Saturday, January 18, 2025
Saturday, January 18, 2025

ಕೆ.ಎಂ.ಸಿ ಮಣಿಪಾಲ- ಸೈಕಲ್ ಜಾಥಾ

ಕೆ.ಎಂ.ಸಿ ಮಣಿಪಾಲ- ಸೈಕಲ್ ಜಾಥಾ

Date:

ಮಣಿಪಾಲ: ಪ್ರತಿ ವರ್ಷ 14 ನವೆಂಬರ್ ಮಧುಮೇಹ ದಿನವನ್ನಾಗಿ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಂತಃಸ್ರಾವಶಾಸ್ತ್ರ (ಎಂಡೋ ಕ್ರೈ ನೊಲೊಜಿ) ವಿಭಾಗವು ಇದರ ಅಂಗವಾಗಿ ಸೈಕಲ್ ಜಾಥ ಕಾರ್ಯಕ್ರಮವನ್ನು ಇಂದು ಆಯೋಜಿಸಿತು. 

ಮಧುಮೇಹ ಆರೈಕೆಯ ಸಾರ್ವತ್ರಿಕ ಲಭ್ಯತೆ, ಈಗ ಇಲ್ಲದಿದ್ದರೆ, ಯಾವಾಗ? ಎಂಬುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್.ಬಲ್ಲಾಲ್ ಅವರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಹೊರರೋಗಿ ವಿಭಾಗದ ಮುಂದೆ ಸೈಕಲ್ ಜಾಥಕ್ಕೆ ಚಾಲನೆ ನೀಡಿದರು. 

ಮಣಿಪಾಲದಿಂದ ಆರಂಭವಾದ ಜಾಥವು, ಸಿಂಡಿಕೇಟ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ಬನ್ನಂಜೆ, ಕರಾವಳಿ ಸರ್ಕಲ್, ಅಂಬಲಪಾಡಿ, ಬ್ರಹ್ಮಗಿರಿ ಮೂಲಕ ಅಜ್ಜರಕಾಡು ಕ್ರೀಡಾಂಗಣದಲ್ಲಿ ಸಮಾಪನಗೊಂಡಿತು. ಭಾಗವಹಿಸಿದವರಿಗೆ ಕ್ರೀಡಾಂಗಣದಲ್ಲಿ ಜುಂಬಾ ಸೆಷನ್‌ಗಳನ್ನು ಆಯೋಜಿಸಲಾಗಿತ್ತು. 500 ಕ್ಕೂ ಹೆಚ್ಚು ಜನರು ಸೈಕಲ್ ನೊಂದಿಗೆ ಭಾಗವಹಿಸಿದ್ದರು

ತದನಂತರ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾಹೆ ಮಣಿಪಾಲ ಸಹ ಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್, ಆರೋಗ್ಯವಿಜ್ಞಾನ ಸಹ ಕುಲಪತಿ ಡಾ. ಪಿ ಎಲ್ ಎನ್ ಜಿ ರಾವ್, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ನ ಡೀನ್ ಡಾ. ಅರುಣ್ ಮಯ್ಯ, ಕೆಎಂಸಿ ಡೀನ್ ಡಾ. ಶರತ್ ಕೆ ರಾವ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹ ನಿರ್ದೇಶಕರಾದ ಡಾ. ರೋಶನ್  ಶೆಟ್ಟಿ, ಮುಖ್ಯ ನಿರ್ವಹಣಾಧಿಕಾರಿಗಳಾದ ಸಿ ಜಿ ಮುತ್ತಣ್ಣ, ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಮತ್ತು ಅಂತಃಸ್ರಾವಶಾಸ್ತ್ರ (ಎಂಡೋ ಕ್ರೈ ನೊಲೊಜಿ) ವಿಭಾಗದ ಮುಖ್ಯಸ್ಥರಾದ ಡಾ.ಸಹಾನಾ ಶೆಟ್ಟಿ ಅವರು ಉಪಸ್ಥಿತರಿದ್ದರು.
 
ಸಮಾರೋಪ  ಸಮಾರಂಭದಲ್ಲಿ  ಮಾತನಾಡಿದ ಡಾ ಬಲ್ಲಾಳ್ ಅವರು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡವು ಜೀವನದ ಮೌನ ಕೊಲೆಗಾರರಾಗಿದ್ದು, ಸಾಮಾನ್ಯ ಜನರಿಗೆ ರೋಗದ ತೀವ್ರತೆ ಅರ್ಥವಾಗುವುದಿಲ್ಲ. ಬಹಳ ಮುಖ್ಯವಾಗಿ ಶೇಕಡ 50ರಷ್ಟು ಮಧುಮೇಹ ರೋಗಿಗಳಿಗೆ ಆರಂಭಿಕ ಹಂತದಲ್ಲಿ ಪತ್ತೆ ಆಗಿರುವುದಿಲ್ಲ. 

ಮಧುಮೇಹವು ದೇಹದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರಂಭಿಕ ಹಂತದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದರ ಅರಿವು ಮತ್ತು ರೋಗ ಪತ್ತೆ ನಡೆಯುವುದು ಮುಖ್ಯವಾಗಿದೆ ಎಂದರು.

ಡಾ. ಪಿ ಎಲ್ ಎನ್ ಜಿ ರಾವ್ ಮಾತನಾಡುತ್ತಾ, ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸುವುದು. ಜೀವನಶೈಲಿ ರೋಗದಿಂದ ತಡೆಗಟ್ಟಲು ಇದು ಮುಖ್ಯವಾಗಿದೆ. ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ತಂಡವನ್ನು ಅಭಿನಂದಿಸುತ್ತೇನೆ ಎಂದರು.

ಡಾ. ಅರುಣ್ ಮಯ್ಯ ಅವರು ಮಾತನಾಡಿ, ಮಧುಮೇಹ ರೋಗಿಗಳಿಗೆ ಪಾದದ ತಪಾಸಣೆ ಕೂಡ ಬಹಳ ಮುಖ್ಯ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ, ಮಧುಮೇಹ ಪಾದದ ಆರಂಭಿಕ ತಪಾಸಣೆ, ಮೌಲ್ಯಮಾಪನ ಮತ್ತು ನಿರ್ವಹಣೆಗೆ ವಿಶೇಷ ಘಟಕವಿದೆ.

ಮಣಿಪಾಲದ ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನಾ ವಿಭಾಗದಲ್ಲಿ ವಿಶ್ವ ಮಧುಮೇಹ ದಿನಾಚರಣೆಯ ಆಂಗವಾಗಿ ನವೆಂಬರ್ 15 ರಿಂದ 19ರ ವರೆಗೆ ಮಧುಮೇಹಿಗಳಿಗಾಗಿ ಉಚಿತ ಪಾದದ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು

ಡಾ ರೋಶನ್ ಶೆಟ್ಟಿ ಅವರು ಮಾತನಾಡುತ್ತಾ, ಈ ಕ್ರೀಡಾಂಗಣಕ್ಕೆ ಬಹಳಷ್ಟು ಜನರು ಬೇರೆ ಬೇರೆ ದೈಹಿಕ ಚಟುವಟಿಕೆಗಳಿಗಾಗಿ ಬರುತ್ತಾರೆ. ಇದರಲ್ಲಿ ಹೆಚ್ಚಿನವರು 40 ವರ್ಷ ದಾಟಿದವರು. ಆದರೆ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಈಗ ತುಂಬಾ ಸಣ್ಣ ವಯಸ್ಕರಲ್ಲಿ ಕಂಡು ಬರುತ್ತಿವೆ.

ಇದಕ್ಕೆ ಕಾರಣ ಮಕ್ಕಳಿಗೆ ಮತ್ತು ಯುವಕರಿಗೆ ದೈಹಿಕ ಚಟುವಟಿಕೆಗಳು ಸಿಗದೇ ಇರುವದು. ಆದ್ದರಿಂದ ಸಮಯ ಸಿಕ್ಕಾಗಲೆಲ್ಲಾ ಮಕ್ಕಳು ಮತ್ತು ಯುವಕರು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು  
 
ಡಾ. ಸಹಾನಾ ಶೆಟ್ಟಿ ಅವರು ಕಾರ್ಯಕ್ರಮದ ಬಗ್ಗೆ ಅವಲೋಕನ ನೀಡಿದರು ಮತ್ತು ಡಾ. ಅವಿನಾಶ್ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!