Home ಸುದ್ಧಿಗಳು ಪ್ರಾದೇಶಿಕ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಕಾರ್ಯಕ್ರಮ

ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಕಾರ್ಯಕ್ರಮ

361
0

2021-22 ನೇ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಕಾರ್ಯಕ್ರಮದಡಿ ಉಡುಪಿ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ವೈಪರಿತ್ಯದಿಂದಾಗಿ ಉಂಟಾಗುವ ಬೆಳೆ ನಷ್ಟಕ್ಕೆ ಮುಂಗಾರು ಹಂಗಾಮಿಗೆ ಈ ಯೋಜನೆಯಡಿ ನೊಂದಣಿ ಮಾಡಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಲಾಗಿದ್ದು ರೈತರ ಪಹಣಿಯಲ್ಲಿ ಬೆಳೆ ಸಮೀಕ್ಷೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ನಮೂದಾಗಿರುವ ಬೆಳೆ ವಿಸ್ತೀರ್ಣಕ್ಕೆ ಅನುಗುಣವಾಗಿ ವಿಮಾ ಮೊತ್ತವನ್ನು ಪಾವತಿಸಿ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ಯೋಜನೆಯಲ್ಲಿ ನೊಂದಣಿ ಮಾಡಿಸಲು ಜೂನ್ 30 ಅಂತಿಮ ದಿನವಾಗಿದ್ದು, ರೈತರು ವಿಮಾ ಕಂತುಗಳನ್ನು ಪಾವತಿಸಲು ನಿಗದಿತ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್ ಮತ್ತುಡಿಜಿಟಲ್ ಇ-ಸೇವಾ ಕೇಂದ್ರಗಳಿಗೆ ಸಂಪರ್ಕಿಸಲುಕೋರಿದೆ. ಈ ಬೆಳೆ ವಿಮಾ ಯೋಜನೆಯಲ್ಲಿ ಗ್ರಾಮ ಪಂಚಾಯತ್ ಗಳನ್ನು ವಿಮಾ ಘಟಕಗಳಾಗಿ ಸರ್ಕಾರದ ಆದೇಶದಲ್ಲಿ ಅಧಿಸೂಚಿಸಲಾಗಿದ್ದು ಅಡಿಕೆ ಹಾಗೂ ಕಾಳುಮೆಣಸು ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಪಾಲ್ಗೊಳ್ಳಬಹುದಾಗಿದ್ದು ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆಯು ಐಚ್ಚಿಕವಾಗಿದ್ದು ಬೆಳೆ ಸಾಲ ಪಡೆದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳದೇ ಇರಲು ಇಚ್ಚಿಸಿದಲ್ಲಿ ನೊಂದಣಿಯ ಅಂತಿಮ ದಿನಾಂಕದ ಒಂದು ವಾರದೊಳಗೆ ಅರ್ಜಿಯನ್ನು ಬೆಳೆ ಸಾಲ ಪಡೆದ ಹಣಕಾಸು ಸಂಸ್ಥೆಗೆ ನೀಡಬೇಕಾಗಿರುತ್ತದೆ.

ವಿಮೆ ಮಾಡಿಸಿರುವ ರೈತರಿಗೆ ವಿಮೆ ಮಾಡಲ್ಪಟ್ಟ ಬೆಳೆಗಳಿಗೆ ಜುಲೈ 01 2021 ರಿಂದ ಜೂನ್ 30 2022 ರವರೆಗೆ ವಿಮೆ ರಕ್ಷಣೆಯ ಅವಧಿ ಇದ್ದು ನಿಗದಿತ ಟರ್ಮ್ ಶೀಟ್ ಹಾಗೂ ನಷ್ಟ ಲೆಕ್ಕಾಚಾರದ ಕಾಲಮಿತಿಯೊಳಗೆ ಹವಾಮಾನ ವೈಪರಿತ್ಯಗಳಿಂದಾಗಿ ಬೆಳೆ ನಷ್ಟ ಉಂಟಾದಲ್ಲಿ ನಷ್ಟ ಪರಿಹಾರವನ್ನು ವಿಮೆ ರಕ್ಷಣೆಯ ಅವಧಿ ಮುಗಿದ 45 ದಿನಗಳೊಳಗಾಗಿ ವಿಮಾ ಕಂಪೆನಿಯು ನಷ್ಟ ಪರಿಹಾರವನ್ನು ಪಾವತಿಸಬೇಕಾಗಿರುತ್ತದೆ.

ವಿಮಾ ಕಂಪನಿಯ ಹೆಸರು: ಅಗ್ರಿಕಲ್ಚರ್‌ ಇನ್ಸುರೆನ್ಸ್ ಕಂಪನಿ(AIC)ಬೆಳೆ ಪ್ರತಿ ಹೆಕ್ಟೆರ್‌ಗೆ ವಿಮಾ ಮೊತ್ತ ರೂ.ಗಳಲ್ಲಿ 128000 ರೈತರು ಪಾವತಿಸಬೇಕಾದ ವಿಮಾಕಂತು (ಶೇ.5) ರೂ.ಗಳಲ್ಲಿ 6400, ಕರಿಮೆಣಸು ಪ್ರತಿ ಹೆಕ್ಟೆರ್ ಗೆ ವಿಮಾ ಮೊತ್ತರೂ. 47000, ರೈತರು ಪಾವತಿಸಬೇಕಾದ ವಿಮಾ ಕಂತು(ಶೇ.5) ರೂಗಳಲ್ಲಿ 2350 ಆಗಿದೆ.
ವಿಮಾ ನಷ್ಟ ಪರಿಹಾರವು ADHAR ENABLED PAYMENT SYSTEM (AEPS) ಮುಖಾಂತರ ಆಗುವುದರಿಂದ ವಿಮಾ ಅರ್ಜಿಯಲ್ಲಿ ಸಕ್ರಿಯ ಆಧಾರ್ ಮಾಹಿತಿಯನ್ನು ನೀಡಬೇಕಾಗಿರುತ್ತದೆ.

ಬೆಳೆ ಸಾಲ ಹೊಂದಿಲ್ಲದ ರೈತರು ಆಧಾರ್ ಮಾಹಿತಿಯೊಂದಿಗೆ ಜಮೀನಿನ ಪಹಣಿ ಪತ್ರಿಕೆ ಪ್ರತಿ, ಉಳಿತಾಯ ಖಾತೆ ಮಾಹಿತಿ ದಾಖಲೆಗಳು, ಸ್ವಯಂಘೋಷಣೆ ನಮೂನೆಗಳನ್ನು ಪ್ರಿಮಿಯಂ ಮೊತ್ತದೊಂದಿಗೆ ಹಣಕಾಸು ಸಂಸ್ಥೆಗಳಿಗೆ ಸಲ್ಲಿಸಿ ನೊಂದಣಿ ಮಾಡಿಸಬೇಕಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ವಾಣಿಜ್ಯ/ಗ್ರಾಮೀಣ ಸಹಕಾರಿ ಬ್ಯಾಂಕ್/ಹೋಬಳಿ ರೈತ ಸಂಪರ್ಕ ಕೇಂದ್ರ/ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು/ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.