೈಲಜಾ- ಎಂ.ಎಸ್.ಆರ್ ಎಸ್ ಕಾಲೇಜು ಶಿರ್ವ.

ಇಂಗ್ಲೀಷ್ ಪ್ರಬಂಧ: ಪ್ರಥಮ- ರಚಿತ್ ಶೆಣೈ– ಎಂ.ಎಸ್.ಆರ್ ಎಸ್ ಕಾಲೇಜು ಶಿರ್ವ. ದ್ವಿತೀಯ- ವೈಶಾಖ್ ಹೆಬ್ಬಾರ್ – ಎಂ.ಎಸ್.ಆರ್ ಎಸ್ ಕಾಲೇಜು ಶಿರ್ವ. ಭಿತ್ತಿಚಿತ್ರ- ಪ್ರಥಮ- ದೀಪಾ ಯೋಗೀಶ್ ಸಾಲ್ಯಾನ್– ಎಂ.ಎಸ್.ಆರ್ ಎಸ್ ಕಾಲೇಜು ಶಿರ್ವ. ದ್ವಿತೀಯ- ಪ್ರತೀಕ್ – ಎಂ.ಎಸ್.ಆರ್ ಎಸ್ ಕಾಲೇಜು, ಶಿರ್ವ.

ಬೈಂದೂರು: ಕನ್ನಡ ಪ್ರಬಂಧ: ಪ್ರಥಮ- ಪವಿತ್ರ – ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು. ದ್ವಿತೀಯ: ಚಿನ್ಮಯ ಎನ್ ಎಸ್ -ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು. ಇಂಗ್ಲೀಷ್ ಪ್ರಬಂಧ: ಪ್ರಥಮ- ಅನುಶ್ರೀ – ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು. ದ್ವಿತೀಯ: ಲತಾ ಗಣಪತಿ ದೇವಾಡಿಗ -ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು. ಭಿತ್ತಿಚಿತ್ರ: ಪ್ರಥಮ- ಚಂದನ್ – ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು.

ಬ್ರಹ್ಮಾವರ: ಕನ್ನಡ ಪ್ರಬಂಧ : ಪ್ರಥಮ- ನವನೀತ್ – ಎಸ್. ಎಂ. ಎಸ್ ಕಾಲೇಜು ಬ್ರಹ್ಮಾವರ. ದ್ವಿತೀಯ- ವಿದ್ಯಾಶ್ರೀ – ಎಸ್. ಎಂ. ಎಸ್ ಕಾಲೇಜು ಬ್ರಹ್ಮಾವರ. ಇಂಗ್ಲೀಷ್ ಪ್ರಬಂಧ: ಪ್ರಥಮ-ಮೊಹಮ್ಮದ್ ತಸೀರ್ ಕ್ರಾಸ್‌ಲ್ಯಾಂಡ್ ಕಾಲೇಜು ಬ್ರಹ್ಮಾವರ. ಭಿತ್ತಿಚಿತ್ರ: ಪ್ರಥಮ- ಮೊಹಮ್ಮದ್ ತಬೀಶ್ ಮಯ್ಯಾದಿ–ಕ್ರಾಸ್‌ಲ್ಯಾಂಡ್ ಕಾಲೇಜು ಬ್ರಹ್ಮಾವರ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.